Advertisement

ಕಾಪು ಮಲ್ಲಾರು:  ಆಯುಷ್‌ ಚಿಕಿತ್ಸಾಲಯ ಉದ್ಘಾಟನೆ

07:40 AM Oct 06, 2017 | Harsha Rao |

ಕಾಪು: ಸೈಯ್ಯದ್‌ ಖ್ವಾಜಾಪೀರನ್‌ ಎಜುಕೇಶನ್‌ ಕಮಿಟಿಯ ಅಂಗ ಸಂಸ್ಥೆ ಎಸ್‌.ಕೆ.ಪಿ. ಹೆಲ್ತ್‌ ಸೆಂಟರ್‌
ಮಲ್ಲಾರು ಅವರ ಸಹಭಾಗಿತ್ವದಲ್ಲಿ ರಾಜ್ಯ ಸರಕಾರದ ಮಂಜೂರಾತಿ ಯೊಂದಿಗೆ ಆಯುಷ್‌ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್‌ ಉಡುಪಿ, ಜಿಲ್ಲಾ ಆಯುಷ್‌ ಇಲಾಖೆ ಉಡುಪಿ ಇವರ ಸಹಕಾರದೊಂದಿಗೆ ಮಲ್ಲಾರಿನಲ್ಲಿ ನಿರ್ಮಿಸಲಾದ ಸರಕಾರಿ ಆಯುರ್ವೇದ ಆಸ್ಪತ್ರೆ – ಆಯುಷ್‌ ಚಿಕಿತ್ಸಾಲಯವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರು ಗುರುವಾರ ಉದ್ಘಾಟಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿ ಸಿದ್ದ ಶಾಸಕ ವಿನಯಕುಮಾರ್‌ ಸೊರಕೆ ಅವರು ಮಾತನಾಡಿ, ಖಾಸಗಿ ಸಂಸ್ಥೆ ಯಾದ ಎಸ್‌.ಕೆ.ಪಿ. ಎಜುಕೇಶನ್‌ ಕಮಿಟಿಯವರು ಯಾವುದೇ ಪ್ರತಿ ಫಲಾ ಪೇಕ್ಷೆಯಿಲ್ಲದೇ ಆಸ್ಪತ್ರೆಯನ್ನು ರ್ಮಿಸಿ, ಸರಕಾರಕ್ಕೆ ಹಸ್ತಾಂತರಿಸಿರು ವುದು ಶ್ಲಾಘನೀಯವಾಗಿದೆ. ಯು.ಟಿ.ಖಾದರ್‌ ಆರೋಗ್ಯ ಸಚಿವರಾಗಿದ್ದ ಸಂದರ್ಭ ಅವರ ಮುತುವರ್ಜಿ ಯಿಂದಾಗಿ ಆಸ್ಪತ್ರೆಗೆ ಮಂಜೂರಾತಿ ಪಡೆಯಲಾಗಿದ್ದು, ಇಂದು ಅವರಿಂದಲೇ ಉದ್ಘಾಟನೆ ಗೊಂಡಿರು ವುದು ಶ್ಲಾಘನಾರ್ಹ ಎಂದರು.

ತಾಲೂಕು ಆಯುಷ್‌ ಆಸ್ಪತ್ರೆಗೆ ಶಿಫಾರಸು
ಪುರಸಭಾ ವ್ಯಾಪ್ತಿಯಲ್ಲಿ ಪ್ರಾರಂಭ ಗೊಂಡಿರುವ ಆಯುಷ್‌ ಆಸ್ಪತ್ರೆಯು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಕಾಪು ಪೇಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜನರಲ್‌ ವಿಭಾಗದ ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಮುಂದೆ ಮಲ್ಲಾರಿನ ಆಸ್ಪತ್ರೆಯನ್ನು ಆಯುಷ್‌ ವಿಭಾಗದ ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗು ವುದು ಎಂದರು.

ಕರ್ನಾಟಕ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ.ಎ. ಗಫೂರ್‌, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಪುರಸಭೆ ಉಪಾಧ್ಯಕ್ಷ ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಸದಸ್ಯೆ ವಿಜಯಲಕ್ಷ್ಮೀ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಗೃಹರಕ್ಷಕದಳ ಜಿಲ್ಲಾ ಕಮಾಂಡೆಂಟ್‌ ಡಾ| ಕೆ. ಪ್ರಶಾಂತ್‌ ಶೆಟ್ಟಿ, ಶಾಬು ಸಾಹೇಬ್‌, ಹಿದಾಯತುಲ್ಲಾ ಖಾಝಿ, ಸಂಶುದೀªನ್‌ ಯೂಸುಫ್‌ ಅತಿಥಿಗಳಾಗಿ ಭಾಗವಹಿಸಿದ್ದರು.

ಕೊಂಬಗುಡ್ಡೆ ಜಾಮಿಯಾ ಮಸ್ಜಿದ್‌ನ ಖತೀಬ್‌ ಮುಹಮ್ಮದ್‌ ಪರ್ವೆಜ್‌ ಆಲಮ್‌ ದು:ಆ ನೆರವೇರಿಸಿ ದರು. ಉಡುಪಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಅಲಕಾನಂದ ರಾವ್‌ ಸ್ವಾಗತಿಸಿದರು. ಎಸ್‌.ಕೆ.ಪಿ. ಹೆಲ್ತ್‌ ಸೆಂಟರ್‌ನ ಅಧ್ಯಕ್ಷ ಶಭಿ ಅಹಮದ್‌ ಖಾಝಿ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಶಫಿ ಅಹಮದ್‌ ವರದಿ ಮಂಡಿಸಿದರು. ಡಾ| ವೀಣಾ ಕಾರಂತ ವಂದಿಸಿದರು. ಅನ್ವರ್‌ ಅಲಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next