Advertisement

‘Udaan’ ಖ್ಯಾತಿಯ ನಟಿ, ನಿರ್ದೇಶಕಿ ಕವಿತಾ ಚೌಧರಿ ವಿಧಿವಶ; ಗಣ್ಯರ ಸಂತಾಪ

03:24 PM Feb 16, 2024 | Team Udayavani |

ಅಮೃತಸರ : 1989 ರ ಸೂಪರ್‌ಹಿಟ್ ಟಿವಿ ಶೋ, ‘ಉಡಾನ್’ ಮತ್ತು ಸರ್ಫ್ ಜಾಹೀರಾತುಗಳಲ್ಲಿ ಲಲಿತಾ ಜಿ ಪಾತ್ರ ಹೆಸರುವಾಸಿಯಾಗಿದ್ದ ನಟಿ, ನಿರ್ದೇಶಕಿ ಕವಿತಾ ಚೌಧರಿ ಅವರು ಫೆಬ್ರವರಿ 15 ರಂದು ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

Advertisement

ಕವಿತಾ ಚೌಧರಿ ಅವರು ಅಪರೂಪದ ಪ್ರತಿಭಾ ಸಂಪನ್ನತೆಯೊಂದಿಗೆ ತೆರೆಯನ್ನು ಅಲಂಕರಿಸಿ ಭಾರತೀಯ ದೂರದರ್ಶನ ಸರಣಿ ‘ಉಡಾನ್’ ನಲ್ಲಿ IPS ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದ ಮೂಲಕ ವೀಕ್ಷಕರ ಹೃದಯದಲ್ಲಿ ಮಾಡಿಕೊಂಡಿದ್ದರು. ತನ್ನ ಆಕರ್ಷಕ ಮತ್ತು ಸೂಕ್ಷ್ಮವಾದ ಅಭಿನಯದಿಂದ ಪಾತ್ರಕ್ಕೆ ನ್ಯಾಯ ತುಂಬಿದ್ದರು. ಕಲ್ಯಾಣಿಯ ಅಚಲ ನಿರ್ಣಯ ಮತ್ತು ಶಕ್ತಿಯ ಮೂಲಕ ಪ್ರೇಕ್ಷಕರನ್ನು ಪ್ರೇರೇಪಿಸುವ ಕೆಲಸ ಮಾಡಿದ್ದರು. 80 ಮತ್ತು 90 ರ ದಶಕದ ಜಾಹೀರಾತುಗಳಲ್ಲಿ ಲಲಿತಾ-ಜಿ ಅವರ ಸಾಂಪ್ರದಾಯಿಕ ಚಿತ್ರಣಕ್ಕಾಗಿಯೂ ಹೆಸರುವಾಸಿಯಾಗಿದ್ದರು.

1989 ರಿಂದ 1991 ರವರೆಗೆ ಪ್ರಸಾರವಾದ ‘ಉಡಾನ್’, 2020 ರಲ್ಲಿ ರಾಷ್ಟ್ರವ್ಯಾಪಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಡಿಡಿ ನ್ಯಾಷನಲ್‌ನಲ್ಲಿ ಮರು ಪ್ರಸಾರವಾಗಿತ್ತು. ಉಡಾನ್ ನನ್ನ ಕವಿತಾ ಚೌಧರಿ ಬರೆದು ನಿರ್ದೇಶಿಸಿ ಪ್ರಮುಖ ಪಾತ್ರವನ್ನು ನಿರ್ವಹಿಸಿದುದು ಆ ಕಾಲದಲ್ಲಿ ಗಮನಸೆಳೆದಿತ್ತು. ಇದು ಭಾರತದ ಮಹಿಳಾ ಸಬಲೀಕರಣದ ಮೊದಲ ಪ್ರದರ್ಶನಗಳಲ್ಲಿ ಒಂದಾಗಿ ಅನೇಕ ವೀಕ್ಷಕರನ್ನು ಪ್ರೇರೇಪಿಸಿತ್ತು.

ಕೇಂದ್ರ ಸಚಿವೆ, ನಟಿ ಸ್ಮೃತಿ ಇರಾನಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next