Advertisement

ಕಾಪು ಬೀಚ್‌ನಲ್ಲಿ ಭಾರೀ ಜನ ಸಾಗರ

10:34 PM Nov 07, 2021 | Team Udayavani |

ಕಾಪು: ದೀಪಾವಳಿ ಸಂಭ್ರಮ, ಸರಣಿ ರಜೆ ಮತ್ತು ವಾರಾಂತ್ಯದ ರಜಾ ದಿನದ ಕಾರಣದಿಂದಾಗಿ ಕಾಪು ಬೀಚ್‌ನಲ್ಲಿ ರವಿವಾರ ಭಾರೀ ಜನ ಸಾಗರ ಕಂಡು ಬಂದಿದೆ.

Advertisement

ರವಿವಾರ ಕಾಪು ಬೀಚ್‌ಗೆ ಸಾವಿರಾರು ಮಂದಿ ಆಗಮಿಸಿದ್ದರು. ಇದರಿಂದಾಗಿ ಬೀಚ್‌ಗೆ ಬರುವ ಸಂಪರ್ಕ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್‌ ಜಾಂ ಉಂಟಾಯಿತು.

ಬೀಚ್‌ನ ಪಾರ್ಕಿಂಗ್‌ ಪ್ರದೇಶ ಹೌಸ್‌ ಫುಲ್‌ ಆಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ವಾಹನ ಪಾರ್ಕಿಂಗ್‌ ಮಾಡಲು ಪರದಾಡುವಂತಾಯಿತು.

ಕಾಪು ಬೀಚ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ದೀಪಾವಳಿಯ ಎರಡು ಬೀಚ್‌ ನಿರ್ವಹಣೆಯ ಉಸ್ತುವಾರಿ ವಹಿಸಿರುವ ಲಾಲ್‌ ಬಹದ್ದೂರ್‌ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ವತಿಯಿಂದ ಸುಡುಮದ್ದು ಪ್ರದರ್ಶನ, ಸಂಗೀತ ಸಂಜೆ ಸಹಿತವಾಗಿ ಜನಾಕರ್ಷಣೆ ಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರಿಂದಾಗಿ ರವಿವಾರ ಕೂಡ ಕಾಪು ಬೀಚ್‌ ವಿಶೇಷ ಜನಾಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ:ಮುಸ್ಲಿಮೇತರರಿಗೆ ಕೌಟುಂಬಿಕ ಕಾನೂನು ಸವಲತ್ತು : ಅಬುಧಾಬಿ ಸರ್ಕಾರದಿಂದ ಮಹತ್ವದ ನಿರ್ಧಾರ

Advertisement

ಕೊರೊನಾ ಕಾರಣದಿಂದಾಗಿ ಕಳೆದ ಎಪ್ರಿಲ್‌ನಿಂದೀಚೆಗೆ‌ ವಿಶ್ವ ವಿಖ್ಯಾತ ಕಾಪು ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಆದರೆ ಕೊರೊನಾ ಸಂಬಂಧಿ ಲಾಕ್‌ಡೌನ್‌ ಸಹಿತವಾಗಿ ಹಲವಾರು ನಿರ್ಬಂಧಗಳನ್ನು ಸರಕಾರ ತೆರವುಗೊಳಿಸಿದ್ದು ಪ್ರವಾಸಿಗರು ಮತ್ತು ಸಾರ್ವಜನಿಕರು ಮುಕ್ತವಾಗಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ದೊರಕಿದೆ. ಇದರಿಂದಾಗಿ ಕಾಪು ಬೀಚ್‌ಗೂ ಕಳೆದ ಕೆಲವು ದಿನಗಳಿಂದ ಜನ ಸಾಗರವೇ ಹರಿದು ಬರುತ್ತಿದೆ.

ಇನ್ನೂ ತೆರೆದುಕೊಳ್ಳದ ಲೈಟ್‌ ಹೌಸ್‌
ಕಾಪು ಬೀಚ್‌ನಲ್ಲಿ ಜನಾಕರ್ಷಣೆಯ ಕೇಂದ್ರವಾಗಿರುವ ಬ್ರಿಟಿಷ್‌ ಕಾಲದ ಶತಮಾನೋತ್ಸವದ ಸಂಭ್ರಮದಲ್ಲಿದೆ. ಕಾಪು ಬೀಚ್‌ಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗರು ಕೂಡ ಲೈಟ್‌ಹೌಸ್‌ನ ಮೇಲೇರುವ ಕನಸು ಹೊತ್ತುಕೊಂಡೇ ಬರುತ್ತಾರೆ. ಆದರೆ ಕೊರೊನಾ ಸಂದರ್ಭ ಲೈಟ್‌ ಹೌಸ್‌ ಪ್ರವೇಶಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ಸರಕಾರ, ಲೈಟ್‌ ಹೌಸ್‌ ಇಲಾಖೆಯು ಇನ್ನೂ ತೆರವು ಗೊಳಿಸದಿರುವುದರಿಂದ ಪ್ರವಾಸಿಗರು ನಿರಾಸೆ ಪಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next