Advertisement

China ದೂರವಿಡಿ: ಪಾಕಿಸ್ಥಾನ ಸೇನಾ ಮುಖ್ಯಸ್ಥರಿಗೆ ಅಮೆರಿಕ ಸೂಚನೆ

12:43 AM Dec 19, 2023 | Team Udayavani |

ಇಸ್ಲಾಮಾಬಾದ್‌: ಚೀನವನ್ನು ನಿಯಂತ್ರಿಸಿ; ಭಾರತದ ಜತೆಗೆ ಶಾಂತಿ ಮತ್ತು ವ್ಯಾಪಾರ ವೃದ್ಧಿಗೊಳಿಸಿ ಎಂದು ಪಾಕಿಸ್ಥಾನಕ್ಕೆ ಅಮೆರಿಕ ಸರಕಾರ ಕಿವಿಮಾತು ಹೇಳಿದೆ.

Advertisement

ಅಮೆರಿಕ ಪ್ರವಾಸದಲ್ಲಿ ಇರುವ ಪಾಕ್‌ ಸೇನಾ ಮುಖ್ಯಸ್ಥ ಜ. ಸಯ್ಯದ್‌ ಅಸೀಂ ಮುನೀರ್‌ ಅವರೊಂದಿಗೆ ಮಾತುಕತೆ ನಡೆ ಸಿದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌, ರಕ್ಷಣ ಸಚಿವ ಲೊಲೊಯ್ಡ ಆಸ್ಟಿನ್‌, “ಪಾಕ್‌ನಲ್ಲಿ ಚೀನ ಆರ್ಥಿಕ ಕಾರಿಡಾರ್‌ ನಿರ್ಮಾಣದ ನೆಪದಲ್ಲಿ ಸಾಲ ನೀಡುವಿಕೆ, ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಿಂದ ಮುಂದೆ ನಿಮಗೇ ಆಪತ್ತು ಎದುರಾಗಲಿದೆ. ಅದಕ್ಕೆ ಅವಕಾಶ ಕೊಡಬೇಡಿ. ಹಾಗೆಯೇ ಭಾರತದ ಜತೆಗೆ ಶಾಂತಿ ಸ್ಥಾಪನೆಗೆ ಆದ್ಯತೆ ಮತ್ತು ವ್ಯಾಪಾರ ವೃದ್ಧಿಗೊಳಿಸುವ ಬಗ್ಗೆ ಸರಕಾರ ಮನಸ್ಸು ಮಾಡಲಿ’ ಎಂದಿದ್ದಾರೆ.

ಬಲೂಚಿನಸ್ಥಾನ ವ್ಯಾಪ್ತಿಯಲ್ಲಿ ಇರುವ ಗ್ವದಾರ್‌ ಬಂದರ್‌ನಲ್ಲಿ ಸೇನಾ ನೆಲೆ ಸ್ಥಾಪಿಸಲು ಚೀನ ಇತ್ತೀಚೆಗೆ ಅನುಮತಿ ಕೋರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next