ಕಾಪು : ಹೆಜಮಾಡಿಯಿಂದ ಉದ್ಯಾವರದವರೆಗಿನ ಕಡಲ ಕಿನಾರೆಯ ಬೀಚ್ ಪ್ರದೇಶವನ್ನು ಪ್ರವಾ ಸೋದ್ಯಮ ಕ್ಷೇತ್ರವನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಕಾಪುವಿನ ಧಾರ್ಮಿಕ ಕ್ಷೇತ್ರಗಳನ್ನೂ ಪ್ರವಾಸಿ ಕ್ಷೇತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಯ ತ್ನಿಸಲಾಗುವುದು ಎಂದು ಶಾಸಕ, ಬೀಚ್ ಫೆಸ್ಟ್ ಆಯೋಜನ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್, ಸ.ಹಿ.ಪ್ರಾ. ಶಾಲೆ ಕಾಪು ಪಡು ಮತ್ತು ದಿ| ಆರ್. ಡಿ. ಮೆಂಡನ್ ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಕಡಲ ಐಸಿರ – ಬೀಚ್ ಫೆಸ್ಟ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ಕಾಪು ಕರಾವಳಿ ಪ್ರದೇಶದಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಬೀಚ್‌ನ ಸುಂದರ ಪರಿಸರವನ್ನು ಉಳಿಸುವುದು, ಬೆಳೆಸುವುದು ಮತ್ತು ಇನ್ನಷ್ಟು ಅಭಿವೃದ್ಧಿ ಪಡಿಸುವುದು ಫೆಸ್ಟ್‌ನ ಮುಖ್ಯ ಉದ್ದೇಶವಾಗಿದೆ ಎಂದರು.
ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ, ಜಿ.ಪಂ. ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಪುರಸಭಾ ಸದಸ್ಯ ನಿತಿನ್ ಸಾಲ್ಯಾನ್, ಉದ್ಯಮಿ ಗಂಗಾಧರ ಸುವರ್ಣ, ಮೊಗವೀರ ಮಹಾಸಭಾದ ಅಧ್ಯಕ್ಷ ಕುಶ ಸಾಲ್ಯಾನ್, ದಿ| ಆರ್. ಡಿ. ಮೆಂಡನ್ ಜನ್ಮ ಶತಮಾನೋತ್ಸವ ಆಚರಣ ಸಮಿತಿಯ ಅಧ್ಯಕ್ಷ ಕೃಷ್ಣ ಆರ್. ಮೆಂಡನ್, ಇಂದಿರಾ ಲಾಲಾಜಿ ಮೆಂಡನ್, ನ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಶೀಲರಾಜ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಸಚಿನ್ ಪುತ್ರನ್, ಮೊಗವೀರ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಪುತ್ರನ್, ಪ್ರಮುಖರಾದ ಉದಯ ಶಂಕರ್, ಸುಜಿತ್ ಸುವರ್ಣ, ನವೀನ್ ಅಮೀನ್, ದಿನೇಶ್ ಸುವರ್ಣ ಉಪಸ್ಥಿತರಿದ್ದರು.
ಕ್ಲಬ್‌ನ ಉಪಾಧ್ಯಕ್ಷ ಆನಂದ ಶ್ರೀಯಾನ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮಧುಕರ್ ಎಸ್. ವಂದಿಸಿದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಕಾರ್ಯಕ್ರಮಗಳು
ಬೀಚ್ ಫೆಸ್ಟ್ ಪ್ರಯುಕ್ತ ರವಿವಾರ (ಡಿ.18) ಬೆಳಗ್ಗೆ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಮೇಲ್ಪಟ್ಟವರಿಗೆ ಮತ್ತು ಸಾರ್ವಜನಿಕರಿಗೆ ಸಮುದ್ರದಲ್ಲಿ ಈಜು ಸ್ಪರ್ಧೆ, ನೋಂದಾಯಿತ ಪುರುಷರ ತಂಡಗಳ ನಡುವೆ ವಾಲಿಬಾಲ್ ಪಂದ್ಯಾಟ, ಮರಳು ಕಲಾಕೃತಿ, ಹುಟ್ಟು ದೋಣಿ ಸ್ಪರ್ಧೆ, ಮಧ್ಯಾಹ್ನ ಶ್ವಾನ ಸ್ಪರ್ಧೆ, ಸಂಜೆ ಗಾಳಿಪಟ ಸ್ಪರ್ಧೆ, ನೋಂದಾಯಿತ ತಂಡಗಳಿಗೆ ಕೊಳಲು ಮತ್ತು ತಬಲ ತಂಡ ಸ್ಪರ್ಧೆ ಹಾಗೂ ಚೆಂಡೆ ಸ್ಪರ್ಧೆ ನಡೆಯಲಿದೆ.