Advertisement

ಅಗತ್ಯವಿರುವೆಡೆ ಶೀಘ್ರ ಕುಡಿವ ನೀರು ಪೂರೈಸಿ

06:23 PM Apr 05, 2021 | Team Udayavani |

ಕಾರವಾರ: ಯಾವೊಬ್ಬ ವ್ಯಕ್ತಿಯಿಂದಲೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರುಗಳು ಕೇಳಿಬರದಂತೆಕುಡಿಯುವ ನೀರು ಪೂರೈಸಲು ಸಮರೋಪಾದಿಯಲ್ಲಿಕೆಲಸ ಮಾಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ತಾಪಂ ಸಭಾಂಗಣದಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಕುರಿತು ಅವರು ಮಾತನಾಡಿದರು.

ಇನ್ನು ಒಂದೂವರೆ ತಿಂಗಳು ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲಿ ಬಾವಿಗಳಿವೆಯೋ ಅಲ್ಲಿಂದ ಪೈಪ್‌ಲೈನ್‌ ಅಳವಡಿಸಿ ನೀರು ನೀಡಬೇಕು.ಕುಡಿಯುವ ನೀರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಹೆಚ್ಚು ಗಮನ ಹರಿಸುತ್ತಿದೆ. ಇಷ್ಟಾದರೂ ಜನರಿಂದ ದೂರುಗಳು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಕೆಲವೆಡೆ ಪ್ರತೀವರ್ಷ ನೀರಿನ ಸಮಸ್ಯೆ ಎದುರಾಗುತ್ತಿದೆ. ಅಲ್ಲೆಲ್ಲ ಕೇವಲ ತಾತ್ಕಾಲಿಕವಾಗಿಕುಡಿಯುವ ನೀರಿನ ಪೂರೈಕೆ ಕೆಲಸ ಮಾಡಿಸರ್ಕಾರದ ಹಣ ಪೋಲು ಮಾಡಬಾರದು. ಅಂತಹಸ್ಥಳದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತಪರಿಹಾರಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಪಂಗಳಲ್ಲಿ ಯಾವ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿಯ ಮಾಹಿತಿಯನ್ನು ಎರಡು ದಿನದಲ್ಲಿ ನೀಡಬೇಕು ಮತ್ತು ಆ ವಾರ್ಡ್ಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ತಾಲೂಕಿನ ಶಿರವಾಡ, ಚೆಂಡಿಯಾ, ಅಸ್ನೋಟಿ, ಪರವಾರವಾಡಾದಲ್ಲಿ, ಕೆಳಗಿನ ಕೊಳಗೆಯಲ್ಲಿ ನೀರಿನಸಮಸ್ಯೆ ಇದೆ. ಸರ್ಕಾರದಿಂದ ಬರುವ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಯಾಯೋಜನೆಗಳಿಗೆ ಬಂದ ಹಣವನ್ನು ಸಮರ್ಪಕವಾಗಿಅವಶ್ಯವಿರುವ ಕೆಲಸಗಳಿಗೆ ಬಳಸಿಕೊಳ್ಳಬೇಕು. ನೀರಿನ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಪಿಡಿಒಗಳು, ಅಧ್ಯಕ್ಷರು ಕ್ರಮಕೈಗೊಂಡು ಜನರಿಗೆ ನೀರಿನ ಸಮಸ್ಯೆಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

Advertisement

ಚೆಂಡಿಯಾದಲ್ಲಿ ನೀರಿನ ಸಮಸ್ಯೆ ಬಗೆಹರಿಸುವನಿಟ್ಟಿನಲ್ಲಿ ಎರಡು ದಿನದಲ್ಲಿ ಕ್ರಮಕೈಗೊಳ್ಳಬೇಕು.ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ನಿವಾರಣೆಮಾಡಿದ್ದರೆ, ಈ ವರ್ಷ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಭಜನಕೇರಿ, ಒಕ್ಕಲಕೇರಿ ನೀರಿನ ಸಮಸ್ಯೆ ಒಂದು ವಾರದಲ್ಲಿ ಬಗೆಹರಿಯಬೇಕು ಎಂದರು.

ನೀರಿನ ಸಮಸ್ಯೆ ನಿವಾರಣೆಗೆ ಬಾವಿ, ಕೊಳವೆಬಾವಿಕೊರೆಸುವುದಿದ್ದರೆ ತಜ್ಞರ ಅಭಿಪ್ರಾಯ ಪಡೆಯುವಾಗಸ್ಥಳೀಯರನ್ನು ಸೇರಿಸಿಕೊಳ್ಳಬೇಕು. ಬೋಳಶಿಟ್ಟಾದಲ್ಲಿಬಾವಿ ನಿರ್ಮಿಸಿ ಪೈಪ್‌ಲೈನ್‌ ಮಾಡಿದರೆ ಸುತ್ತಲಿನಗ್ರಾಮಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆಎಂದಾದರೆ ಜಾಗವನ್ನು ಗುರುತಿಸಿ ಈಗಿನಿಂದಲೇ ತಾತ್ಕಾಲಿಕ ಕ್ರಮಕೈಗೊಂಡು ಮುಂದಿನ ದಿನದಲ್ಲಿ ಶಾಶ್ವತನೀರಿನ ಸಮಸ್ಯೆ ನಿವಾರಣೆಗೆ ಕ್ರಮಕ್ಕೆ ಮುಂದಾಗಬೇಕು ಎಂದು ಅಧಕಾರಿಗಳಿಗೆ ಸೂಚಿಸಿದರು.

ಕಿನ್ನರದಲ್ಲಿ ನಾಲ್ಕು ಕಡೆಗಳಿಂದ ಉಪ್ಪು ನೀರಿನಸಮಸ್ಯೆ ಇದೆ. ಕೆರವಡಿ ಗ್ರಾಮದಿಂದ ನೀರನ್ನುಒದಗಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಈಗ್ರಾಮದ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆಕ್ರಮಕೈಗೊಳ್ಳಲಾಗುವುದು. ಮುಡಗೇರಿ ಅರ್ಥಲಾವ ಕೆರೆ ಹೂಳೆತ್ತುವ ಕೆಲಸ ಮಾಡಲು ಈಗಾಗಲೆ ಸಣ್ಣನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಈಕೆರೆ ಜನರ ಬಳಕೆಗೆ ಬಂದರೆ ಕೃಷಿ ಚಟುವಟಿಕೆಗೂಸಹಾಯಕವಾಗುತ್ತದೆ. ಗ್ರಾಪಂಗಳಲ್ಲಿರುವ ಸಣ್ಣ ಮತ್ತುದೊಡ್ಡ ಕೆರೆಗಳ ಮಾಹಿತಿಯನ್ನು ಎಲ್ಲ ಪಿಡಿಒಗಳು ತಲುಪಿಸಬೇಕು ಎಂದರು.

ಸರ್ಕಾರದಿಂದ ನೀರಿನ ವ್ಯವಸ್ಥೆ ಕಲ್ಪಿಸಲು ಅನುದಾನ ಬರುತ್ತದೆ. ಆದರೆ ಈವರೆಗೂ ಕೆಲವೆಡೆ ಬಾವಿ ನಿರ್ಮಾಣ ಮಾಡಿ ಪೈಪ್‌ಲೈನ್‌ ಅಳವಡಿಸಿ ಜನರ ಸಮಸ್ಯೆ ನಿವಾರಿಸಿಲ್ಲ. ಸ್ವಲ್ಪ ಸ್ಪಲ್ಪ ಅನುದಾನ ಬಳಸಿಕೊಂಡರೂ ಕುಡಿಯುವ ನೀರಿನ ಸಮಸ್ಯೆನಿವಾರಿಸಬಹುದು. ವೈಲವಾಡದ ಮಹಾಸತಿವಾಡದಕೆರೆ ಹೂಳೆತ್ತಿ ಪುನಶ್ಚೇತನಗೊಳಿಸಿ ಜನರಿಗೆ ನೀರನ್ನು ತಲುಪಿಸಬಹುದು. ಈ ಹಿಂದೆ ಮಹಾಸತಿವಾಡಾದ ಕೆರೆಸುತ್ತ ಬಾವಿಗಳನ್ನು ನಿರ್ಮಿಸುವಂತೆ ಅಲ್ಲಿಯ ಜನರು ಮನವಿ ನೀಡಿದ್ದರು. ಮುಡಗುಳಿ ಕೆರೆಯನ್ನು ಹೂಳೆತ್ತಿಜನರಿಗೆ ನೀರು ತಲುಪಿಸಲು ಮುಂದಾಗಬೇಕು ಎಂದರು.

ಗ್ರಾಪಂಗಳಿಂದ ಪೂರೈಸಲಾಗುವ ನೀರನ್ನು ತೋಟಕ್ಕೆ ಬಳಕೆ ಮಾಡದೆ ಕುಡಿಯಲು ಮಾತ್ರ ಸಮರ್ಪಕವಾಗಿಬಳಸಿಕೊಳ್ಳಬೇಕು ಎಂದು ಜನತೆಯನ್ನೂ ಶಾಸಕರು ವಿನಂತಿಸಿದರು.

ಪಿಡಿಓಗಳು ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಪಂಚಾಯತಿಗಳಲ್ಲಿ ನೀರಿನ ಸಮಸ್ಯೆನಿವಾರಣೆಗೆ ಹಣದ ಕೊರತೆ ಇದ್ದರೆ ತಿಳಿಸಿ, ಶಾಸಕರ ಅನುದಾನದಿಂದ ಹಣ ಒದಗಿಸಲಾಗುವುದು.2023ರ ವೇಳೆಗೆ ಜಲಜೀವನ ಮಿಷನ್‌ ಯೋಜನೆಯಡಿ ಎಲ್ಲಗ್ರಾಮಗಳಿಗೆ ನೀರು ತಲುಪಿಸಲು ಕೇಂದ್ರ ಸರ್ಕಾರ ಯೋಜನೆ ಪ್ರಾರಂಭಿಸಿದೆ. ಅದರ ಮೂಲಕ ಮುಂದಿನದಿನಗಳಲ್ಲಿ ನಿರಿನ ಸಮಸ್ಯೆ ನಿವಾರಿಸಬಹುದು. ಅಲ್ಲದೇ,ಉಪ್ಪು ನೀರು ತಡೆಯಲು ಖಾಲ್ಯಾಂìಡ್‌ ನಿರ್ಮಾಣಕ್ಕೆರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುಮೋದನೆ ನೀಡಿದ್ದು,ಅದು ಆರಂಭವಾದರೆ ಜಲ ಮೂಲಗಳಿಗೆ ಉಪ್ಪು ನೀರು ಬರುವುದು ತಪ್ಪುತ್ತದೆ ಎಂದರು.

ತಹಶೀಲ್ದಾರ್‌ ಆರ್‌.ವಿ. ಕಟ್ಟಿ, ತಾಪಂ ಇಒಆನಂದಕುಮಾರ್‌, ವಿವಿಧ ಗ್ರಾಪಂಗಳ ಅಧ್ಯಕ್ಷ,ಉಪಾಧ್ಯಕ್ಷರು, ಪಿಡಿಓಗಳು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರವಾರ, ಅಂಕೋಲಾ ತಾಲೂಕುಗಳಲ್ಲಿಕುಡಿಯುವ ನೀರಿನ ಸಮಸ್ಯೆಯಾಗದಂತೆಕ್ರಮ ಕೈಗೊಳ್ಳಲು ಜೆಜೆಎಂ ಯೋಜನೆಯವಿಸ್ತೃತ ವರದಿ ತಯಾರಿಸಲು ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ ಅವರು ತಿಳಿಸಿದಂತೆಸಂಬಂಧಪಟ್ಟ ಅಧಿಕಾರಿಗಳೊಂದಿಗೆಹಾಗೂ ಯೋಜನಾ ವರದಿ ತಯಾರಿಸುವ ಏಜನ್ಸಿಯೊಂದಿಗೆ ಚರ್ಚಿಸಲಾಗಿದೆ.  –ರೂಪಾಲಿ ನಾಯ್ಕ, ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next