Advertisement
ಯುಜಿ ನೀಟ್ ಕೌನ್ಸೆಲಿಂಗ್ ಸಮಸ್ಯೆ ಕುರಿತು ಗುರುವಾರ ವರ್ಚುಯಲ್ ವೇದಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಇಎ ತಂತ್ರಾಂಶವು 12 ವರ್ಷ ಹಳೆಯದಾಗಿದೆ. ಅದನ್ನು ಅಪ್‌ಡೇಟ್ ಮಾಡಲಾಗುತ್ತಿದೆ ಎಂದು ಹೇಳಿದರು.
Related Articles
Advertisement
ಪರೀಕ್ಷಾ ಪ್ರಾಧಿಕಾರವು ಸಿಇಟಿ, ನೀಟ್ ಪ್ರವೇಶ ಸೇರಿ ಇನ್ನಿತರ ನೇಮಕಾತಿ ಪ್ರಕ್ರಿಯೆ ಕೂಡ ನಡೆಸುವುದರಿಂದ ಪ್ರತಿ ದಿನ ಸರಾಸರಿ 3ರಿಂದ 4 ಸಾವಿರ ಕರೆಗಳು ಬರಲಿವೆ. ಇಷ್ಟು ದೊಡ್ಡ ಸಂಖ್ಯೆಯ ಕರೆಗಳನ್ನು ಸ್ವೀಕರಿಸಲು ಸಿಬ್ಬಂದಿ ಕೊರತೆ ಎದುರಾಗಲಿದೆ. ಆದ್ದರಿಂದ ಕರೆ ಸ್ವೀಕರಿಸಲು ಆನ್‌ಲೈನ್ ಪೋರ್ಟಲ್ ಆರಂಭಿಸಲಾಗುತ್ತಿದೆ. ಒಂದು ತಿಂಗಳಿನಲ್ಲಿ ಪೋರ್ಟಲ್ ಆರಂಭಿಸುವ ಸಾಧ್ಯತೆಗಳಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದರು.
ನೀಟ್ ನೋಂದಣಿ ಸಮಸ್ಯೆಯಿಂದ ಬುಧವಾರ ಸುಮಾರು 40 ಸಾವಿರ ಕರೆಗಳು ಬಂದಿವೆ. ಇಷ್ಟು ದೊಡ್ಡ ಸಂಖ್ಯೆಯ ಕರೆಗಳನ್ನು ಸ್ವೀಕರಿಸಲು ಕನಿಷ್ಠ 300 ಸಿಬ್ಬಂದಿಯಾದರೂ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.