ಚುನಾವಣೆ ಎದುರಿಸುತ್ತೀರಿ?
ಕಾಪು ಕ್ಷೇತ್ರದ ಅಭಿವೃದ್ಧಿಯಲ್ಲಿ ಮೈಲುಗಲ್ಲುಗಳೇ ಸೃಷ್ಟಿಯಾಗಿವೆ. ಚುನಾವಣೆ ಎದುರಿಸಲು ನಮಗೆ ಕಷ್ಟವೇ ಇಲ್ಲ. ಶಾಸಕ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ಪುರಸಭೆಯಾಯಿತು. ಕಚೇರಿ ಕಟ್ಟಡವಾಗಿ ಅಭಿವೃದ್ಧಿ ಕೆಲಸಗಳೂ ಭರದಿಂದ ಸಾಗುತ್ತಲಿವೆ. 130 ಕೋ.ರೂ. ಕಾಮಗಾರಿಗಳ ಟೆಂಡರ್ ಆಗಿವೆ. ಕಾಪು ತಾಲೂಕಾಗಿ ಘೋಷಣೆಯಾಗಿದ್ದು ಮಾತ್ರವಲ್ಲದೆ ಕ್ಷಿಪ್ರಗತಿಯಲ್ಲಿ ತಾಲೂಕಿನ ಕಾರ್ಯಗಳು ನಡೆಯುತ್ತಿವೆ. ತಹಶೀಲ್ದಾರ್ ಕೂಡ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಪುವಿನ ಜನತೆ ಕಾಂಗ್ರೆಸ್‌ಗೆ ಮತ ನೀಡಲು ಉತ್ಸುಕರಾಗಿದ್ದಾರೆ.
Advertisement
ಅಲ್ಪಸಂಖ್ಯಾಕರ ತುಷ್ಟೀಕರಣ ಹಿನ್ನಡೆಯಾಗಲಿದೆಯೇ?ಕಾಂಗ್ರೆಸ್‌ನ ತಣ್ತೀಕ್ಕೆ ಬದ್ಧರಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಜಾತಿ, ಧರ್ಮವನ್ನು ಎತ್ತಿಕಟ್ಟುವ ಕೆಲಸ ನಾವು ಮಾಡುವುದಿಲ್ಲ. ಜಾತ್ಯತೀತ ನೆಲೆಯಲ್ಲಿಯೇ ಮತಯಾಚನೆ ಮಾಡುತ್ತೇವೆ. ಸರ್ವಧರ್ಮೀಯರು ಕೂಡ ನಮ್ಮ ಪಕ್ಷದಲ್ಲಿದ್ದಾರೆ. ತುಷ್ಟೀಕರಣದ ಮಾತೇ ಇಲ್ಲ.
ಗೊಂದಲ ಎನ್ನುವ ಪ್ರಶ್ನೆ ನಮ್ಮಲ್ಲಿ ಉದ್ಭವಿಸಿಯೇ ಇಲ್ಲ. ಅಭ್ಯರ್ಥಿಯಾಗಿ ಶಾಸಕ ವಿನಯ ಕುಮಾರ್ ಅವರ ಒಬ್ಬರ ಹೆಸರೇ ಅಂತಿಮವಾಗಿದೆ. ಇನ್ನೊಂದು ಹೆಸರೇ ಇಲ್ಲ. ಭಿನ್ನಾಭಿಪ್ರಾಯಗಳ ಮಾತೇ ಇಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಯಾವ ನೆಲೆಯಲ್ಲಿ ಜನರನ್ನು ಸೆಳೆಯುತ್ತೀರಿ?
ಬಿಜೆಪಿ ಸಹಿತ ಯಾರು ಏನೇ ಆರೋಪಗಳನ್ನು ಮಾಡಿದರೂ ನಾವು ಅವರಿಗೆ ಉತ್ತರ ಕೊಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನಷ್ಟೇ ಜನರಿಗೆ ತಿಳಿಸುತ್ತೇವೆ. ಅವರೇ ಮತದಾನದ ಮೂಲಕ ಸ್ಪಷ್ಟ ಉತ್ತರ ನೀಡಲಿದ್ದಾರೆ. ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್‌ನತ್ತ ಜನರನ್ನು ಸೆಳೆಯುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ.
Related Articles
ಶಾಸಕರ ಮುಂದಾಳತ್ವದಲ್ಲಿ ಈಗಾಗಲೇ ಕ್ಷೇತ್ರದ 203 ಬೂತ್‌ಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಪಡೆ ಕೆಲಸ ಮಾಡುತ್ತಿದೆ. ಸ್ವತಃ ಶಾಸಕರೇ ಬೂತ್ ಮಟ್ಟಕ್ಕೆ ಬಂದು ಕಾರ್ಯಕರ್ತರಲ್ಲಿ ಸಮಾಲೋಚನೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಭೇಟಿ ಕೊಡುತ್ತಾ ತಳಮಟ್ಟದಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಸಂಘಟನೆ ಕ್ಷೇತ್ರದಾದ್ಯಂತ ಬಲಿಷ್ಠವಾಗಿದೆ. ಸಣ್ಣ ಒಡಕೂ ಇಲ್ಲಿಲ್ಲ. ಗೆಲುವು ಕಾಂಗ್ರೆಸ್‌ಗೆ ಕಟ್ಟಿಟ್ಟ ಬುತ್ತಿಯಾಗಿದೆ.
Advertisement
– ಚೇತನ್ ಪಡುಬಿದ್ರಿ