ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಡೆಸಿಕೊಡುವ “ಕೌನ್ ಬನೇಗಾಕರೋಡ್‌ಪತಿ’ಕ್ವಿಝ್ ಶೋನ 12ನೇ ಅವತರಣಿಕೆ ಸೆ.28ರಿಂದ ಪ್ರಸಾರಗೊಳ್ಳಲಿದೆ. ಸ್ಟುಡಿಯೊ ನೆಕ್ಸ್ ನಿರ್ಮಾಣದ ಜನಪ್ರಿಯಕ್ವಿಝ್ ಶೋ ಸೋನಿ ಚಾನೆಲ್‌ನಲ್ಲಿ ಮೂಡಿಬರಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರೀಕರಣ ನಡೆಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಸ್ಟುಡಿಯೊ ಪ್ರೇಕ್ಷಕರಿಲ್ಲದೆ ಶೋ ಪ್ರಸಾರ ಕಾಣಲಿದೆ. ಹಾಟ್
ಸೀಟ್‌ನಲ್ಲಿಕುಳಿತ ಸ್ಪರ್ಧಿಗೆ ಉತ್ತರಿಸಲು ಕಷ್ಟವಾದಾಗ, “ಆಡಿಯನ್ಸ್ ಪೋಲ್’ (ಪ್ರೇಕ್ಷಕರ ಮತ) ಆಯ್ಕೆ ನೀಡಲಾಗುತ್ತಿತ್ತು. ಪ್ರೇಕ್ಷಕರ ಲಭ್ಯತೆ ಇಲ್ಲದ
ಕಾರಣ, ಈ ಬಾರಿ ಆಡಿಯನ್ಸ್ ಪೋಲ್ ಇರುವುದಿಲ್ಲ.
“ವಿಡಿಯೊ ಎ ಫ್ರೆಂಡ್’ ಎಂಬ ಹೊಸ ಆಯ್ಕೆ ಪರಿಚಯಿಸಲಾ ಗುತ್ತಿದೆ ಎಂದು ಸೋನಿ ಎಂಟರ್‌ಟೈನ್ಮೆಂಟ್‌ನ ಮುಖ್ಯಸ್ಥ ಆಶೀಶ್ ಗೋವಾಲ್ಕರ್ ತಿಳಿಸಿದ್ದಾರೆ.
10 ಬಾರಿ ಎವರೆಸ್ಟ್ ಏರಿದ್ದ ಪರ್ವತಾರೋಹಿ ನಿಧನ
ಕಠ್ಮಂಡು: ವಿಶ್ವದ ಅತ್ಯುನ್ನತ ಶಿಖರ ಎವರೆಸ್ಟ್ ಅನ್ನು 10 ಬಾರಿ ಏರಿದ್ದ, ನೇಪಾಳದ ಹಿರಿಯ ಪರ್ವತಾರೋಹಿ ಆಂಗ್ ರಿಟಾ ಶೆರ್ಪಾ ಸೋಮವಾರ ಅಗಲಿದ್ದಾರೆ.
ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದ 72 ವರ್ಷದ ಆಂಗ್ ಪಿತ್ತಜನಕಾಂಗದ ವೈಫಲ್ಯದಿಂದ ಮೃತರಾಗಿದ್ದಾರೆ.
ಆಂಗ್ ರಿಟಾ ಶೆರ್ಪಾ “ಹಿಮ ಚಿರತೆ’ ಎಂದೇ ಖ್ಯಾತಿ ಪಡೆದಿದ್ದರು. “1983- 1996ರ ಅವಧಿಯಲ್ಲಿ ಆಕ್ಸಿಜನ್ ಸಿಲಿಂಡರ್‌ನ ನೆರವಿಲ್ಲದೆ ಆಂಗ್ ರಿಟಾ ಅವರು ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಏರಿದ್ದರು. ಈ ಸಾಧನೆ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು’ ಎಂದು ನೇಪಾಳಿ ಪರ್ವತಾರೋಹಣಾ ಸಂಸ್ಥೆ ಕಾರ್ಯದರ್ಶಿ ಟಿಕಾರಾಂ ಗುರುಂಗ್ ಸ್ಮರಿಸಿದ್ದಾರೆ.