Advertisement

“ದಾಂಪತ್ಯ ಧರ್ಮ ಪಾಲನೆಯಿಂದ ನೆಮ್ಮದಿ ಸಾಧ್ಯ’

07:36 PM Dec 12, 2020 | Suhan S |

ಬೀದರ: ದಾಂಪತ್ಯ ಧರ್ಮ ಪಾಲನೆಯಿಂದ ಜೀವನ ಪ್ರೀತಿ, ಜಾಗತಿಕ ಶಾಂತಿ, ನೆಮ್ಮದಿ ಸಾಧ್ಯವೆಂದು ಡಿಸಿ ರಾಮಚಂದ್ರನ್‌ ಆರ್‌. ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಕಸಾಪ ಮತ್ತು ಬಸವ ಕೇಂದ್ರದಿಂದ ಚನಶೆಟ್ಟಿ ಪರಿವಾರದ ಕಲ್ಯಾಣಮಹೋತ್ಸವ ನಿಮಿತ್ತ ಆಯೋಜಿಸಿದ್ದಕಾವ್ಯ ಕುಂಚ ಗಾಯನ, ಜನಜಾಗೃತಿ ಕಾರ್ಯಕ್ರಮದಲ್ಲಿ ಸಾಹಿತಿ ಮೇನಕಾಪಾಟೀಲ ರಚಿತ “ಬಸವಪ್ರಿಯ ಡಾ| ಶಿವಾನಂದ ಸ್ವಾಮಿಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮದುವೆಗೆಸಾಂಸ್ಕೃತಿಕ ಸ್ಪರ್ಶ ನೀಡಿ ಕೊರೊನಾ, ಕೃಷಿ,ಪರಿಸರ, ಮತದಾನ, ಆರೋಗ್ಯ ಮೊದಲಾದ ವಿಷಯಗಳನ್ನು ಮದುವೆಯ ಭಾಗವಾಗಿ ಜನಜಾಗೃತಿ ಮಾಡುವುದರೊಂದಿಗೆ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಅಭಿನಂದನಾರ್ಹ ಕಾರ್ಯವಾಗಿದೆ ಎಂದರು.

ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು, ಶ್ರೀ ಅಕ್ಕ ಅನ್ನಪೂರ್ಣಮಾತನಾಡಿದರು. ಬಸವಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಉಮಾಕಾಂತಮುಸ್ತಾಪುರೆ, ಕನಕಟ್ಟಾ ಚಂದ್ರಶೇಖ ಚನಶೆಟ್ಟಿ ಭಾಗವಹಿಸಿದ್ದರು.

ಕಾವ್ಯ ಕುಂಚ ಗಾಯನ: ಸಮಾರಂಭದಲ್ಲಿ ಸಾಹಿತಿಗಳಾದ ವಿಜಯಕುಮಾರ ಗೌರೆ,ಚನ್ನಬಸವ ಹೇಡೆ, ಕಸ್ತೂರಿ ಪಟಪಳ್ಳಿ, ಸಾಧನಾ ರಂಜೋಳಕರ ಹಾಗೂ ಪುಷ್ಪಾ ಕನಕ ಕವನ ವಾಚನ ಮಾಡಿದರೆ ಅದಕ್ಕೆ ಶಿವಕುಮಾರ ಪಾಂಚಾಳ ಹಾಗೂ ಸಂಗಡಿರು ರಾಗ ಸಂಯೋಜಿಸಿ ಸಂಗೀತ ನೀಡಿದರು. ಅದಕ್ಕೆ ತಕ್ಕಂತೆ ಯೋಗೀಶ ಮಠದ ಅವರು ಕುಂಚದ ಮೂಲಕ ಚಿತ್ರ ಬಿಡಿಸಿದರು. ನಾಗರಾಜ ಜೋಗಿ ಮತ್ತು ವೈಜನಾಥ ಸಜ್ಜನಶೆಟ್ಟಿ ತಂಡದವು ಸಂಗೀತ ನಡೆಸಿಕೊಟ್ಟರು. ಆನಂದ ವಿಜಯಪುರ ಅವರಿಂದ ಜೂನಿಯರ್‌ ರವಿಚಂದ್ರ ಅಭಿನಯ ನಡೆಸಿಕೊಟ್ಟರು.

ನೂತನ ಸಂಸತ್‌ನಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪಿಸಲಿ :

Advertisement

ಬೀದರ: ದೆಹಲಿಯಲ್ಲಿ ನಿರ್ಮಿಸುತ್ತಿರುವ ನೂತನ ಸಂಸತ್‌ ಭವನದ ಪ್ರವೇಶ ದ್ವಾರದ ಎದುರು ಅನುಭವ ಮಂಟಪದಮೂಲಕ ವಿಶ್ವಕ್ಕೆ ಪ್ರಪ್ರಥಮ ಬಾರಿಗೆ ಸಂಸತ್ತಿನ ಪರಿಕಲ್ಪನೆ ಪರಿಚಯಿಸಿದ ಬಸವೇಶ್ವರರ ಪ್ರತಿಮೆ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಒತ್ತಾಯಿಸಿದ್ದಾರೆ.

ಪ್ರತಿಮೆ ಮೇಲೆ “ಜಗತ್ತಿನ ಮೊಟ್ಟ ಮೊದಲ ಪ್ರಜಾಪ್ರಭುತ್ವ ವಿಚಾರಗಳ ಪ್ರತಿಪಾದಕ ಹಾಗೂ ಲೋಕ ಸಂಸತ್ತಿನ ಸಂಸ್ಥಾಪಕ’ ಎಂದು ಬರೆಸಬೇಕು. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಅನುಭವ ಮಂಟಪದ ಚಿತ್ರ ಅಳವಡಿಸಬೇಕು. ಪ್ರಜಾಪ್ರಭುತ್ವ ಹಾಗೂ ವಿಶ್ವ ಕಲ್ಯಾಣದ ಸಂದೇಶ ಸಾರುವ ಬಸವಾದಿ ಶರಣರವಚನಗಳ ಫಲಕಗಳನ್ನು ತೂಗು ಹಾಕಬೇಕು ಎಂದು ಪ್ರಕಟಣೆ ಮೂಲಕ ಬೇಡಿಕೆ ಮಂಡಿಸಿದ್ದಾರೆ.

ವಾಸ್ತವ ತೆರೆದಿಟ್ಟ ಪ್ರಧಾನಿ: ಜಗತ್ತಿನಲ್ಲಿ 13ನೇ ಶತಮಾನದಲ್ಲಿ ರಚನೆಯಾದ ಮ್ಯಾಗ್ನಾ ಕಾರ್ಟಾ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ, ಅದಕ್ಕೂ ಮುನ್ನ ಅಂದರೆ 12ನೇ ಶತಮಾನದಲ್ಲೇ ಬಸವಣ್ಣ ಅನುಭವ ಮಂಟಪ ಮೂಲಕ ಲೋಕ ಸಂಸತ್ತಿನ ನಿರ್ಮಾಣಮಾಡಿದ್ದರು ಎಂದು ನೂತನ ಸಂಸತ್‌ ಭವನದ ಶಿಲಾನ್ಯಾಸಕಾರ್ಯಕ್ರಮದಲ್ಲಿ ಹೇಳುವ ಮೂಲಕ ಪ್ರಧಾನಿ ವಿಶ್ವದೆದುರು ವಾಸ್ತವ ಸಂಗತಿ ತೆರೆದಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next