Advertisement

ಆನೆಗುಂದಿ: ಶಿವಾರ್ಚನಂ ಧಾರ್ಮಿಕ ಕಾರ್ಯಕ್ರ ಮ ಸಂಪನ್ನ

01:10 PM Sep 11, 2023 | Team Udayavani |

ಕಾಪು: ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದಲ್ಲಿ ಆನೆಗುಂದಿ ಪ್ರತಿಷ್ಠಾನದ ನೇತೃತ್ವದಲ್ಲಿ ಪಟ್ಟದ ದೇವ ರಾದ ಚಂದ್ರಮೌಳೀಶ್ವರ ದೇವರ ಅನುಗ್ರಹ ಪ್ರಾಪ್ತಿಗೆ ಆನೆಂಗುಂದಿ ಮಠಾಧೀಶ ಶ್ರೀ ಕಾಳಹಸ್ತೇಂದ್ರ ಶ್ರೀಗಳ ಮಾರ್ಗದರ್ಶನದಲ್ಲಿ ರವಿವಾರ ಶಿವ ಸಹಸ್ರನಾಮ, ಭಸ್ಮಾರ್ಚನೆ, ಬಿಲ್ವಾರ್ಚನೆ ದ್ರೋಣ ಪುಷ್ಪಾರ್ಚನೆ, ಅಷ್ಟೋತ್ತರ ಅರ್ಚನೆ ಸಹಿತವಾಗಿ ರುದ್ರಾಕ್ಷಿ ಮಾಲೆಗೆ ಅರ್ಚನೆ ಸಹಿತವಾಗಿ ಶಿವಾರ್ಚನಂ ವಿಶೇಷ ಕಾರ್ಯಕ್ರಮ ಜರಗಿತು.

Advertisement

ಆನೆಗುಂದಿ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಅಸೆಟ್‌ ಅಧ್ಯಕ್ಷ ಬಿ. ಸೂರ್ಯಕುಮಾರ ಹಳೆಯಂಗಡಿ, ಮಾತೃಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರಮುಖರಾದ ಪಿ. ವಿ. ಗಂಗಾಧರ ಆಚಾರ್ಯ, ತ್ರಾಸಿ ಸುಧಾಕರ ಆಚಾರ್ಯ, ಕಳಿ ಚಂದ್ರಯ್ಯ ಆಚಾರ್ಯ, ಸುಂದರ ಆಚಾರ್ಯ ಕೋಟೆಕಾರು, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಸುರೇಶ್‌ ಆಚಾರ್ಯ ನಿಟ್ಟೆ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಶೇಖರ ಆಚಾರ್ಯ ಕಾಪು, ಬಾಲಕೃಷ್ಣ ಆಚಾರ್ಯ ಬೆಳಪು, ಡಾ| ಬಾಲಕೃಷ್ಣ ಹೊಸಂಗಡಿ, ಡಾ| ಗೋಪಾಲಕೃಷ್ಣ ಆಚಾರ್ಯ ನವದೆಹಲಿ, ಡಾ| ವಿ. ಪಿ. ರಾಘವನ್‌ ಕಣ್ಣೂರು, ರೂಪೇಶ್‌ ಆಚಾರ್ಯ ಶಿರ್ವ, ಗುರುರಾಜ್‌ ಕೆ.ಜೆ. ಮಂಗಳೂರು, ಬಂಬ್ರಾಣ ಯಜ್ಞೆàಶ ಆಚಾರ್ಯ ಮಂಗಳೂರು, ದಿನೇಶ್‌ ಆಚಾರ್ಯ ಪಡುಬಿದ್ರಿ, ಬಿ. ಸುಂದರ ಆಚಾರ್ಯ ಮಂಗಳೂರು, ಧ್ವಜ ಸಮಿತಿಯ ಸಂಚಾಲಕ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು, ರಮಾ ನವೀನ್‌ ಆಚಾರ್ಯ ಕಾರ್ಕಳ, ದಿನೇಶ್‌ ಆಚಾರ್ಯ ಕಿನ್ನಿಗೊಳಿ, ಯೋಗೀಶ್‌ ಆಚಾರ್ಯ ಕರಂಬಳ್ಳಿ, ಕೆಮ್ಮಣ್ಣು ಗಣೇಶ ಆಚಾರ್ಯ, ವೈ. ಧರ್ಮೇಂದ್ರ ಆಚಾರ್ಯ ಕಾಸರ ಗೋಡು, ಯೋಗೀಶ್‌ ಆಚಾರ್ಯ ಕೊಯಂಬತ್ತೂರು, ರಾಘವೇಂದ್ರ ಆಚಾರ್ಯ ಉಡುಪಿ,ರತ್ನಾಕರ ಆಚಾರ್ಯ ಉದ್ಯಾವರ, ಜನಾರ್ದನ ಆಚಾರ್ಯ ಕನ್ಯಾನ, ವಾದಿರಾಜ ಆಚಾರ್ಯ ಮಂಗಳೂರು, ಸತೀಶ್‌ ಆಚಾರ್ಯ ಸುರುಳಿ ಇದ್ದರು. ಸೇರಿದಂತೆ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಪೂರ್ವ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಮಹಾ ಸಂಸ್ಥಾನದ ವೈದಿಕ ವೃಂದ ಹಾಗೂ ಆಸ್ಥಾನ ವಿದ್ವಾಂಸ ವೇ| ಬ್ರ| ಶಂಕರಾಚಾರ್ಯ ಕಡ್ಲಾಸ್ಕರ್‌, ಅಕ್ಷಯ ಶರ್ಮ ಕಟಪಾಡಿ, ಮನೋಜ್‌ ಶರ್ಮ, ಮೌನೇಶ್‌ ಶರ್ಮ ವೈದಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿಶೇಷ ಅಷ್ಟಾವಧಾನ ಸೇವೆಯಲ್ಲಿ ವೇದಘೋಷ, ಭಜನೆ, ಸಂಗೀತ, ವಾದ್ಯ ಘೋಷಗಳು, ಚೆಂಡೆ ಮೇಳಗಳು, ಭರತನಾಟ್ಯ, ಯಕ್ಷಗಾನ ಸೇವೆ ನಡೆಯಿತು. 450 ದಂಪತಿಗಳು ಅರ್ಚನೆಯಲ್ಲಿ ಭಾಗವಹಿಸಿದ್ದರು.

ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಲೋಕೇಶ್‌ ಎಂ. ಬಿ. ಆಚಾರ್‌ ಕಂಬಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪವನ್‌ ಶರ್ಮ ಚಿಂತನ ಕಾರ್ಯಕ್ರಮ ನಡೆಸಿದರು. ಲೋಲಾಕ್ಷ ಶರ್ಮ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next