Advertisement
ಶೂಗಳುಓಟಕ್ಕೆ ಹೊಸಬರಾಗಿದ್ದರೆ ಗಾಯಗಳಾಗದಂತೆ ಶೂ ಧರಿಸುವುದು ಅತ್ಯಗತ್ಯ. ಹೀಗಾಗಿ ಉತ್ತಮ ಗುಣಮಟ್ಟದ ಮತ್ತು ನಿಮ್ಮ ಕಾಲಿಗೆ ಸೂಕ್ತವಾದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.
ಆರಂಭದಲ್ಲೇ ವೇಗವಾಗಿ ಓಡುವುದರಿಂದ ಅಂತಿಮ ಸಮಯದಲ್ಲಿ ಸುಸ್ತು ಆವರಿಸುತ್ತದೆ. ಹೀಗಾಗಿ ಪ್ರಾರಂಭದಲ್ಲಿ ನಿಧಾನವಾಗಿ ಸಮಯ ಕಳೆದಂತೆ ವೇಗವನ್ನು
ಹೆಚ್ಚಿಸಿಕೊಂಡು ಓಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ದೊರೆಯುವುದು. ವೇಗವಾಗಿ ಓಡುವಾಗ ಪಾದ ಸರಿಯಾಗಿ ನೆಲ ಮುಟ್ಟುವಂತೆ ಓಡಬೇಕು. ಕೇವಲ ಮುಮ್ಮಡಿಯನ್ನು ನೆಲಕ್ಕೆ ತಾಗಿಸಿ ಓಡಿದರೆ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಟ್ಟೆಗಳು
ಓಡುವಾಗ ಆರಾಮದಾಯಕ ಬಟ್ಟೆಗಳನ್ನು ಧರಿಸಬೇಕು. ಹೆಚ್ಚು ದಪ್ಪದ ಬಟ್ಟೆಗಳು ಓಡುವಾಗ ಸೆಖೆಯ ಅನುಭವ ಕೊಡುತ್ತವೆ. ಜತೆಗೆ ಹೆಚ್ಚು ತೆಳ್ಳಗಿನ ಬಟ್ಟೆಗಳು ಚಳಿಯಿಂದ ಮೈ ಕೊರೆಯುವಂತೆ ಮಾಡುತ್ತವೆ. ಹೀಗಾಗಿ ದೇಹದ ತಾಪಮಾನ ಕಾಪಾಡುವ ಬಟ್ಟೆಗಳ ಆಯ್ಕೆ ಉತ್ತಮ.
Related Articles
ಓಡುವಾಗ ದೇಹದ ಭಂಗಿಯತ್ತಲ ಗಮನಹರಿಸಬೇಕು. ಮುಖ್ಯವಾಗಿ ತೋಳುಗಳು ಹಿಂದೆ, ಮುಂದೆ ಸುಲಭವಾಗಿ ಸ್ವಿಂಗ್ ಆಗಬೇಕು. ಈ ಬಗ್ಗೆ ತಜ್ಞರಿಂದ ಕೇಳಿ ತಿಳಿಯುವುದು ಉತ್ತಮ.
Advertisement
ಉಸಿರಾಟಓಡುವಾಗ ಉಸಿರಾಟದ ಮೇಲೂ ಗಮನವಿರಲಿ. ಬಾಯಿ ಮತ್ತು ಮೂಗಿನ ಮೂಲಕ ಉಸಿರಾಟ ನಡೆಸುತ್ತಿರಬೇಕು. ಹೀಗೆ ಮಾಡಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತದೆ. ಇದರಿಂದ ಬೇಗನೆ ಸುಸ್ತಾಗುವುದಿಲ್ಲ. ನೀರು ಸೇವನೆ
ಬೆಳಗ್ಗೆದ್ದು ಓಡುವವರು ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇಲ್ಲವಾದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.