Advertisement
ಭೋವಿ ವಡ್ಡರ ಸಮಾಜ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾಯಕಯೋಗಿ ಸಿದ್ಧರಾಮೇಶ್ವರರ 846ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣದಲ್ಲಿ ನಡೆದ ಕ್ರಾಂತಿಯಲ್ಲಿ ಸಿದ್ಧರಾಮೇಶ್ವರರ ಪಾತ್ರ ಹಿರಿದಾದದ್ದು. ಹನ್ನೆರಡನೇ ಬಸವಾದಿ ಶರಣರ ತತ್ವ ವಚನ ಸಾಹಿತ್ಯಕ್ಕೆ ಸಮಾಜದಲ್ಲಿ ಪರಿವರ್ತನೆ ಮಾಡುವ ಶಕ್ತಿ ಇದೆ. ಯಾರು ಕಾಯಕ, ದಾಸೋಹದಲ್ಲಿ ನಿಷ್ಠೆ ಇಡುತ್ತಾರೆ ಅವರೆಲ್ಲರೂ ಕೂಡ ಶರಣರ ತತ್ವ ಪಾಲಿಸಬಹುದು. ಬಸವಾದಿ ಶರಣರ ವಚನ ಸಾಹಿತ್ಯ ಯಾವುದೋ ಕಾಲ್ಪನಿಕ ಲೋಕದ ಕಲ್ಪನೆಗಳಲ್ಲ. ವಚನ ಸಾಹಿತ್ಯಕ್ಕೆ ತನ್ನದೇ ಆದ ಮೆರುಗು ಇದೆ.ಅದಕ್ಕೆ ಕಾರಣ ಶರಣರು ಬರೆದ ವಚನಗಳು ಅನುಭಾವದ ನುಡಿಗಳು ನುಡಿದಂತೆ ನಡೆದ, ನಡೆದಂತೆ ನುಡಿದ ಮಾತುಗಳೇ ಇವತ್ತು ವಾಕ್ಯಗಳಾಗಿವೆ. ಭೋವಿ ವಡ್ಡರ ಸಮಾಜ ಸಂಪೂರ್ಣ ಕಾಯಕದಲ್ಲಿ ನಿಷ್ಠೆ ಹೊಂದಿರುವವರು. ರಟ್ಟೆ ಮೇಲೆ ಬದುಕು ಸಾಗಿಸುವವರು. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾಭಿಮಾನವಾಗಿ ಬದುಕುವಂತೆ ಮಾಡಬೇಕು. ಗಳಿಸಿದ ಹಣವನ್ನು ದುಶ್ಚಟಗಳಿಗೆ ಹಾಕದೇ ಮಕ್ಕಳ ಮತ್ತು ಕುಟುಂಬದ ಏಳಿಗೆಗೆ ಬಳಸಿ ಎಂದು ಹೇಳಿದರು.
ವರ್ಗವದರು. ಸಮಾಜ ಹಿಂದುಳಿಯಲು ಶಿಕ್ಷಣ ಹಾಗೂ ಸಂಸ್ಕಾರವೇ ಕಾರಣ.ಅದಕ್ಕಾಗಿ ಗಂಡು-ಹೆಣ್ಣು ಎನ್ನದೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದು ಹೇಳಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿದರು. ಭೋವಿ ವಡ್ಡರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ನಗರಸಭೆ ಅಧ್ಯಕ್ಷೆ ಗೀತಾಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ವೆಂಕಟೇಶ ಕುಸಾಳೆ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ಶಾಮ ನಾಟೀಕಾರ, ನಿಂಗಣ್ಣ ಎಸ್. ದೇವಕರ್, ರಾಮು ನಂದೂರ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಶೀದ್ ಮರ್ಚಂಟ್, ಜೆಡಿಎಸ್ ಅಧ್ಯಕ್ಷ ರಾಜ್‌ಮಹ್ಮದ್‌ರಾಜಾ, ಮಲ್ಲಿಕಾರ್ಜುನ ಕುಸ್ತಿ, ಭೀಮಾಶಂಕರ ದಂಡಗುಲಕರ್, ಫುಲಾಬಾಯಿ ಅಡಿವೆಪ್ಪ, ರಾಜು ಮೇಸ್ತ್ರಿ ಇದ್ದರು. ಹಣಮಂತ ಪವಾರ ಸ್ವಾಗತಿಸಿದರು. ದೇವದಾಸ ಜಾಧವ ನಿರೂಪಿಸಿದರು.ಮಹಾಂತೇಶ ದೊಡ್ಡಮನಿ ವಂದಿಸಿದರು.