Advertisement

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

06:34 PM May 19, 2024 | Team Udayavani |

ಕಾಪು: ಬಾವಿಗೆ ಬಿದ್ದು ಮೇಲೆ ಬರಲಾಗದೆ ಜೀವ ಭಯದಿಂದ ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯನ್ನು ಯುವಕರು ರಕ್ಷಿಸಿ ಜೀವದಾನ ನೀಡಿದ ಘಟನೆ ಮೂಳೂರಿನಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

Advertisement

ಆಹಾರ ಅರಸುತ್ತಾ ಸಂಚಾರದಲ್ಲಿದ್ದ ನವಿಲು ಶನಿವಾರ ರಾತ್ರಿಯ ವೇಳೆಗೆ ಮೂಳೂರು ತಾರಿಬೆಟ್ಟುವಿನ ಸುಲೋಚನಾ ಕರ್ಕೇರ ಎಂಬವರ ಮನೆಯ ಬಾವಿಗೆ ಬಿದ್ದಿತ್ತು. ರವಿವಾರ ಬೆಳಗ್ಗೆ 5.30 ರ ವೇಳೆಗೆ ಬಾವಿಯಿಂದ ನೀರು ಎತ್ತಲು ಮನೆಯವರು ಬಂದಾಗ ಒದ್ದಾಡುತ್ತಿದ್ದ ನವಿಲನ್ನು ಗಮನಿಸಿ ಯುವಕರಿಗೆ ವಿಷಯ ತಿಳಿಸಿದ್ದರು.

ತತ್‌ಕ್ಷಣ ನಿದ್ದೆಯಿಂದ ಎದ್ದು ಬಂದ ಯುವಕರು ಯಾರಾದರೂ ಬಾವಿಗೆ ಇಳಿದು ನವಿಲನ್ನು ರಕ್ಷಿಸುವವರು ಸಿಗಬಹುದೇ ಎಂದು ಪ್ರಯತ್ನಿಸಿದ್ದು ಯಾರೂ ಸಿಗದೇ ಇದ್ದಾಗ ಸ್ವತಃ ತಾವೇ ಬಾವಿಯಿಂದ ನವಿಲನ್ನು ರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದರು.

ತಾರಿಬೆಟ್ಟುವಿನ ಅಭಿಷೇಕ್, ತೇಜಸ್, ಶೇಖರ್, ರೋಶನ್, ರಕ್ಷಿತ್, ರಿಶಿತ್, ಧನ್ವಿತ್, ಹರ್ಷಿತ್, ಕನಿಷ್ಕ್ ಮೊದಲಾದವರು ಜತೆ ಸೇರಿಸಿ ಬಾವಿಗೆ ಬುಟ್ಟಿ ಇಳಿಸಿ, ಕೋಲಿನ ಮೂಲಕ ನವಿಲನ್ನು ಬುಟ್ಟಿಗೆ ಬರುವಂತೆ ಮಾಡಿದ್ದು, ಬಳಿಕ ಶ್ರಮ ವಹಿಸಿ ಮೇಲಕ್ಕೆತ್ತಿದ್ದಾರೆ. ಸುಮಾರು ಒಂದೂ ಕಾಲು ಘಂಟೆಯ ಶ್ರಮದ ಬಳಿಕ ನವಿಲನ್ನು ಮೇಲಕ್ಕೆತ್ತಿದ್ದು ಮೇಲೆ ಬಂದ ನವಿಲು ಸ್ವಲ್ಪ ಹೊತ್ತು ತಿರುಗಾಡಿ ಬಳಿಕ ಹಾರಿ ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next