Advertisement

ಕೆ.ಆರ್‌.ನಗರ ಬಹುತೇಕ ಹಳ್ಳಿಗೆ ಕಾವೇರಿ ನೀಡಲು ಶ್ರಮ

12:34 PM Mar 14, 2018 | Team Udayavani |

ಕೆ.ಆರ್‌.ನಗರ: ತಾಲೂಕಿನ 200 ಹಳ್ಳಿಗಳನ್ನು ನಾನು ಸುತ್ತಿದ್ದೇನೆ. ಕೆಲವು ಬೆರಳೆಣಿಕೆಯಷ್ಟು ಊರುಗಳನ್ನು ಬಿಟ್ಟರೆ ಎಲ್ಲಾ ಹಳ್ಳಿಗಳಿಗೂ ಕಾವೇರಿ ಹೊಳೆಯಿಂದ ಶಾಶ್ವತ ಕುಡಿವ ನೀರು ದೊರೆಯುವಂತೆ ಮಾಡಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್‌ ಅಭಿಪ್ರಾಯಪಟ್ಟರು.

Advertisement

ಅವರು ಇಲ್ಲಿನ ಅಖೀಲನಾಮದಾರಿ ಸಮಾಜದವರು ಮಂಗಳವಾರ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ಕೂಡ ಇತರೆ ಸಮಾಜದವರಲ್ಲಿ ನಾಮದಾರಿಗೌಡ ಸಮುದಾಯದವರು ನನಗೆ ಹೆಚ್ಚಿನ ರೀತಿಯಲ್ಲಿ ಬೆಂಬಲಿಸಿ ಗೆಲುವಿಗೆ ಸಹಕರಿಸಿದ್ದರು.

ನಾನು ಈ ತಾಲೂಕಿನ ಶಾಸಕನಾಗಿ ಎಲ್ಲರ ಮನೆಮಗನಾಗಿ, ಸ್ನೇಹಿತನಾಗಿ ಇರಲು ನೀವೆಲ್ಲ ಸಹಕರಿಸಿದ್ದೀರಿ ಎಂದರು. ತಾಲೂಕಿನ 200 ಹಳ್ಳಿಗಳನ್ನು ನಾನು ಸುತ್ತಿದ್ದೇನೆ. ಕೆಲವು ಬೆರಳೆಣಿಕೆಯಷ್ಟು ಊರುಗಳನ್ನು ಬಿಟ್ಟರೆ ಎಲ್ಲಾ ಹಳ್ಳಿಗಳಿಗೂ ಕಾವೇರಿ ಹೊಳೆಯಿಂದ ಶಾಶ್ವತ ಕುಡಿಯೂವ ನೀರು ದೊರೆಯುವಂತೆ ಮಾಡಿದ್ದೇನೆ. ಆರೂವರೆ ಕೋಟಿ ರೂ.ವೆಚ್ಚದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಗುದ್ದಲಿ ಪೂಜೆ ನಡೆಯಲಿದೆ ಎಂದರು.

ಸಮಾಜದ ಜಿಪಂ ಸದಸ್ಯೆ ಪರಿಮಳ ಶ್ಯಾಮಸುಂದರ್‌ ಅವರನ್ನು ಮುಂದಿನ ದಿನಗಳಲ್ಲಿ ಜಿಪಂ ಅಧ್ಯಕ್ಷೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಮುದಾಯಭವನಕ್ಕೆ ಈಗಾಗಲೇ 21 ಲಕ್ಷ ಸಹಾಯ ಕಲ್ಪಿಸಿದ್ದು, ಇನ್ನೂ ಹೆಚ್ಚುವರಿ 9ಲಕ್ಷ ರೂ.ಸಹಾಯ ಕಲ್ಪಿಸುವ ಭರವಸೆ ನೀಡಿದರು. ಮುಂಬರುವ ಚುನಾವಣೆಯಲ್ಲಿ ಕೂಡ ನಿಮ್ಮ ಪ್ರೀತಿ ಬೆಂಬಲ ಕೋರುವುದಾಗಿ ಮನವಿ ಮಾಡಿದರು.

ಶಾಸಕರಿಗೆ ಬಂಬಲ: ತಾಲೂಕು ಅಧ್ಯಕ್ಷ ರಾಮಸ್ವಾಮಿ ಮಾತನಾಡಿ, ನಮ್ಮದು ಸ್ವಾಭಿಮಾನಿ ಸಮುದಾಯ. ಶಾಸಕರು ಸಮುದಾಯಭವನ ಸೇರಿದಂತೆ ಸಮಾಜದ ಅನೇಕ ಕೆಲಸಗಳಿಗೆ ಸಹಾಯ ಹಸ್ತ ನೀಡಿದ್ದು, ಚುನಾವಣೆಯಲ್ಲಿ ಮತ್ತೆ ಶಾಸಕರನ್ನು ಬೆಂಬಲಿಸಬೇಕೆಂದು ಕೋರಿದರು.

Advertisement

ಮಾಜಿ ಅಧ್ಯಕ್ಷ ಎಂ.ಕೆ. ರಾಜು, ಮಂಡ್ಯ ಜಿಪಂ ಸದಸ್ಯೆ ಶಾಂತಲಾ ರಾಮಕೃಷ್ಣೇಗೌಡ, ತಾಪಂ ಸದಸ್ಯ ತಟ್ಟೆಕೆರೆ ಶ್ರೀನಿವಾಸ್‌, ಜಿಪಂ ಸದಸ್ಯೆ ಪರಿಮಳಶ್ಯಾಮ ಸುಂದರ್‌, ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ಬಸಂತ್‌ ಮೊದಲಾದವರು ಮಾತನಾಡಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಚಂದ್ರ ಶೇಕರ್‌, ಹಿರಿಯ ನಿವೃತ್ತ ಉಪನ್ಯಾಸಕ ಲಕ್ಕೇಗೌಡ, ಮುಖಂಡರಾದ ತಿಮ್ಮೇಗೌಡ, ಗಿರೀಶ್‌, ತ್ಯಾಗರಾಜ್‌, ಡೈರಿ ಪ್ರಕಾಶ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next