Advertisement

ಕೌನ್‌ ಬನೇಗಾ ಕಾಯಿನ್‌ ಪತಿ?

12:30 AM Jan 31, 2019 | Team Udayavani |

ಯಾವುದೇ ವಸ್ತುವನ್ನು ಮಾಯ ಮಾಡುವುದೇ ನಿಜವಾದ ಮ್ಯಾಜಿಕ್‌ಎನ್ನುವುದ ನಮ್ಮದಲ್ಲ ಅನೇಕ ಮಂದಿಯ ನಂಬಿಕೆ. ನಿಮಗೂ ಯಾವುದಾದರೂ ವಸ್ತುವೊಂದನ್ನು ಮಾಯ ಮಾಡಿ ಪ್ರೇಕ್ಷಕರ ಅಚ್ಚರಿಗೆ ಕಾರಣರಾಗಬೇಕು ಅಂತಿದ್ದರೆ ಈ ಮ್ಯಾಜಿಕ್‌ ಕಲಿಯಿರಿ. ನಾಣ್ಯಗಳನ್ನು ಸಂಪಾದಿಸಲು ಇದೊಳ್ಳೆ ಮಾರ್ಗ. ಪ್ರೇಕ್ಷಕರಿಂದಲೇ ನಾಣ್ಯವನ್ನು ಕೇಳಿಪಡೆದು ಮಾಯ ಮಾಡಿ ನೋಡಬಹುದು.

Advertisement

ಬೇಕಾಗುವ ವಸ್ತುಗಳು: ಕಾಯಿನ್‌, ಫೆವಿಕ್ವಿಕ್‌
ಪ್ರದರ್ಶನ: ಜಾದೂಗಾರ ತನ್ನ ಜೇಬಿನಿಂದ ಒಂದು ನಾಣ್ಯವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುತ್ತಾನೆ. ನಂತರ ಮುಷ್ಠಿ ಹಿಡಿದು ಕಾಯಿನ್‌ ಒಳಗೆ ಹೋಗುವಷ್ಟು ಗ್ಯಾಪ್‌ ಬಿಟ್ಟುಕೊಳ್ಳುತ್ತಾನೆ. ನಂತರ ನಿಧಾನಕ್ಕೆ ಕಾಯಿನ್‌ಅನ್ನು ಮುಷ್ಠಿಯ ಒಳಗೆ ತೂರಿಸುತ್ತಾನೆ. ನಂತರ ಮಂತ್ರವನ್ನು ಉಚ್ಚರಿಸಿ ಎರಡೂ ಕೈಗಳನ್ನು ಪ್ರೇಕ್ಷಕರ ಮುಂದೆ ಹಿಡಿಯುತ್ತಾನೆ. ಕಾಯಿನ್‌ ಮಾಯವಾಗಿರುತ್ತೆ!

ತಯಾರಿ: ಆ ಕೈನ ಮೇಲ್ಭಾಗದಲ್ಲಿ ಫೆವಿಕ್ವಿಕ್‌ ಅನ್ನು ಸ್ವಲ್ಪ ಹೆಚ್ಚಾಗಿಯೇ ಹಚ್ಚಿಕೊಂಡಿರಬೇಕು. ಇನ್ನೊಂದು ತಂತ್ರ ಅಡಗಿರುವುದು ಕೊನೆಯಲ್ಲಿ ಕೈಗಳನ್ನು ಪ್ರೇಕ್ಷಕರ ಮುಂದೆ ಹಿಡಿಯುವ ಭಂಗಿಯಲ್ಲಿ. ಮೊದಲು ಜಾದೂಗಾರ ಕಾಯಿನ್‌ ಅನ್ನು ಮುಷ್ಠಿಯ ಒಳಗೆ ತೂರಿಸಿ ಪ್ರೇಕ್ಷಕರಿಗೆ ಒಮ್ಮೆ ತೋರಿಸುತ್ತಾನೆ. ಪ್ರೇಕ್ಷಕರು ಕಾಯಿನ್‌ ಒಳಗೆ ಇದೆ ಎಂದುಕೊಳ್ಳುವಷ್ಟರಲ್ಲಿ ಕಾಯಿನ್‌ಅನ್ನು ಇನ್ನೂ ಒಳಗೆ ತೂರಿಸುವ ನೆಪದಲ್ಲಿ ಬೆರಳು ತೂರಿ ಯಾರಿಗೂ ಕಾಣದಂತೆ ಹೊರಕ್ಕೆಳೆದು ಅದನ್ನು ಅದೇ ಕೈನ ಮೇಲ್ಭಾಗದಲ್ಲಿ ಹಚ್ಚಿರುವ ಫೆವಿಕ್ವಿಕ್‌ವೆುàಲೆ ಅಂಟಿಸಿಬಿಡಿ. ಇದು ಕ್ಷಣಮಾತ್ರದಲ್ಲಿ ಆಗಬೇಕಾದ ಕೆಲಸ. ನಂತರ ಕೈಗಳನ್ನು ತೋರಿಸುವಾಗ ಅಂಗೈ ಮಾತ್ರ ಕಾಣುವಂತೆ ತೋರಿಸಿ. ಆಗ ಹಿಂದೆ ಕಾಯಿನ್‌ ಅಂಟಿಸಿದ್ದು ಕಾಣುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next