Advertisement

ಕಾಪು: ರಸ್ತೆ ಸುರಕ್ಷತಾ ನಿಯಮ ಪಾಲಿಸದ ವಾಹನಗಳಿಗೆ ದಂಡ

01:00 AM Mar 15, 2019 | Harsha Rao |

ಕಾಪು: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ ವಾಹನಗಳನ್ನು ತಪಾಸಣೆ ನಡೆಸಿದ ಕಾಪು ಕ್ರೈಂ ಎಸ್ಸೆ ಜಾನಕಿ ಅವರು ಒಂದೇ ದಿನ ನಡೆಸಿದ ಕಾರ್ಯಾಚರಣೆಯಲ್ಲಿ 32 ಮಂದಿ ವಾಹನ ಚಾಲಕರ ವಿರುದ್ಧ ಕೇಸ್‌ ದಾಖಲಿಸಿ 2,600 ರೂ. ದಂಡ ಸಂಗ್ರಹಿಸಿದ್ದಾರೆ.

Advertisement

ಬೈಕ್‌ ಚಾಲಕರು ಹೆಲ್ಮೆಟ್‌ ರಹಿತರಾಗಿ, ಕಾರು ಚಾಲಕರು ಸೀಟ್‌ ಬೆಲ್ಟ್ ರಹಿತವಾಗಿ, ದಾಖಲೆಗಳ ರಹಿತವಾಗಿ ರಾ.ಹೆ. 66ರಲ್ಲಿ ವಾಹನ ಚಲಾಯಿಸುತ್ತಿದ್ದು  ಅವರನ್ನು ಪತ್ತೆ ಹಚ್ಚಿ ಎಚ್ಚರಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಇಂತಹ ಕಾರ್ಯಾಚರಣೆ ನಡೆಸಿದೆ.  

ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಹನ ಚಾಲಕರು ಜಾಗರೂಕರಾಗಿ ವಾಹನ ಚಲಾಯಿಸುವುದು, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಅಪರಾಧ ತಡೆಗೆ ಪೊಲೀಸ್‌ ಇಲಾಖೆಯ ಜೊತೆಗೆ ಮುಕ್ತವಾಗಿ ಕೈ ಜೋಡಿಸುವಂತೆ ಕ್ರೈಂ ಎಸ್‌ಐ ಜಾನಕಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next