ಹೈದರಾಬಾದ್:ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್(ಜಿಎಚ್ ಎಂಸಿ) ಸ್ಥಳೀಯ ಚುನಾವಣೆ ಡಿಸೆಂಬರ್ 1ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಎಚ್ ಎಂಸಿ ವ್ಯಾಪ್ತಿಯ ನಿವಾಸಿಗಳು ಬಳಕೆ ಮಾಡುವ 20 ಸಾವಿರ ಲೀಟರ್ ನೀರಿಗೆ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ ಸೋಮವಾರ(ನವೆಂಬರ್ 23, 2020 ಘೋಷಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿಯ ಪ್ರಣಾಳಿಕೆ ಪ್ರಕಾರ, ಮುಖ್ಯಮಂತ್ರಿ ಕೆಸಿಆರ್ ಅವರು ಹೇರ್ ಕಟ್ಟಿಂಗ್ ಸೆಲೂನ್ ಹಾಗೂ ಲಾಂಡ್ರಿ ಅಂಗಡಿಯ ವಿದ್ಯುತ್ ಉಚಿತ ಎಂದು ತಿಳಿಸಿದ್ದಾರೆ.
ಚಿತ್ರಪ್ರದರ್ಶನ ಆರಂಭವಾಗುವವರೆಗೆ ಚಿತ್ರಮಂದಿರಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು ವಿದ್ಯುತ್ ಬಿಲ್ ಪಾವತಿಸಬೇಕಾದ ಅಗತ್ಯವಿಲ್ಲ ಎಂದು ಕೆಸಿಆರ್ ಹೇಳಿದರು.
ಇದನ್ನೂ ಓದಿ:ಡ್ರಗ್ ಪ್ರಕರಣ: ಹಾಸ್ಯ ನಟಿ ಭಾರತಿ ಸಿಂಗ್ , ಪತಿ ಹರ್ಷ್ ಗೆ ಜಾಮೀನು ಮಂಜೂರು
ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೆಸಿಆರ್ ಅವರು ಜನರಲ್ಲಿ, ಒಂದು ವೇಳೆ ನಿಮಗೆ ಶಾಂತಿಯುತ ಹೈದರಾಬಾದ್ ಬೇಕೋ ಅಥವಾ ಕರ್ಫ್ಯೂ ಹೇರಿಕೆಯ ಹೈದರಾಬಾದ್ ಬೇಕೋ ಎಂದು ಕೇಳಿದ್ದರು. ಎಲ್ಲರಿಗಾಗಿ ಹೈದರಾಬಾದ್ ಬೇಕೋ ಅಥವಾ ಕೆಲವರಿಗಾಗಿ ಮಾತ್ರ ಹೈದರಾಬಾದ್ ಬೇಕೋ ಎಂಬುದಾಗಿಯೂ ಕೆಸಿಆರ್ ಪ್ರಶ್ನಿಸಿದ್ದರು ಎಂದು ವರದಿ ತಿಳಿಸಿದೆ.
ಹೈದರಾಬಾದ್ ಅನ್ನು ಪ್ರವಾಹ ಮುಕ್ತವನ್ನಾಗಿ ಮಾಡುವ ನೀಲನಕ್ಷೆ ಸಿದ್ದಪಡಿಸುವುದಾಗಿ ಕೆಸಿಆರ್ ಈ ಸಂದರ್ಭದಲ್ಲಿ ಘೋಷಿಸಿದ್ದು, ಶೀಘ್ರದಲ್ಲಿಯೇ ಚಿತ್ರಮಂದಿರಗಳನ್ನು ತೆರೆಯಲು ಆದೇಶ ಹೊರಡಿಸುವುದಾಗಿ ತಿಳಿಸಿದರು.