Advertisement
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಬುಧ ವಾರ ಹಮ್ಮಿಕೊಂಡಿದ್ದ ಕಯ್ಯಾರ ಕಿಂಞಣ್ಣ ರೈ ಅವರ 107ನೇ ಜನ್ಮ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಿಂಞಣ್ಣ ರೈ ಅವರು ಕರ್ನಾಟಕ ಏಕೀಕರಣದ ಬಹು ದೊಡ್ಡ ಆಸ್ತಿ. ಸಾಹಿತಿ, ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಪತ್ರ ಕರ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತಿಯೊಬ್ಬನಿಗೆ ಇರಲೇಬೇಕಾದ ಕನ್ನಡ ಬದ್ಧತೆ ಮತ್ತು ಸಾಮಾಜಿಕ ಬದ್ಧತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ವ್ಯಕ್ತಿ ಎಂದು ಅವರ ಕಾರ್ಯವೈಖರಿ ಮತ್ತು ಜೀವನ ಶೈಲಿಯನ್ನು ನೆನಪಿಸಿಕೊಂಡರು.
ಕಾಸರಗೋಡಿನಲ್ಲಿ ಡಾ| ಕಯ್ನಾರ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಲು ರಾಜ್ಯ ಸರಕಾರದಿಂದ 1 ಕೋ.ರೂ. ಮಂಜೂರು ಮಾಡಲಾಗಿದೆ. ಗೋವಾ, ಅಕ್ಕಲಕೋಟೆಗಳಲ್ಲಿ ಜಯದೇವ ತಾಯಿ ಹೆಸರಿನಲ್ಲಿ ಕನ್ನಡ ಭವನವನ್ನು ನಿರ್ಮಿಸುವ ಯೋಜನೆಯಿದೆ ಎಂದು ತಿಳಿಸಿದರು. ಕಿಂಞಣ್ಣ ರೈ ಅವರು ಮಹಾತ್ಮಾ ಗಾಂಧೀಜಿಯವರನ್ನು ಪ್ರತ್ಯಕ್ಷವಾಗಿ ಕಂಡು, ವೈಯಕ್ತಿಕ ಸತ್ಯಾಗ್ರಹಿಯಾಗಿ ಗಾಂಧೀಜಿಯವರಿಂದಲೇ ಆಯ್ಕೆಗೊಂಡು ಈ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ದೀನದಲಿತರ ಸೇವೆಯಲ್ಲಿ ತೊಡಗಿಸಿಕೊಂಡವರು. ರವೀಂದ್ರನಾಥ ಠಾಗೂರ್ ಅವರ ದೇಶ ಭಾಷಾ ಸಾಹಿತ್ಯದ ಮೂಲಕ ಕಿಂಞಣ್ಣ ರೈ ಮತ್ತು ಕುವೆಂಪು ಅವರು ಪ್ರಭಾವ ಬೀರಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ| ಕೆ.ಇ. ರಾಧಾಕೃಷ್ಣ ಹೇಳಿದರು.