Advertisement

ಕಾಯಕ ಸಂಸ್ಕೃತಿ ಪಾಲನೆಯಲ್ಲಿ ಮುನ್ನಡೆಯಿರಿ-ಶಾಸಕ ಜಿ.ಎಸ್‌. ಪಾಟೀಲ

05:12 PM Sep 06, 2024 | Team Udayavani |

■ ಉದಯವಾಣಿ ಸಮಾಚಾರ
ಗಜೇಂದ್ರಗಡ: ಬಸವಣ್ಣನವರು ವಚನಗಳ ಮೂಲಕ ನೀಡಿದ ಕಾಯಕ ಸಂಸ್ಕೃತಿಯ ಸಂದೇಶ ವಿಶ್ವವೇ ಒಪ್ಪಿಕೊಂಡಿದೆ. ಅವುಗಳ ಪಾಲನೆಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ ಎಂದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

Advertisement

ಪಟ್ಟಣದ ಮೈಸೂರ ಮಠದಲ್ಲಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರಾವಣ ಮಾಸ ಪ್ರಯುಕ್ತ ನಡೆದ ಗುಡ್ಡಾಪುರದ ದಾನಮ್ಮದೇವಿ ಪುರಾಣ ಪ್ರವಚನ ಪ್ರಯುಕ್ತ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿಶರಣರು ರಚಿಸಿದ ವಚನ ಸಾಹಿತ್ಯಗಳೇ ಇಂದಿನ ವಿಶ್ವ ವಿದ್ಯಾಲಯಗಳ ಸಂಶೋಧನೆಯ
ಅಸ್ತ್ರಗಳಾಗಿವೆ. ಜೊತೆಗೆ ಸರಳ ಬದುಕಿಗೆ ಸಂಜೀವಿನಿಯಾಗಿವೆ. ಇಂತಹ ಸರಳ ಮತ್ತು ಸಮಾನತೆ ಬಿಂಬಿಸುವ ಕೋಶದ ಚಿಂತನೆ ಬಿಟ್ಟು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮಾತಿಗೆ ಮಾರು ಹೋಗುತ್ತಿರುವುದು ಬಸವ ಧರ್ಮಕ್ಕೆ
ಅಪಚಾರವೆಸಗಿದಂತೆ.

ಸಮಾಜವು ಲೌಕಿಕ ಶಕ್ತಿಯ ಹಿಂದೆ ಬಿದ್ದು ಜಗತ್ತಿಗೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿಯನ್ನು ಮರೆತಿದೆ. ಹೀಗಾಗಿ ಭಾರತವು ಯಾಂತ್ರೀಕರಣ ಒಪ್ಪಿಕೊಂಡ ದೇಶಗಳಿಗೆ ಮಾತ್ರ ಪ್ರಬಲ ದೇಶವಾಗಿ ಕಾಣುತ್ತಿದೆ. ಏಕೆಂದರೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿ ಒಪ್ಪಿಕೊಂಡು ಜಗತ್ತು ಸಾಗುತ್ತಿದ್ದರೆ, ನಾವೂ ಮಾತ್ರ ಕೆಲಸವನ್ನು ಮಾಡುತ್ತಿದ್ದೇವೆ. ಆದರೆ ಸಮಾಜವು ಕಾಯಕವನ್ನು ಮಾಡುತ್ತಿಲ್ಲ. ಕೇವಲ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಸತ್ಯವನ್ನು ತಿಳಿಯಲು ವಿಫಲವಾಗಿದ್ದೇವೆ
ಎಂದರು.

ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಶ್ರೀ ಆಶೀರ್ವಚನ ನೀಡಿ, ಕಾಯಕದಲ್ಲಿ ಸಮಾನತೆ, ನಿಸ್ವಾರ್ಥ, ದಾಸೋಹದಂತಹ ಮಹತ್ವದ ಗುಣಗಳು ಅಡಕವಾಗಿವೆ ಎಂದರು. ಈ ವೇಳೆ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಿಥುನ ಪಾಟೀಲ ದಂಪತಿ ಸನ್ಮಾನಿಸಲಾಯಿತು.

Advertisement

ನರೇಗಲ್ಲ ಹಿರೇಮಠದ, ಮಲ್ಲಿಕಾರ್ಜುನ್‌ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಸಿದ್ದಪ್ಪ ಬಂಡಿ, ಅಪ್ಪು ಮತ್ತಿಕಟ್ಟಿ, ಎಸ್‌.ಎಸ್‌. ವಾಲಿ, ಟಿ.ಎಸ್‌. ರಾಜೂರ, ಎ.ಪಿ. ಗಾಣಗೇರ, ಬಿ.ವಿ. ಕಂಬಳ್ಯಾಳ, ಶರಣಪ್ಪ
ರೇವಡಿ ಸೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next