Advertisement
ಅಪಘಾತ ಹೆಚ್ಚಳ
Related Articles
Advertisement
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಪದೇಪದೇ ಪ್ರಶ್ನಿಸಿದ ಪರಿಣಾಮ ಕಾಪು-ಮೂಳೂರು ನಡುವಿನ ಲೈಟ್‌ಗಳನ್ನು ದುರಸ್ತಿಪಡಿಸಿದ್ದಾರಾದರೂ, ಮೂಳೂರು- ಉಚ್ಚಿಲ-ಎರ್ಮಾಳು ನಡುವಿನ ದೀಪಗಳಿಗೆ ಇನ್ನೂ ದುರಸ್ತಿಗೊಂಡು, ಪ್ರಕಾಶಿಸುವ ಯೋಗವೇ ಸಿಕ್ಕಿಲ್ಲ.
ಕತ್ತಲ ಕೂಪದಲ್ಲಿ ಹಲವು ಸಮಸ್ಯೆ
ಪಡುಬಿದ್ರಿ – ಉಚ್ಚಿಲ – ಉದ್ಯಾವರದ ನಡುವಿನ ಹೆದ್ದಾರಿಯುದ್ದಕ್ಕೂ ಹೊಂಡ ಬಿದ್ದಿದೆ. ಹೊಂಡದ ಅರಿವಿರದ ಹೊರ ರಾಜ್ಯಗಳ ಸವಾರರು ಹೊಂಡ ತಪ್ಪಿಸಲು ಹೋಗಿ ಡಿವೈಡರ್ ಮೇಲೇರಿದ, ರಸ್ತೆ ಬದಿಯ ಗುಂಡಿಗೆ ಬಿದ್ದ ಹಲವು ನಿದರ್ಶನಗಳಿವೆ.
ಕೆಲವು ಸಲ ವಿರುದ್ಧ ದಿಕ್ಕಿನಲ್ಲಿ ಬರುವ ಭಾರೀ ವಾಹನಗಳ ಪ್ರಖರ ಹೈಡ್‌ಲೈಟ್‌ನಿಂದ ಎದುರಿನ ವಾಹನಗಳು ಕಾಣಿಸದೇ ಬೈಕ್, ರಿಕ್ಷಾ ಮತ್ತು ಕಾರು ಚಾಲಕರು ತಾವಾಗಿಯೇ ಘನ ವಾಹನಗಳಿಗೆ ಢಿಕ್ಕಿ ಹೊಡೆಯುತ್ತಾರೆ.
ಕತ್ತಲೆ ಇರುವುದರಿಂದ ಮದ್ಯ, ಗಾಂಜಾ ಸೇವನೆಯಂಥ ಅಕ್ರಮ ಚಟುವಟಿಕೆಗಳಿಗೆ ದಾರಿಯಾಗಿದೆ. ಮದ್ಯದ ಬಾಟಲಿಗಳನ್ನು ರಸ್ತೆಗೇ ಎಸೆಯುವುದೂ ಇದೆ.
ಕತ್ತಲಲ್ಲಿ ಕಾರು ನಿಲ್ಲಿಸಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ.
ಹೆದ್ದಾರಿಯಲ್ಲಿ ಸರಗಳ್ಳತನ, ಒಂಟಿ ವಾಹನ ಚಾಲಕರ ದರೋಡೆ, ಮಹಿಳೆಯರಿಗೆ ಕಿರುಕುಳ ಮೊದಲಾದ ಘಟನೆಗಳು ನಡೆಯುತ್ತಿವೆ.
ಮಳೆ ನಿಂತಿದೆ, ಬೇಗ ಸರಿಪಡಿಸಿ
ಕತ್ತಲು ಆವರಿಸಿರುವ ಬಗ್ಗೆ ಮತ್ತು ಹೊಂಡಗಳು ಬಿದ್ದಿರುವ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಟೋಲ್ ನಿರ್ವಹಿಸುವವರೇ ಇದನ್ನು ನಿರ್ವಹಿಸಬೇಕಿದ್ದು ಸಂಸದರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತುರ್ತಾಗಿ ಇದನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿವರೆಗೆ ಮಳೆ ಕಾರಣ ನೀಡುತ್ತಿದ್ದರು. ಈಗ ಮಳೆ ಬಿಟ್ಟಿದ್ದು ಶೀಘ್ರ ಹೆದ್ದಾರಿ ದಾರಿ ದೀಪಗಳ ದುರಸ್ತಿಗೆ ಮತ್ತೆ ಸೂಚನೆ ನೀಡಲಾಗುವುದು.-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು ಎಷ್ಟು ದೂರು ನೀಡಿದರೂ ಸ್ಪಂದನೆ ಇಲ್ಲ ದೀಪಗಳನ್ನು ಸರಿಪಡಿಸುವಂತೆ ಗ್ರಾ.ಪಂ. ಮೂಲಕ ಹೈವೇ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಡಿಸಿ ಜನ ಸ್ಪಂದನ ಸಭೆಯಲ್ಲೂ ದೂರು ನೀಡಲಾಗಿದೆ. ನರ ಸಮಸ್ಯೆ ಸರಿಪಡಿಸುವಂತೆ ಶಾಸಕರು, ಸಂಸದರು ಕೂಡ ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆ ದಾರರಿಗೆ ಸೂಚನೆ ನೀಡಿದ್ದಾರೆ. ಆದರೂ ಇದಕ್ಕೆ ಇನ್ನೂ ಸ್ಪಂದನೆಯೇ ಸಿಕ್ಕಿಲ್ಲ.
-ಚಂದ್ರಶೇಖರ್ ಕೋಟ್ಯಾನ್, ಮಾಜಿ ಅಧ್ಯಕ್ಷರು, ಬಡಾ ಗ್ರಾ.ಪಂ. – ರಾಕೇಶ್ ಕುಂಜೂರು