Advertisement
ಕಾಪು: ತಾಲೂಕು ಕೇಂದ್ರವಾಗಿರುವ ಕಾಪು ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ವ್ಯಾಪಕ ನಿರೀಕ್ಷೆಯನ್ನು ಹೊಂದಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಿದ್ದು, ಮುಂದಿನ ದಿನಗಳಲ್ಲಿ ಸುಧಾರಿತ ವೈದ್ಯಕೀಯ ಸೇವೆಯ ಆಶಯ ಹೊಂದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ
ಪ್ರಸ್ತುತ 6 ಬೆಡ್ (3 ಪುರುಷ – 3 ಮಹಿಳೆ) ಗಳ ಸೌಲಭ್ಯಹೊಂದಿದೆ. ನಿತ್ಯ 70ರಿಂದ 80 ಮಂದಿ ರೋಗಿ
ಗಳು ಇಲ್ಲಿಗೆ ತಪಾಸಣೆಗೆ ಆಗಮಿಸುತ್ತಾರೆ. ಪ್ರಾ.ಆ. ಕೇಂದ್ರ ವ್ಯಾಪ್ತಿಯಲ್ಲಿ 9 ಉಪ ಆರೋಗ್ಯ ಕೇಂದ್ರಗಳಿದ್ದು ನಾಲ್ಕು ಕಡೆ ಕಟ್ಟಡಗಳಿಲ್ಲ. ಸಿಬಂದಿಯೂ ಇಲ್ಲ. ಕಾಪು, ಕಾಪು ಪಡು, ಮೂಳೂರು, ಉಳಿಯಾರಗೋಳಿ, ಕೈಪುಂಜಾಲು, ಮಲ್ಲಾರು, ಪಾಂಗಾಳ, ಇನ್ನಂಜೆ,
ಮಜೂರು, ಪಾದೂರು, ಹೇರೂರು, ಉಚ್ಚಿಲ, ಬೆಳಪು, ಪಣಿಯೂರು ಸಹಿತ ಹಲವು ಪ್ರದೇಶಗಳ ಜನರು ಇಲ್ಲಿನ ಪ್ರಾ.ಆ. ಕೇಂದ್ರವನ್ನು ಅವಲಂಬಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಪೂರ್ಣಕಾಲಿಕ ವೈದ್ಯರ ಹುದ್ದೆ ಖಾಲಿಯಿದ್ದು, ಪಡುಬಿದ್ರಿಯ ವೈದ್ಯಾಧಿಕಾರಿ ಚಾರ್ಜ್‌ನಲ್ಲಿದ್ದಾರೆ. ದಿನಕ್ಕೊಬ್ಬ ವೈದ್ಯರು ಬರುವುದ ರಿಂದ ಶಾಶ್ವತ ವೈದ್ಯಾಧಿಕಾರಿಗಳ ಬಗ್ಗೆ ಜನತೆ ಅಸಮಾಧಾನ ಹೊಂದಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ 9 ಸರಕಾರಿ ಆಸ್ಪತ್ರೆ
ಸಮುದಾಯ ಆರೋಗ್ಯ ಕೇಂದ್ರ- ಶಿರ್ವ, ಪ್ರಾ.ಆ. ಕೇಂದ್ರ – ಕಾಪು, ಪಡುಬಿದ್ರಿ, ಮೂಡಬೆಟ್ಟು ಮತ್ತು ಮುದರಂಗಡಿ ಆಯುರ್ವೇದ ಪ್ರಾಥಮಿಕ ಆರೋಗ್ಯ ಕೇಂದ್ರ – ಪಣಿಯೂರು, ಪಲಿಮಾರು, ಮಲ್ಲಾರು, ಕುರ್ಕಾಲು .
Related Articles
ತಾಲೂಕು ವ್ಯಾಪ್ತಿಯ ಹೆಚ್ಚಿನ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ವ್ಯಾಪಕವಾಗಿದೆ. ಸಿಬಂದಿಗೆ ವಸತಿ ಸೌಲಭ್ಯದ ಕೊರತೆಯೂ ಇದೆ. ತಾಲೂಕಿನಾದ್ಯಂತ 135 ಹುದ್ದೆಗಳು ಮಂಜೂರಾಗಿದ್ದರೆ, ಅವುಗಳಲ್ಲಿ 72 ಹುದ್ದೆ ಖಾಲಿ ಇವೆ.
Advertisement
ತಾಲೂಕು ಆಸ್ಪತ್ರೆಯಾದರೆ ಲಾಭ ಈಗಿರುವ 6 ಬೆಡ್‌ಗಳ ಆಸ್ಪತ್ರೆಯ ಬದಲಾಗಿ 100 ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾಗಲು ಅವಕಾಶವಿದೆ. 95 ಪೂರ್ಣಕಾಲಿಕ ಸಿಬಂದಿ ನೇಮಕವಾಗಲಿದ್ದಾರೆ. ಸ್ಕ್ಯಾನಿಂಗ್, ಕಣ್ಣು, ಮೂಗು, ರಕ್ತ ಪರೀಕ್ಷೆ, ಹೆರಿಗೆ ಸೇರಿದಂತೆ ವಿವಿಧ ತಜ್ಞರ ಸೇವೆಗಳು ಲಭ್ಯವಾಗಲಿವೆ. ಖಾಸಗಿಯವರಿಂದಲೂ ಸೇವೆ
ಕಾಪು ಪೇಟೆಗೆ ಸನಿಹದ ಕೊಪ್ಪಲಂಗಡಿಯಲ್ಲಿ ಪ್ರಶಾಂತ್ ಆಸ್ಪತ್ರೆ, ಕಾಪು ನಸಿಂìಂಗ್ ಹೋಂ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿವೆ. ಇನ್ನು 10ಕ್ಕೂ ಅಧಿಕ ಕ್ಲಿನಿಕ್‌ಗಳು, 4 ಮೆಡಿಕಲ್ ಲ್ಯಾಬ್‌ಗಳು, 6 ಮೆಡಿಕಲ್ ಶಾಪ್‌ಗ್ಳು ಕ್ಷೇತ್ರದ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿವೆ. ತುರ್ತಾಗಿ ಆಗಬೇಕಾದ್ದೇನು? “
ಗ್ರಾಮೀಣ ಜನರು ಚಿಕಿತ್ಸೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.ಇಲ್ಲಿ ತಾಲೂಕು ಆಸ್ಪತ್ರೆಯಾಗುವ ಮೊದಲು ತುರ್ತು ಚಿಕಿತ್ಸೆ, ಒಳರೋಗಿ ಸೌಲಭ್ಯಗಳು ಬೇಕು ಎಂಬ ಬೇಡಿಕೆ ಇದೆ. ಇವುಗಳೊಂದಿಗೆ ಶೀತಲೀಕೃತ ಶವಾಗಾರ, ಎಕ್ಸ್‌ರೇ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ತ್ರೀ ರೋಗ ತಜ್ಞರ ಸಹಿತವಾದ ವಿವಿಧ ಸೌಲಭ್ಯಗಳು ಬೇಕಿವೆ. ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 9148594259 ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ. – ರಾಕೇಶ್ ಕುಂಜೂರು