Advertisement
ಕಯ್ನಾರು ಗ್ರಾಮ ಕಚೇರಿಯು ಕುಡಾಲುಮೇರ್ಕಳ ಗ್ರಾಮದ 3,800.18 ಎಕ್ರೆ ಮತ್ತು ಕಯ್ನಾರು ಗ್ರಾಮದ 1,813.83 ಎಕ್ರೆ ವಿಸ್ತ್ರೀರ್ಣದ ಸ್ಥಳಗಳಿಗೆ ಕಂದಾಯ ಕಚೇರಿಯಾಗಿದ್ದು ಉಭಯ ಗ್ರಾಮದಲ್ಲಿ ಒಟ್ಟು 3,313 ಮಂದಿ ಭೂ ಮಾಲಕರನ್ನು ಹೊಂದಿದೆ. ಗ್ರಾಮಾಧಿಕಾರಿ, ಸಹಾಯಕ ಗ್ರಾಮಾಧಿಕಾರಿ,ಇಬ್ಬರು ಸಹಾಯಕರು ಮತ್ತು ಓರ್ವ ದಿನವೇತನದ ನೌಕರೆ ಇಲ್ಲಿ ಕರ್ತವ್ಯದಲ್ಲಿರುವರು.ಓರ್ವ ಸಹಾಯಕ ಹುದ್ದೆ ತೆರವಾಗಿದೆ. ಅನೇಕ ವರ್ಷಗಳಿಂದ ಕೇರಳದ ತುತ್ತತುದಿಯಿಂದ ಆಗಮಿಸುವ ಮಲಯಾಳಿ ಗ್ರಾಮಾಧಿಕಾರಿಗಳು ಪದೆ ಪದೆ ವರ್ಗಾವಣೆಗೊಳ್ಳುತ್ತಿದ್ದ ಕಚೇರಿಯಲ್ಲಿ ಪ್ರಕೃತ ಕುಂಬಳೆಯ ಕನ್ನಡದ ಗ್ರಾಮಾಧಿಕಾರಿ ಕರ್ತವ್ಯದಲ್ಲಿರುವರು. ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಕಚೇರಿ ಕಾರ್ಯಾವೆಸಗುತ್ತಿದ್ದು ಕಚೇರಿ ಕಟ್ಟಡ ಸಣ್ಣದಾದ ಕೋಣೆಗಳನ್ನು ಹೊಂದಿದೆ.
ರಾಜ್ಯಾದ್ಯಂತ ಹೆಚ್ಚಿನ ಗ್ರಾ.ಕಚೇರಿ ವ್ಯಾಪ್ತಿಯಲ್ಲಿ ಭೂ ಕಂದಾಯ ರೀ ಸರ್ವೇ ನಡೆದಿದೆ. ಆದರೆ ಮಂಜೇಶ್ವರ ತಾಲೂಕಿನ ಉಪ್ಪಳ, ಕೊಯಿಪ್ಪಾಡಿ ಮತ್ತು ಎಡನಾಡು ಗ್ರಾಮ ಕಚೇರಿ ವ್ಯಾಪ್ತಿಯ ಭೂಮಿಯನ್ನು ಮಾತ್ರ ರೀ ಸರ್ವೇ ಮಾಡಲಾಗಿದೆ. ಉಳಿದ ಕಡೆ ಇನ್ನೂ ರೀ ಸರ್ವೆ ನಡೆಯದೆ ಪರಸ್ಪರ ಭೂವಿವಾದಕ್ಕೆ ಆಸ್ಪದವಾಗಿದೆ. ಭೂಮಿ ರೀ ಸರ್ವೇ ನಡೆಸಿದಲ್ಲಿ ಎಲ್ಲರ ಸ್ಥಳವೂ ಪ್ರತೇÂಕವಾಗಿ ಕಚೇರಿಯಲ್ಲಿ ದಾಖಲೆಗೊಳ್ಳಲಿದೆ.ಅನೇಕ ವರ್ಷಗಳ ಗಡಿತಕರಾರಿಗೆ ಪರಿಹಾರವಾಗಲಿದೆ. ಆದರೆ ಸರಕಾರದ ವಿಳಂಬ ನೀತಿ ಇದಕ್ಕೆ ಅಡ್ಡಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಎಲ್ಲ ಭೂ ಮಾಲಕರ ಸ್ವಾಧೀನದ ಸ್ಥಳಗಳನ್ನು ಗ್ರಾಮ ಕಚೇರಿ ಮೂಲಕ ಸಲ್ಲಿಸಿ ತಾಲೂಕು ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ದಾಖಲಿಸಿದರೂ ಕೆಲವರ ಭೂ ದಾಖಲೆಗಳು ಬಿಟ್ಟುಹೋಗಿ ಪ್ರಮಾದವಾಗಿದೆ. ಇವರು ಮತ್ತೆ ಸ್ಥಳದ ಎಲ್ಲ ದಾಖಲೆಯೊಂದಿಗೆ ಅರ್ಜಿ ಬರೆದು ಭರ್ತಿಗೊಳಿಸಿ ನೀಡಬೇಕಾಗಿದೆ.ಈ ರೀತಿಯಲ್ಲಿ ದಾಖಲಿಸಿದ ಬಳಿಕ ಸ್ಥಳದ ತಂಡೆ ಪೇರ್ ದಾಖಲೆಯಾಗಲಿದೆ.ಇದರ ಆಧಾರದಲ್ಲಿ ಭೂಮಿಯ ಕರ ಪಾವತಿಸಿ ಕಂಪ್ಯೂಟರ್ ರಶೀದಿ ನೀಡಲಾಗುವುದು.ಕಚೇರಿ ಆಧುನಿಕ ತಂತ್ರಜ್ಞಾನ ಅಳವಡಿಕೆಯ ಬಳಿಕ ಹತ್ತಿರದ ಅಕ್ಷಯ ಕೇಂದ್ರದ ಮೂಲಕ ತೆರಿಗೆ ಸಂಗ್ರಹಿ ತೆರಿಗೆದಾರರನ್ನು ಸತಾಯಿಸುತ್ತಿದ್ದ ಅವ್ಯಸ್ಥೆಗೆ ನೂತನ ಕನ್ನಡ ಗ್ರಾಮಾಧಿಕಾರಿಯವರುಧಿಕಾರಸ್ವೀಕರಿಸಿದ ಮರುದಿನದಿಂದಲೇ ಗ್ರಾಮ ಕಚೇರಿಯಲ್ಲಿ ತೆರಿಗೆ ಸ್ವೀಕರಿಸುವ ಕ್ರೆಮಕೈಗೊಂಡು ಜನರ ಪ್ರೀತಿಗೆ ಪಾತ್ರರಾಗಿರುವರು.
Related Articles
Advertisement
ಅನಾಥವಾಗಿರುವ ಹಳೆ ಕಟ್ಟಡರಸ್ತೆ ಪಕ್ಕದಲ್ಲಿ ಹಳೆ ಗ್ರಾಮಕಚೇರಿ ಕಟ್ಟಡ ಗೋಡೌನಿನಂತೆ ನಿರ್ಮಿಸಿದ್ದು ಪ್ರಕೃತ ಅನಾಥವಾಗಿದೆ.ಇದರ ಸುತ್ತಲೂ ಗಿಡಗಂಟಿ ಬೆಳೆದಿದೆ.ಕೆಲವು ವರ್ಷಗಳಿಂದ ಶಿಥಿಲವಾಗಿ ಉಳಿದಿರುವ ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಇದನ್ನು ಎಂದೋ ಯಾವುದಾದರೂ ಸರಕಾರಿ ಉಪಯೋಗಕ್ಕೆ ಬಳಸಬಹುದಿತ್ತು.ಅಥವಾ ಸಾರ್ವಜನಿಕವಾಗಿ ಬಾಡಿಗೆಗೆ ನೀಡಬಹುದಿತ್ತು. ಇದ್ಯಾವುದಕ್ಕೂ ಇಲಾಖೆ ಮುಂದಾಗದೆ ರಾಷ್ಟ್ರೀಯ ನಷ್ಟಕ್ಕೆ ಮುಂದಾದಂತಿದೆ. ಇನ್ನಾದರೂ ಈ ಕಟ್ಟಡದತ್ತ ಕಂದಾಯ ಇಲಾಖೆ ಚಿತ್ತ ಹರಿಸಬೇಕಾಗಿದೆ. ಕಟ್ಟಡ ಕುಸಿಯುವ ಮುನ್ನ ಇದಕ್ಕೆ ಮೋಕ್ಷ ಕಾಣಬೇಕಿದೆ.