Advertisement
ಉಳೂ¤ರಿನಲ್ಲಿ ಬತ್ತಿದ ಜಲ ಮೂಲ ಗ್ರಾ.ಪಂ. ವ್ಯಾಪ್ತಿಯ ಉಳೂ¤ರು ತೆಂಕಬೆಟ್ಟು, ದೇವಸ್ಥಾನ ಬೆಟ್ಟು, ಉಳೂ¤ರು ನವಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಕಾಡತೊಡಗಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಪರಿಣಾಮವಾಗಿ ಕೆದೂರು ಪ್ರತಾಪ ನಗರ, ಜನತಾ ಕಾಲನಿ, ಮೂಡು ಕೆದೂರು ಭಾಗದಲ್ಲಿ ಈಗಾಗಲೇ ನೀರಿನ ತತ್ವಾರ ಎದುರಾಗಿದೆ.
ಕಳೆದ ಬಾರಿಯೂ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಎಚ್ಚೆತ್ತುಕೊಂಡಿದ್ದ ಸ್ಥಳೀಯಾಡಳಿತ ಮುಂಜಾಗ್ರತವಾಗಿ ಖಾಸಗಿ ಟ್ಯಾಂಕರ್ ಮೂಲಕ ನೀಡುವ ಸರಕಾರದ ಮಾನದಂಡದಂತೆ ಪ್ರತಿ ವ್ಯಕ್ತಿಗೆ 45 ಲೀ. ನೀರಿನಂತೆ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮೀಣ ಭಾಗಗಳಿಗೆ ಒಟ್ಟು 25 ಸಾವಿರ ಲೀಟರ್ ನೀರನ್ನು ಸರಬರಾಜು ಮಾಡಿತ್ತು. ಆದರೆ ಈ ಬಾರಿ ಎಪ್ರಿಲ್ ತಿಂಗಳ ಆರಂಭದಲ್ಲಿಯೇ ಗ್ರಾಮದಲ್ಲಿ ನೀರಿನ ತತ್ವಾರ ಎದುರಾಗಿದ್ದು ಈ ಬಾರಿಯೂ ಅದೇ ಕ್ರಮವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ವಾರಾಹಿ ನೀರು ಬಂದರೆ ಶಾಶ್ವತ ಪರಿಹಾರ
ಮಾರ್ಚ್‌ನಲ್ಲಿಯೇ ನೀರಿನ ಅಭಾವ ಎದುರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ. ಹೂವಿನಕೆರೆಯ ವರೆಗೆ ಬಂದಿರುವ ವಾರಾಹಿ ಕಾಲುವೆ ನೀರು ನಮ್ಮ ಗ್ರಾಮಗಳಿಗೂ ಮುಂದಿನ ದಿನಗಳಲ್ಲಿ ಹರಿಸುವ ಮಹತ್ವದ ಕಾರ್ಯವಾದರೆ ಗ್ರಾಮಸ್ಥರ ಬೇಡಿಕೆಯಂತೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
-ಕೆದೂರು ಸತೀಶ್ ಕಾಮತ್, ಸ್ಥಳೀಯರು
Related Articles
ಗ್ರಾ.ಪಂ.ನ ಸದಸ್ಯರ ನಿರ್ಣಯದಂತೆ ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿರುವ ಗ್ರಾಮೀಣ ಭಾಗಗಳಿಗೆ ಪರಿಶುದ್ಧ ನೀರು ಸರಬರಾಜು ಮಾಡಲಾಗುತ್ತದೆ.
-ಜಯರಾಮ ಶೆಟ್ಟಿ , ಪ್ರಭಾರ ಪಿಡಿಒ, ಕೆದೂರು ಗ್ರಾ.ಪಂ.
Advertisement
– ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ