Advertisement

Flood ಭೀತಿಯಲ್ಲಿ ಕಾವೇರಿ, ಕಪಿಲಾ: 319 ಜನರ ಸ್ಥಳಾಂತರ

11:04 PM Jul 31, 2024 | Team Udayavani |

ಮೈಸೂರು: ಕೆಆರ್‌ಎಸ್‌ ಜಲಾಶಯದಿಂದ 1.33 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದ್ದು  ಕಾವೇರಿ ಮತ್ತು ಕಪಿಲೆ ಸಂಗಮ ಸ್ಥಳವಾದ ತಿರುಮಕೂಡಲಿನ ಹಲವು ಪ್ರದೇಶ ಜಲಾವೃತವಾಗಿದೆ. ಇತ್ತ ಕಪಿಲೆಯ ಭೋರ್ಗರೆತದಿಂದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಲ್ಲನಮೂಲೆ ಮಠದ ಬಳಿ ನೀರು ಬಂದಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ.

Advertisement

ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಕಪಿಲಾ ನದಿಗೆ ಹರಿಬಿಟ್ಟಿರುವುದರಿಂದ ಎಚ್‌.ಡಿ. ಕೋಟೆಯ ಬಿದರಹಳ್ಳಿ ಬಳಿಯ ಸೇತುವೆ, ನಂಜನಗೂಡು ತಾಲೂಕಿನ ಕಡಜಟ್ಟಿ ಸೇತುವೆ, ಸುತ್ತೂರು, ಹರದನಹಳ್ಳಿ, ಮುಳ್ಳೂರು, ತೊರೆಮಾವು, ಮಲ್ಲನ ಮೂಲೆ ಮಠದ ಬಳಿಯ ಸೇತುವೆಗಳು ಮುಳುಗಡೆಯಾಗಿವೆ.

ಕಪಿಲೆ ಮತ್ತು ಕಾವೇರಿ ನದಿ ಸೃಷ್ಟಿಸಿರುವ ನೆರೆಯಿಂದ ಜಿಲ್ಲೆಯ 8 ಗ್ರಾಮಗಳು ಸಮಸ್ಯೆಗೀಡಾಗಿವೆ. ನಂಜನಗೂಡು ತಾಲೂಕಿನಲ್ಲಿ 105 ಕುಟುಂಬದ 254 ಸದಸ್ಯರು, ತಿ. ನರಸೀಪುರದ 29 ಕುಟುಂಬಗಳಲ್ಲಿನ 65 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ 306 ಮಂದಿ ಕಾಳಜಿ ಕೇಂದ್ರದಲ್ಲಿದ್ದು, ಉಳಿದ 13 ಮಂದಿ ಸಂಬಂಧಿಕರ ಮನೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next