Advertisement

ಕೋವಿಡ್ ಹಿನ್ನೆಲೆ : ಮೇ ತಿಂಗಳಲ್ಲಿ ಆಫ್ ಲೈನ್ ಪರೀಕ್ಷೆಗಳು ಬೇಡ : ಯುಜಿಸಿ

02:36 PM May 07, 2021 | Team Udayavani |

ನವದೆಹಲಿ : ದೇಶದಲ್ಲಿ ಕೋವಿಡ್ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪದವಿಗೆ ಆಫ್ ಲೈನ್ ಮೂಲಕ ಪರೀಕ್ಷೆ ನಡೆಸುವುದು ಬೇಡ ಎಂದ ಯುಜಿಸಿ ಮನವಿ ಮಾಡಿದೆ. ಆನ್ಲೈನ್ ಅಥವಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಮೇ ತಿಂಗಳ ನಂತರ ಪರೀಕ್ಷಾ ಕ್ರಮಕ್ಕೆ ನಿರ್ಧರಿಸಲು ಸೂಚನೆ ನೀಡಿದೆ.

Advertisement

ಸದ್ಯ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿರುವ ಯುಜಿಸಿ ಮೇ 2021ರಲ್ಲಿ ಯಾವುದೇ ಆಫ್ ಲೈನ್ ಪರೀಕ್ಷೆಗಳನ್ನು ಮಾಡುವುದು ಬೇಡ ಎಂದಿದೆ.

ಕ್ಯಾಂಪನ್ ನಲ್ಲಿ ವಿದ್ಯಾರ್ಥಿಗಳು ಗುಂಪು ಸೇರದಂತೆ ನೋಡಿಕೊಳ್ಳಿ. ಅಲ್ಲದೆ ಯಾವುದೇ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದ್ದರೆ ಅವರಿಗೆ ವಿನಾಯಿತಿ ನೀಡಿ ಎಂದು ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next