Advertisement

ಮೊಬೈಲ್‌ ಗೀಳಿಂದ ಮಕ್ಕಳನ್ನು ದೂರವಿಡಿ

03:40 PM Jan 03, 2023 | Team Udayavani |

ಚಿಕ್ಕಬಳ್ಳಾಪುರ: ದುರಾಭ್ಯಾಸ ಕಲಿಸೋದು ಸುಲಭ ಅದನ್ನು ಬಿಡಿಸೋದು ತುಂಬಾ ಕಷ್ಟ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ತಿಳಿಸಿದರು.

Advertisement

ಅವರು ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಆರ್‌ಟಿಇ ಪೋಕ್ಸೋ ಮತ್ತು ಬಾಲನ್ಯಾಯ ಕಾಯ್ದೆ-2015ರ ಅನುಷ್ಠಾನದ ಕುರಿತು ಹಾಗೂ ಜಿಲ್ಲೆಯಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿವಿಧ ಇಲಾಖೆಗಳಿಂದ ಮಕ್ಕಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಚರ್ಚಿಸಲು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಕಲಿಕೆಯ ಉದ್ದೇಶಕ್ಕೆ ಮತ್ತು ಊಟ, ತಿಂಡಿ ತಿನ್ನಿಸಲಿಕ್ಕೆ ಅಥವಾ ಮನರಂಜನೆಯ ಉದ್ದೇಶಕ್ಕೆ ಮೊಬೈಲ್‌ ಬಳಕೆಗೆ ಉತ್ತೇಜನ ನೀಡಿ ಅಭ್ಯಾಸ ಮಾಡಿ ಸುವುದು ಸುಲಭ. ಆದರೆ ಗೀಳಿಗೆ ಒಳಪಟ್ಟರೆ ಬಿಡಿಸುವುದು ತುಂಬಾ ಕಷ್ಟ. ಹಿಂದಿನ ಕಾಲದಲ್ಲಿ ಕುಂಟೆಬಿಲ್ಲೆ, ಲಗೋರಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚಾಲೆ, ಚೌಕಮಣಿ ಸೇರಿದಂತೆ ಇನ್ನಿತರೆ ಗ್ರಾಮೀಣ ಕ್ರೀಡೆ ಗಳನ್ನು ಆಟವಾಡುವ ಮೂಲಕ ಮಕ್ಕಳು ಮಾನಸಿಕ ವಾಗಿ ಮತ್ತು ದೈಹಿಕವಾಗಿ ಸದೃಢವಾಗಿ ಬೆಳವಣಿಗೆಯಾಗುತ್ತಿದ್ದರು. ಇಂದು ಮಕ್ಕಳ ಕೈಗೆ ಮೊಬೈಲ್‌ ಗೈಮುಗಳು ಬಂದು ಜ್ಞಾಪಕ ಶಕ್ತಿಯನ್ನು ಕಳೆದು ಕೊಳ್ಳುತ್ತಿದ್ದಾರೆ. ಆದ್ದರಿಂದ ಅಂಗನವಾಡಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಬೆಳವಣಿಗೆ ಪೂರಕ ವಾದ ಕ್ರೀಡೆಗಳನ್ನು ತಮ್ಮ ಪರಿಮಿತಿಯಲ್ಲಿ ಆಡಿಸ ಬೇಕು. ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ವಿತರಣೆಯಾಗುವ ಪೌಷ್ಟಿಕ ಆಹಾರ ಸಾಮಗ್ರಿಗಳು ಸಮರ್ಪಕವಾಗಿ ವಿತರಣೆಯಾಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮೊಳಕೆಕಾಳು, ಹಣ್ಣು, ಸೊಪ್ಪು, ತರಕಾರಿಯುಕ್ತ ಆಹಾರ ಉತ್ಪನ್ನಗಳನ್ನು ಬಳಸದೆ ಜಂಕ್‌ ಫುಡ್‌ಗೆ ಮಾರು ಹೋಗುತ್ತಿದ್ದಾರೆ. ಪ್ರೋಟಿನ್‌, ವಿಟಮಿನ್‌ ಸೇವನೆಯಿಂದ ವಂಚಿತರಾಗು ತ್ತಿದ್ದಾರೆ. ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ವೈದ್ಯರುಗಳು ತಾವು ಸ್ವತಃ ಪೌಷ್ಠಿಕ ಆಹಾರ ಸೇವನೆ ಯನ್ನು ಮಾಡುವುದರ ಜೊತೆಗೆ ಇತರರಿಗೂ ಪ್ರೇರೆಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳಿಗೆ ಸೂಕ್ತ ಸ್ವತ್ಛ ವಾತಾವರಣ ಕಲ್ಪಿಸಿ, ಪೌಷ್ಠಿಕ ಊಟ, ತಿಂಡಿ ನೀಡಬೇಕು. ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಶಿಸ್ತು, ಸ್ವತ್ಛತೆ, ಸಂಸ್ಕಾರ, ಹಾಗೂ ಮೌಲ್ಯಯುತ ಜೀವನ ವಿಧಾನ ವನ್ನು ಹೇಳಿ ಕೊಡಬೇಕು. ಮಕ್ಕಳನ್ನು ಶಿಕ್ಷಿಸುವುದರ ಮೂಲಕ ಶಿಕ್ಷಣ ನೀಡುವುದಲ್ಲ ಮನವೊಲಿಸಿ ತಿದ್ದುವ ಕೆಲಸ ಆಗಬೇಕು. ಒಳ್ಳೆ ಕಥೆಗಳನ್ನು ಕೇಳುವುದರಿಂದ ಕೆಟ್ಟ ಕೆಲಸಗಳನ್ನು ಮಾಡುವುದು ಕಡಿಮೆ ಆಗುತ್ತದೆ ಎಂದರು.

Advertisement

ಜಿಪಂ ಸಿಇಒ ಪಿ.ಶಿವಶಂಕರ್‌, ಅಪರ ಜಿಲ್ಲಾಧಿಕಾರಿ ಡಾ. ಎನ್‌.ತಿಪ್ಪೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮರಾಜ್‌ ಅರಸ್‌, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಅಶ್ವತ್ಥಮ್ಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸಮಿತಿ ಕಾರ್ಯಗಳ ಬಲವರ್ಧನೆ ಅಗತ್ಯ : 2022 ಏ. 22 ರಿಂದ ನವೆಂಬರ್‌ ಅಂತ್ಯದವರೆಗೆ ಬಾಲ್ಯವಿವಾಹ ಬಗ್ಗೆ 77 ದೂರುಗಳು ಬಂದಿದ್ದವು. ಈ ಪೈಕಿ 73 ಬಾಲ್ಯವಿವಾಹಗಳನ್ನು ತಡೆಗಟ್ಟಲಾ ಗಿದೆ. 4 ಬಾಲ್ಯವಿವಾಹಗಳು ಜರುಗಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬಾಲ್ಯ ವಿವಾಹ ಹಾಗೂ ಇನ್ನಿತರ ದೌರ್ಜನ್ಯ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮತ್ತು ಗ್ರಾಪಂಗಳ ಮಟ್ಟದ ಸಮಿತಿಗಳ ಕಾರ್ಯಗಳನ್ನು ಬಲವರ್ಧಿಸಬೇಕು. ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಗಳು ಜಿಲ್ಲಾದ್ಯಂತ ನಡೆಸು ವಂತಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next