Advertisement

Bhatkal ಕೋಗ್ತಿ ಕೆರೆಗೆ ಕಾಯಕಲ್ಪ; 88 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ

07:56 PM May 22, 2023 | Team Udayavani |

ಭಟ್ಕಳ: ನಗರದ ಕುಡಿಯುವ ನೀರಿನ ಜಲಮೂಲಕ್ಕೆ ಏಕೈಕ ಆಶ್ರಯವಾಗಿರುವ ಕೋಗ್ತಿ ಕೆರೆಗೆ ಕಾಯಕಲ್ಪ ಮಾಡಲಾಗಿದ್ದು 88 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಈಗಾಗಲೇ ಗುತ್ತಿಗೆದಾರರು ಕಾಮಗಾರಿಯನ್ನು ಮಾಡಿದ್ದು ಕೆರೆಯಲ್ಲಿ ತುಂಬಿದ್ದ ಹೂಳನ್ನು ಹೊರ ತೆಗೆಯಲಾಗಿದೆ. ಕೆರೆ ಸಂಪೂರ್ಣ ಒಣಗಿದ್ದು ಒಂದೆರಡು ಕಡೆಗಳಲ್ಲಿಯು ಕೂಡಾ ನೀರಿನ ಸೆಲೆ ಕಂಡು ಬರದಿರುವುದು ಆಶ್ಚರ್ಯವಾಗಿದೆ. ನಗರದ ಹೆಚ್ಚಿನ ಬಾವಿಗಳಿಗೆ ಜಲಮೂಲವಾಗಿದ್ದ ಈ ಕೆರೆಯೇ ಸಂಪೂರ್ಣ ಮೈದಾನದಂತಾಗಿದೆ ಎಂದಾದರೆ ಈ ಬಾರಿಯ ನೀರಿನ ಬರ ಎಷ್ಟು ಎನ್ನುವುದನ್ನು ಊಹಿಸಲೂ ಕಷ್ಟ ಸಾಧ್ಯವಾಗಿದೆ.

Advertisement

ಕಳೆದ ಕೆಲವು ತಿಂಗಳ ಹಿಂದೆ ಕೆಲಸ ಆರಂಭಿಸಿದ್ದ ಗುತ್ತಿಗೆದಾರರು ಕೆರೆಯ ಮಣ್ಣನ್ನು ತೆಗೆದು ಕೆರೆಯ ದಂಡೆಯ ಮೇಲೆಯೇ ರಾಶಿ ಹಾಕಿದ್ದು ಇನ್ನೇನು ಮಳೆಗಾಲದಲ್ಲಿ ಸಂಪೂರ್ಣ ಹೂಳು ಕರೆಗೇ ಬರುವುದು ನಿಶ್ಚಿತವಾಗಿದೆ. ಕರೆಯ ಹೂಳನ್ನು ತೆಗೆದು ಎಲ್ಲಿ ಹಾಕಬೇಕು ಎನ್ನುವುದು ನೀಲಿ ನಕ್ಷೆಯಲ್ಲಿಯಲ್ಲಿಯದೆಯೇ? ಕೆರೆಯ ಹೂಳನ್ನು ಕರೆಯ ದಂಡೆಯ ಮೇಲೆಯೇ ಹಾಕದರೆ ಅದು ಮತ್ತೆ ಕರೆಗೇ ಹೋಗುದಿಲ್ಲವೇ ಎನ್ನುವುದನ್ನು ಸಂಬಂಧ ಪಟ್ಟ ಅಭಿಯಂತರರು ಸ್ಪಷ್ಟಪಡಿಸಬೇಕಿದೆ.

ಅಲ್ಲದೇ ಮಳೆಗಾಲ ಇನ್ನೇನು ಆರಂಭವಾಗುತ್ತಿದೆ ಎನ್ನುವಾಗ ಕೆರೆಯ ಸುತ್ತಲೂ ಕೆಂಪು ಮಣ್ಣನ್ನು ಹಾಕಿದ್ದು ಪಿಚ್ಚಿಂಗ್ ಕಟ್ಟಿಲ್ಲ. ಕರೆಯನ್ನು ಸ್ವಚ್ಚಗೊಳಿಸಿ ಅಲ್ಲಿದ ಹೂಳನ್ನು ತೆಗೆದು ಕೆರೆಯ ದಂಡೆಯ ಮೇಲೆಯೇ ಹಾಕಿದ ಗುತ್ತಿಗೆದಾರರು ಕೆಂಪು ಮಣ್ಣನ್ನು ಕರೆಯ ಅಂಚಿನಲ್ಲಿ ಹಾಕಿದ್ದು ಮತ್ತೆ ಪುನಃ ಈ ಕೆಂಪು ಮಣ್ಣು ಕೊಚ್ಚಿಕೊಂಡು ಹೋಗಿ ಕರೆಯಲ್ಲಿ ಹೂಳೂ ತುಂಬಲು ಯಾವುದೇ ತೊಂದರೆ ಇಲ್ಲ ಎನ್ನುವಂತಾಗಿದೆ. ಕೆರೆಯನ್ನು ಸ್ವಚ್ಚಗೊಳಿಸಿ ಹೂಳು ತೆಗೆದಿರುವುದೇ ನೀರು ಶೇಖರಣೆಯಾಗಲು ಎನ್ನುವುದನ್ನು ಮರೆತ ಗುತ್ತಿಗೆದಾರರು ಮಳೆಗಾಲಕ್ಕೂ ಮೊದಲು ಪಿಚ್ಚಿಂಗ್ ಕಟ್ಟದೇ ಇದ್ದಲ್ಲಿ ಹೂಳೂ ತೆಗೆದೂ ಕೂಡಾ ಯಾವುದೇ ಪ್ರಯೋಜನ ಇಲ್ಲ ಎನ್ನುವಂತಾಗುವುದು ಮಾತ್ರ ಸತ್ಯ.

ಒಟ್ಟೂ 88 ಲಕ್ಷಕ್ಕೆ ಕಾಮಗಾರಿ ಮಂಜೂರಾಗಿದ್ದು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕರೆಗೆ ಕಾಯಕಲ್ಪ ಮಾಡಲಾಗುತ್ತಿದೆ. ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಮಳೆಗಾಲ ಆರಂಭಕ್ಕೂ ಮುನ್ನ ಕೆರೆಯ ಒಳಗಡೆಯಿಂದ ಪಿಚ್ಚಿಂಗ್ ಕಟ್ಟುವುದು ಅವಶ್ಯಕವಾಗಿದ್ದು ಈಗಾಗಲೇ ಮಳೆಗಾರ ಸಮೀಪಿಸುತ್ತಿದ್ದು ಯಾವುದೇ ಪಿಚ್ಚಿಂಗ್ ಕಟ್ಟುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲಕ್ಕೂ ಪೂರ್ವ ಪಿಚ್ಚಿಂಗ್ ಕಟ್ಟದೇ ಇದ್ದರಲ್ಲಿ ಹೂಳು ತೆಗೆದೂ ಪ್ರಯೋಜವಿಲ್ಲದಂತಾಗುದಲ್ಲದೇ, ತೆಗೆದು ಹೂಳೂ ಕೂಡಾ ಕೆರೆಗೆ ಮತ್ತೆ ಹೋಗುವುದರಲ್ಲಿ ಸಂಶಯವಿಲ್ಲ.
ಮಳೆಗಾಲ ಆರಂಭವಾಯಿತೆದಂತೆ ಕೆರೆಯ ಸುತ್ತಲೂ ಪಿಚ್ಚಿಂಗ್ ಕಟ್ಟದೇ ಇದ್ದರಲ್ಲಿ ಈಗಾಗಲೇ ಕರೆಯ ಸುತ್ತಲೂ ಹಾಕಿದ್ದ ಕೆಂಪು ಮಣ್ಣು ಮತ್ತು ಕೆರೆಯ ಮೇಲುಗಡೆಯಲ್ಲಿ ತೆಗೆದು ರಾಶಿ ಹಾಕಲಾಗಿದ್ದ ಹೂಳು ಮತ್ತೆ ಕೆರೆಗೆ ಸೇರಿ ಕಾಮಗಾರಿ ವ್ಯರ್ಥವಾಗುವುದರಲ್ಲಿ ಸಂಶಯವಿಲ್ಲ.
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಾಮಗಾರಿಯ ಗುಣಮಟ್ಟ ಹಾಗೂ ಪಿಚ್ಚಿಂಗ್ ಕಟ್ಟುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ.

ಕೋಗ್ತಿ ಕೆರೆ ಕಾಮಗಾರಿಯಲ್ಲಿ ಕೆರೆಯ ಸುತ್ತಲೂ ಸೈಡ್ ಪಿಚ್ಚಿಂಗ್ ಮಾಡುವುದಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಮಾಡಿದ್ದು ಇನ್ನು ತನಕ ನಾನು ಸ್ಥಳ ಪರಿಶೀಲನೆ ಮಾಡಿಲ್ಲ. ಮಳೆಗಾಲದ ಒಳಗಾಗಿ ಪಿಚ್ಚಿಂಗ್ ಕಟ್ಟಬೇಕೆನ್ನುವ ಕುರಿತು ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ. ಹೂಳನ್ನು ಸ್ಥಳೀಯರು ಅಲ್ಲಿಯೇ ಹಾಕುವಂತೆ ಕೋರಿಕೆ ಸಲ್ಲಿಸಿದ್ದರಿಂದ ಕೆರೆಯ ಪಕ್ಕದಲ್ಲಿಯೇ ಹಾಕಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಭಿಯಂತರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next