Advertisement

ಸ್ವತಂತ್ರ ಧರ್ಮಕ್ಕಾಗಿ ಕೇದಾರಶ್ರೀ ಮನವಿ 

06:15 AM Oct 23, 2017 | |

ಬೆಂಗಳೂರು: ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡುವಂತೆ ಕೋರಿ ಶ್ರೀ ಜಗದ್ಗುರು ಮಾನವ ಧರ್ಮ ಸಂಸ್ಥಾನದ ಶ್ರೀ ಕೇದಾರ ಜಗದ್ಗುರುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Advertisement

ನರೇಂದ್ರಮೋದಿಯವರು ಪವಿತ್ರ ಕ್ಷೇತ್ರ ಶ್ರೀ ಕೇದಾರನಾಥ ಮಂದಿರಕ್ಕೆ ಭೇಟಿ ನೀಡಿದ್ದಾಗ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಅಲ್ಪಸಂಖ್ಯಾತ ಮಾನ್ಯತೆನೀಡಲು ಕೋರಿ ಮನವಿ ಮಾಡಿದ್ದಾರೆ.

ಭಾರತದಲ್ಲಿ ಅನೇಕ ಧರ್ಮ ಮತ ಪಂಥಗಳಿವೆ. ಅವುಗಳಲ್ಲಿ ವೀರಶೈವ ಧರ್ಮವು ಪ್ರಮುಖವಾಗಿದೆ. ಈ ಧರ್ಮ ಹಿಂದೂಯುಕ್ತ ಸನಾತನವಾಗಿದ್ದು ವೇದ ಆಗಮ ಉಪನಿಷತ್‌ ಸಪ್ರಮಾಣಗಳಿಂದ ಕೂಡಿದ್ದಾಗಿದೆ. ವೀರಶೈವ ಧರ್ಮ ಯುಗಯುಗಗಳಿಂದ ಪ್ರಚಲಿತವಾದ ಧರ್ಮವಾಗಿದೆ. ವೀರಶೈವ ಧರ್ಮವನ್ನು ಯುಗ ಪ್ರಾರಂಭದಲ್ಲಿ ಆದಿ (ಮೂಲ) ಜಗದ್ಗುರು ಪಂಚಾಚಾರ್ಯರು ಸ್ಥಾಪನೆ ಮಾಡಿದ್ದಾರೆ. ಜಗದ್ಗುರು ರೇಣುಕಾದಿ ಪಂಚಾಚಾರ್ಯರರು ಅಗಸ್ತ್ಯ ಮುನಿಯವರಿಗೆ ಶಿವತತ್ವ ಉಪದೇಶ ಮಾಡಿದ ಸಂಗ್ರಹ ಗ್ರಂಥವು ವೀರಶೈವ ಧರ್ಮಗ್ರಂಥ “ಸಿದ್ಧಾಂತ ಶಿಖಾಮಣಿ’ ಆಗಿದೆ. ಹೀಗಾಗಿ ಜೈನ, ಬೌದ್ಧ ಸ್ವತಂತ್ರ ಧರ್ಮಗಳಿಗೆ ಮಾನ್ಯತೆ ಇರುವಂತೆ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next