Advertisement

ಕಾರ್ಯ ಸಿದ್ದಿಗೆ ಕಾಯ, ಮನಸ್ಸು ಏಕಗೊಳ್ಳಬೇಕು: ಸರಸ್ವತೀ ಮಹಾಸ್ವಾಮೀಜಿ

10:32 AM Dec 23, 2021 | Team Udayavani |

ಶಿರಸಿ: ಮನುಷ್ಯ ಸಂಕಲ್ಪಿಸುವ ಕಾರ್ಯಗಳು ಸಿದ್ಧಿಸಲು ಕಾಯ ಮತ್ತು ಮನಸ್ಸು ಏಕವಾಗಿ ಕ್ರಿಯಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ನುಡಿದರು.

Advertisement

ಅವರು, ತಾಲೂಕಿನ ಬೆಂಗಳಿ ಶ್ರೀ ರಾಮೇಶ್ವರ ದೇವಸ್ಥಾನದ ಪುನರ್ ರ್ನಿರ್ಮಾಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ‌ ಸಾನ್ನಿಧ್ಯ‌ ನೀಡಿ ಆಶೀರ್ವಚನ‌ ನುಡಿದರು.

ದೇಗುಲಗಳ ಅಭಿವೃದ್ಧಿಯನ್ನು ಕಾಲಕಾಲಕ್ಕೆ ಮಾಡುತ್ತಿರಬೇಕಾಗುತ್ತದೆ. ನಾವು ನಮ್ಮ ಮನೆಗಳನ್ನು ಸದಾ ಶೃಂಗರಿಸುವುದರಲ್ಲಿ ಆಸಕ್ತರಾಗಿರುತ್ತೇವೆ. ಆದರೆ ಮನೆ ಮನೆತನಗಳನ್ನು ಕಾಯುವ ದೇವಸನ್ನಿಧಿ, ಆಪತ್ತು ಬಂದಾಗೆಲ್ಲ ಧಾವಿಸುವ ಊರನಡುವಿನ ದೇವಸ್ಥಾನದ ವಿಷಯ ಬಂದಾಗ ಆಮೇಲೆ ನೋಡೋಣ ಅನ್ನುವ ಧೋರಣೆ ಸಲ್ಲದು ಎಂದರು.

ಸ್ವಚ್ಛ ಪರಿಸರ ಆರೋಗ್ಯಕ್ಕೆ ಅವಶ್ಯಕ. ಹಾಗೆಯೇ ಪೂಜೆ ಸಲ್ಲಿಸುವ ಪ್ರಾರ್ಥನೆ ಸಲ್ಲಿಸುವ ದೇವಸ್ಥಾನದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯಕರ ಮನಸ್ಸಿಗೆ ಕಾರಣ ಅಂದೂ ತಿಳಿಸಿದರು.

ಊರ ಐತಿಹಾಸಿಕ ಮಾಹಿತಿಗಳನ್ನು ಮುಂದಿನ ತಲೆಮಾರಿಗೆ ಕಾಯ್ದಿಡುವ ಉದ್ದೇಶದಿಂದ ವೆಂಕಟೇಶ ದೀಕ್ಷಿತ್ ಮತ್ತು ದಿನೇಶ್ ಹೆಗಡೆ ನೇತೃತ್ವದ ಸ್ಮರಣ ಸಂಚಿಕೆಯನ್ನು ಶ್ರೀಗಳವರು ಬಿಡುಗಡೆ ಮಾಡಿದರು.

Advertisement

ಪ್ರಾಸ್ತಾವಿಕವಾಗಿ ಪ್ರಸನ್ನ ಹೆಗಡೆ ಮಾತನಾಡಿದರು. ಮೊಕ್ತೇಸರ ಲಕ್ಷ್ಮೀಶ ಹೆಗಡೆ, ಕಾರ್ಯದರ್ಶಿ ವಿನಾಯಕ ಹೆಗಡೆ, ವೇ. ಮೂ. ನಾಗೇಶ ಪತ್ರೆ, ವೇ. ಮೂ. ಪಶುಪತಿ ಶಾಸ್ತ್ರಿ ಮತ್ತು ಸೀಮಾಧ್ಯಕ್ಷ ಅನಂತ ಭಟ್ಟರು ಮತ್ತು ಊರಿನ ಸಮಸ್ತ ಗ್ರಾಮಸ್ಥರು  ಉಪಸ್ಥಿತರಿದ್ದರು. ಮುಂಜಾನೆಯಿಂದ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳು‌ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next