Advertisement

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

02:42 PM Nov 08, 2024 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯ ತಲ್ಮಕ್ಕಿ ಕಾಂಪ್ಲೆ ಕ್ಸ್‌ನ ಮುಂಭಾಗದಲ್ಲಿ ತಡರಾತ್ರಿ ಐಶಾರಾಮಿ ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ದನಗಳನ್ನು ಕಳವುಗೈಯುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಹುಣ್ಸೆಮಕ್ಕಿ ಮೇಲ್‌ಪೇಟೆ ಹಾಗೂ ಕೆಳಪೇಟೆಯ ಅಂಗಡಿ ಮುಂಗಟ್ಟಿನ ಬಳಿ ದನಗಳು ಮಲಗುತ್ತಿದ್ದು, ತಡರಾತ್ರಿ ಮುಸುಕುಧಾರಿಗಳ ತಂಡವು ದನಗಳಿಗೆ ಆಹಾರ ನೀಡುವ ನೆಪದಲ್ಲಿ ಸಮೀಪಕ್ಕೆ ತೆರಳಿ ಅವುಗಳನ್ನು ಕಾರಿನ ಢಿಕ್ಕಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗುವ ದೃಶ್ಯವು ಇಲ್ಲಿನ ಕಾಂಪ್ಲೆಕ್ಸ್‌ ನಲ್ಲಿ ಅಳವಡಿಸಿದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಸೂಕ್ತ ಕ್ರಮಕ್ಕೆ ಆಗ್ರಹ
ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನತೆ ಹಸುಗಳನ್ನು ಮೇವಿಗಾಗಿ ಹೊರ ಬಿಡಲಾಗುತ್ತಿದ್ದು, ಅವುಗಳು ಆಹಾರ ಅರಸಿ ಪ್ರಮುಖ ಭಾಗಗಳಿಗೆ ಬರುವ ಪರಿಣಾಮ ದನಗಳ ನಾಪತ್ತೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಮಾರಕಾಸ್ತ್ರಗಳೊಂದಿಗೆ ಬರುವ ಮುಸುಕುಧಾರಿಗಳಿಂದ ಆತಂಕ
ಮುಸುಕುಧಾರಿ ಕಳ್ಳರು ಮಾರಕಾಸ್ತ್ರಗಳನ್ನು ಇರಿಸಿಕೊಂಡು ಬರುವುದರಿಂದ ಸ್ಥಳೀಯ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಆತಂಕದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್‌ ಇಲಾಖೆ ಗ್ರಾಮದ ಪ್ರಮುಖ ಭಾಗಗಳಲ್ಲಿ ಸಿಸಿ ಕೆಮರಾವನ್ನು ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ ಸದಸ್ಯ ಸಂತೋಷ್‌ ಪೂಜಾರಿ ಅವರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next