Advertisement
10 ವರ್ಷದಲ್ಲಿ 20ಕ್ಕೂ ಅಧಿಕ ಸಾವು ?ಕಾಪು ಬೀಚ್‌ನಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರು ಮತ್ತು ಲೈಫ್ ಗಾರ್ಡ್ ಸದಸ್ಯರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಸಂಖ್ಯೆಯ ಯುವಕ – ಯುವತಿಯರು ಅಪಾಯ ದಿಂದ ಪಾರಾಗಿದ್ದಾರೆ.
ಇಲ್ಲಿನ ಬೀಚ್ ಸುಂದರ, ಆಕರ್ಷಕ. ಆದರೆ ಬಲು ಅಪಾಯಕಾರಿ. ಸಮುದ್ರಕ್ಕಿಳಿದು ಆಟವಾಡಲು ಸುಮಾರು 10 ಮೀ. ಒಳಗೆ ಮಾತ್ರ ಜಾಗ ಪ್ರಶಸ್ತವಾಗಿದೆ. ಅದಕ್ಕೂ ಮುಂದೆ ಹೋದವರಿಗೆ ನೀರು ಕುಡಿಸದೇ ಇರುವುದಿಲ್ಲ. ನಿರ್ಲಕ್ಷ್ಯದ್ದೇ ಸಮಸ್ಯೆ
ಕಾಪು ಬೀಚ್‌ನಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಫ್‌ಗಾರ್ಡ್, ಹೋಂ ಗಾರ್ಡ್, ಕೋಸ್ಟಲ್ ಗಾರ್ಡ್ ಮತ್ತು ಪೊಲೀಸರ ಭದ್ರತೆಯಿದೆ. ಮುನ್ನೆಚ್ಚರಿಕೆ ನೀಡುವ ಸ್ಥಳೀಯರೂ ಇದ್ದಾರೆ. ಆದರೂ ಅವಘಡಗಳು ಸಂಭವಿಸುತ್ತಲೇ ಇವೆ. ಪ್ರವಾಸಿಗರು ಸಮುದ್ರದ ಬಗ್ಗೆ ನಿರ್ಲಕ್ಷ್ಯ ತಳೆಯುವುದರಿಂದಲೇ ಹೀಗಾಗುತ್ತಿದೆ.
ತುರ್ತಾಗಿ ಬೇಕು ಹೆಚ್ಚುವರಿ ಸೌಕರ್ಯ
ಲೈಫ್ ಗಾರ್ಡ್ ಟವರ್, ಪ್ರವಾಸಿಗರನ್ನು ಎಚ್ಚರಿಸಲು ಅನೌನ್ಸ್‌ಮೆಂಟ್ ಮೈಕ್, ಡೇಂಜರ್ ಸಿಗ್ನಲ್ ಅಲಾರಂ, ರೆಸ್ಕೂ ಬೋಟ್, ಜೆಸ್ಕಿ ಸ್ಕೂಟರ್, ಹೈಮಾಸ್ಟ್ ಲೈಟ್, ನೆರಳಿನ ವ್ಯವಸ್ಥೆಗೆ ಶೆಲ್ಟರ್ ಇತ್ಯಾದಿ ವ್ಯವಸ್ಥೆಗಳು ಬೀಚ್‌ನಲ್ಲಿ ತುರ್ತಾಗಿ ಆಗಬೇಕಿದೆ.ಈ ವ್ಯವಸ್ಥೆಗಳು ಅಳವಡಿಕೆಯಾದಲ್ಲಿ ಸಮುದ್ರಕ್ಕೆ ಬಿದ್ದವರನ್ನು ರಕ್ಷಿಸಲು ಲೈಫ್‌ಗಾರ್ಡ್‌ಗಳು ಸರ್ವ ಸನ್ನದ್ಧವಾಗಿ ಕುಳಿತಿರಲು ಸಾಧ್ಯವಿದೆ.
Related Articles
ವರ್ಷ ರಕ್ಷಣೆ ಸಾವು
2013 5 ಮಂದಿ 2
2014 3 ಮಂದಿ 4
2015 4 ಮಂದಿ 1
2016 4 ಮಂದಿ 1
2017 6 ಮಂದಿ 0
2018 ಓರ್ವ 1
Advertisement
ಬೀಚ್ ಸೇಫ್ ಅಲ್ಲ ಕರಾವಳಿಯ ಬೀಚ್‌ಗಳು ಸ್ನಾನ ಮಾಡುವುದಕ್ಕೆ ಸೇಫ್ ಅಲ್ಲ. ಬೀಚ್‌ನಲ್ಲಿ ನೀರಿಗಿಳಿಯುವ ಬಹುತೇಕ ಹೊರಗಿನವರು. ಅವರಿಗೆ ಈಜು ಕೂಡಾ ಬರುವುದಿಲ್ಲ. ಲೈಫ್‌ಗಾರ್ಡ್‌ಗಳು ನೀಡುವ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸುವುದರಿಂದ ಅಪಾಯವನ್ನು ಆಹ್ವಾನಿಸಿ ಕೊಳ್ಳುತ್ತಾರೆ. ಪ್ರವಾಸಿಗರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
– ಯತೀಶ್ ಬೈಕಂಪಾಡಿ,
ಸಿಇಒ, ಬೀಚ್ ಟೂರಿಸಂ ಡೆವಲಪ್‌ಮೆಂಟ್ ಪ್ರಾಜೆಕ್ಟ್ ಎಚ್ಚರಿಕೆ ನಿರ್ಲಕ್ಷ್ಯ ಬೇಡ
ಪ್ರತಿ ಬಾರಿ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ಆದರೆ ಅದನ್ನು ಪ್ರವಾಸಿಗರು ನಿರ್ಲಕ್ಷಿಸುತ್ತಾರೆ. ಮೊನ್ನೆಯ ಪ್ರಕರಣದಲ್ಲೂ ಎಚ್ಚರಿಕೆ ನೀಡಿದಾಗ, ಹೇಗಿರಬೇಕೆಂದು ನಮಗೆ ತಿಳಿದಿದೆ. ನಮ್ಮ ಜೀವದ ಬಗ್ಗೆ ನಮಗೆ ಗೊತ್ತಿಲ್ಲವೇ?, ನಿಮಗೇಕೆ ನಮ್ಮ ಉಸಾಬರಿ ಎಂದು ಎದುರುತ್ತರ ನೀಡಿ ಸಮುದ್ರಕ್ಕೆ ಇಳಿದಿದ್ದೇ ಅಪಾಯಕ್ಕೆ ಆಹ್ವಾನವಾಯಿತು.
- ಪ್ರಫುಲ್ಲಾ, ಬೀಚ್ ನಿರ್ವಹಣಾ ತಂಡದ ಸದಸ್ಯೆ