ಕಾಪು: ಪಂಚ ರಾಜ್ಯಗಳ ಚುಣಾವಣೆಯಲ್ಲಿ ಬಿಜೆಪಿಯ ಅಮೋಘ ಸಾಧನೆಯ ಹಿನ್ನೆಲೆಯಲ್ಲಿ ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಮಾ. 11ರಂದು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಮ್ಮೆಲ್ಲರ ನಿರೀಕ್ಷೆಗೂ ಮೀರಿದ ಸ್ಥಾನಗಳೊಂದಿಗೆ ಬಿಜೆಪಿ ಜಯ ಸಾಧಿಸಿದ್ದು, ಇದರೊಂದಿಗೆ ಇತರ ರಾಜ್ಯಗಳ ಸಾಧನೆಯೂ ಕಮ್ಮಿಯೇನಲ್ಲ. ಬಿಜೆಪಿ ಬಗ್ಗೆ ಮತದಾರರು ಇಟ್ಟಿರುವ ಭರವಸೆ ಮತ್ತು ಅಭಿಮಾನದ ಫಲವಾಗಿ ಅಭೂತ ಪೂರ್ವ ಜಯ ಸಾಧಿಸುವಂತಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತದ ಕಲ್ಪನೆ ಪಂಚ ರಾಜ್ಯಗಳ ಚುನಾವಣೆಯ ಮೂಲಕ ಸಾಕಾರಗೊಂಡಿದೆ. ಪಕ್ಷ ಮತ್ತು ಕೇಂದ್ರ ಸರಕಾರದ ವಿರುದ್ಧ ರಾಜಕೀಯ ಪಕ್ಷಗಳು ಸಾಕಷ್ಟು ಅಪಪ್ರಚಾರ ನಡೆಸಿದರೂ ಜನ ಸಾಮಾನ್ಯರು ಮಾತ್ರ ಪಕ್ಷದ ಪರವಾದ ತೀರ್ಪು ನೀಡಿದ್ದಾರೆ. ಇದು ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಗೆಲ್ಲುವಲ್ಲಿಯೂ ನಾಂದಿಯಾಗಲಿದೆ ಎಂದರುಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಪ್ರಧಾನ ನರೇಂದ್ರ ಮೋದಿ ನೇತƒತ್ವದ ಕೇಂದ್ರ ಸರಕಾರ ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿರುವುದಕ್ಕೆ ಮತದಾರರು ನೀಡಿದ ಉತ್ತರ ಇದಾಗಿದ್ದು, ಜನರ ಕನಸನ್ನು ನನಸುಗೊಳಿಸಲು ಜನ ನೀಡಿದ ಜನಾದೇಶ ಎಂದರು.
ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಪಕ್ಷದ ಮುಖಂಡರಾದ ವೀಣಾ ಶೆಟ್ಟಿ, ಸುಧಾಮ ಶೆಟ್ಟಿ, ಕೆ. ಮುರಲೀಧರ್ ಪೈ, ಸಂತೋಷ್ ಸುವರ್ಣ ಬೊಳೆj, ರಮಾಕಾಂತ ದೇವಾಡಿಗ, ಎಂ. ಜಿ. ನಾಗೇಂದ್ರ, ಸಂತೋಷ್ ಮೂಡುಬೆಳ್ಳೆ, ಸುರೇಂದ್ರ ಪೂಜಾರಿ, ಗೋಪ ಪೂಜಾರಿ, ಸುಮಾ ಶೆಟ್ಟಿ, ಪವಿತ್ರಾ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಅನಿಲ್ ಶೆಟ್ಟಿ ಮಲ್ಲಾರು, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.