Advertisement

ಇದ್ಯಾವುದೋ ಪಾರ್ಕ್‌ ಅಲ್ಲ, ಗ್ರಾಪಂ ಕಚೇರಿ ಆವರಣ

09:23 PM Nov 14, 2020 | Suhan S |

ಅರಕಲಗೂಡು: ಈ ಗ್ರಾಪಂ ಆವರಣದೊಳಗೇ ಕಾಲಿಟ್ಟರೆ ಸಾಕು ಯಾವುದೋ ಪಾರ್ಕ್‌ಗೆ ಬಂದ ಅನುಭವ, ಪುಟ್ಟದೊಂದು ಸುಂದರಉದ್ಯಾನ, ಜನರ ಓಡಾಟಕ್ಕೆಂದು ನಡಿಗೆ ಪಥ, ತಾವರೆಕೊಳ, ಸದಾ ನೀರು ಹರಿಸುವ ಕಾವೇರಿ ಮಾತೆ, ಹೀಗೆ ಪರಿಸರ ಸ್ನೇಹಿ ವ್ಯವಸ್ಥೆಗಳು..

Advertisement

ಇದೆಲ್ಲ ಒಂದೇ ಕಡೆ ಕಾಣಬೇಕು ಎಂದರೆ ನೀವು ತಾಲೂಕಿನ ಗಡಿ ಭಾಗದಲ್ಲಿರುವ ಕಟ್ಟೇಪುರ ಗ್ರಾಮ ಪಂಚಾಯ್ತಿಗೆ ಬರಬೇಕು. ಇಲ್ಲಿನ ಗ್ರಾಪಂ ಕಾರ್ಯಾಲಯವು ಸ್ವತ್ಛ ಪರಿಸರ, ಹಸಿರುಮಯ ವಾತಾವರಣ ಹೊಂದಿದೆ.

ವಿಸ್ತಾರವಾದ ಗ್ರಾಪಂ ಆವರಣ ಕೆಲವು ವರ್ಷಗಳ ಹಿಂದೆ ಗಿಡಗಂಟಿಗಳು ಬೆಳೆದು, ಅಶುಚಿತ್ವದ ತಾಣವಾಗಿತ್ತು. ಕಚೇರಿ ಕಟ್ಟಡವು ಸೂಕ್ತ ಸುಣ್ಣ ಬಣ್ಣವಿಲ್ಲದೆ ಹಳೇ ಕಟ್ಟಡದಂತೆ ಕಾಣುತ್ತಿತ್ತು. ಇದೆಲ್ಲವನ್ನೂ ಗಮನಿಸಿದ ಪಿಡಿಒ ಪರಮೇಶ್‌, ನರೇಗಾ ಯೋಜನೆ ಬಳಸಿಕೊಂಡು3 ಲಕ್ಷ ರೂ.ನಲ್ಲಿ ಆಕರ್ಷಕ, ಅಲಂಕಾರಿಕ ಗಿಡಗಳ ಜೊತೆಗೆ ಇತರೆಸಸ್ಯಗಳನ್ನೂ ನೆಟ್ಟಿದ್ದಾರೆ. ಜೊತೆಗೆ ಮಧ್ಯೆ ಸಿಮೆಂಟ್‌ ನೆಲಹಾಸು ಹಾಕಿ ಜನರ ಓಡಾಟಕ್ಕೂ ಅವಕಾಶಕಲ್ಪಿಸಿದ್ದಾರೆ.

ಸೋಲಾರ್‌ ವ್ಯವಸ್ಥೆ: ಗ್ರಾಪಂ ಕಚೇರಿ ಮೇಲೆ ಸೋಲಾರ್‌ ವ್ಯವಸ್ಥೆ ಮಾಡಿದ್ದು, ವಿದ್ಯುತ್‌ ಉಳಿತಾಯ ಮಾಡಲಾಗುತ್ತಿದೆ. ಕಚೇರಿಗಷ್ಟೇ ಅಲ್ಲ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಪರಿಶಿಷ್ಟ ಕಾಲೋನಿಗಳಲ್ಲಿ ಸೋಲಾರ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಎಲ್ಲಾ ಗ್ರಾಮಗಳ ಮುಖ್ಯ ವೃತ್ತಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಹಾಕಲಾಗಿದೆ. ಅಶುಚಿತ್ವದ ತಾಣವಾಗಿದ್ದಗ್ರಾಪಂ: ಕಟ್ಟೇಪುರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ 2019ರಲ್ಲಿ ಕರ್ತವ್ಯಕ್ಕೆ ಹಾಜರಾದ ಪರಮೇಶ್‌,ಪಂಚಾಯ್ತಿ ಕಚೇರಿ ಕಟ್ಟಡ, ಸುತ್ತ ಬೆಳೆದಿರುವ ಗಿಡಗಂಟಿ, ಅಶುಚಿತ್ವ ಕಂಡು ತೀವ್ರ ಬೇಸರಗೊಂಡಿದ್ದರು. ನಂತರ 10 ಮಂದಿ ಸಿಬ್ಬಂದಿಯೊಂದಿಗೆ ಶ್ರಮದಾನ ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕೂಲಿಗಾರರಿಗೆ ಉದ್ಯೋಗ ಒದಗಿಸುವ ಮೂಲಕ 3 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಆವರಣದಲ್ಲಿ ಉದ್ಯಾನ ನಿರ್ಮಿಸಿದ್ದಾರೆ.

ಹಸಿರು ಹುಲ್ಲಿನ ಹಾಸು, ಹೊಳೆಕಲ್ಲುಗಳಲ್ಲಿ ನಿರ್ಮಿಸಿರುವ ಪಾದಚಾರಿ ರಸ್ತೆ, ಆಕರ್ಷಕ ಇಂಟರ್‌ಲಾಕಿಂಗ್‌ ವ್ಯವಸ್ಥೆ, ಸಮೃದ್ಧ ತಾವರೆಕೊಳ, ಸದಾ ಜಲಧಾರ ಹರಿಸುವ ಕಾವೇರಿ ಮಾತೆಯ ವಿಗ್ರಹ, ಈ ಉದ್ಯಾನ ಸುತ್ತಲು ಬಣ್ಣಗಳ ಹೂವಿನ ಗಿಡಗಳನ್ನು ಹೊಂದಿರುವ ಈ ಪಂಚಾಯ್ತಿ ಆವರಣ, ಕಟ್ಟೇಪುರ ಅಣೆಕಟ್ಟಿನಷ್ಟೇ ಸಾರ್ವಜನಿಕರ ಆಕರ್ಷಣೆಗೆ ಒಳಗಾಗಿದೆ. ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡಲ್ಲಿ ಸಾಕಷ್ಟು ಕಾಮಗಾರಿ ಮಾಡಬಹುದು ಎಂಬುದಕ್ಕೆ ಪಿಡಿಒ ಪರಮೇಶ್‌, ಸಿಬ್ಬಂದಿಯ ವಿಭಿನ್ನ ಪ್ರಯತ್ನ ತಾಲೂಕಿನ34 ಗ್ರಾಪಂ ಸಿಬ್ಬಂದಿಗಳಿಗೂ ಮಾದರಿಯಾಗಿದೆ.

Advertisement

ಕಟ್ಟೇಪುರ ಗ್ರಾಮದಲ್ಲಿ ಮೊದಲ ಅಣೆಕಟ್ಟೆ :  ಅರಕಲಗೂಡು ತಾಲೂಕು ಹಾಗೂ ಜಿಲ್ಲೆಯ ಗಡಿಭಾಗದಲ್ಲಿರುವ ಕಟ್ಟೇಪುರ ಗ್ರಾಮ ಪಂಚಾಯಿತಿಯು 7 ಗ್ರಾಮಗಳನ್ನು ಒಳಗೊಂಡಿದೆ. ಕಾವೇರಿ ನದಿಯ ತೀರದಲ್ಲಿದೆ. ಈ ಸ್ಥಳವು ಐತಿಹಾಸಿಕವಾಗಿ ಪ್ರಸಿದ್ಧ ತಾಣವೂ ಆಗಿದೆ. ಕ್ರಿ.ಶ. 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ,ಈ ಗ್ರಾಮದಲ್ಲಿಕಾವೇರಿ ನದಿಗೆ ಮೊದಲ ಅಣೆಕಟ್ಟನ್ನು ಕಟ್ಟಿದ್ದರು. ಇದು ಈ ಗ್ರಾಮದ ಹೆಗ್ಗಳಿಕೆ. ಈ ಅಣೆಕಟ್ಟೆ ಕೃಷ್ಣರಾಜ ಅಣೆಕಟ್ಟೆಯೆಂದೇ ಪ್ರಸಿದ್ಧಿ ಆಗಿದೆ. ತನ್ನದೇ ಆದ ವಿಶೇಷತೆಯನ್ನೂ ಹೊಂದಿದೆ. ಈ ಅಣೆಕಟ್ಟೆಗೆ ನಿರ್ಮಿಸಿರುವ ಕಟ್ಟೆಯ ಮಧ್ಯಭಾಗದಲ್ಲಿ 12 ಎಕರೆ ದ್ವೀಪವೂ ನಿರ್ಮಾಣವಾಗಿರುವುದು ಹಾಗೂ ಪೂರ್ವಕ್ಕೆ ಹರಿಯುತ್ತಿರುವ ಕಾವೇರಿ ನದಿ ಈ ಅಣೆಕಟ್ಟೆಯಿಂದ ಪಶ್ಚಿಮ ದಿಕ್ಕಿಗೆ ಹಿಂದಿರುಗಿರುವುದು ವಿಶೇಷವಾಗಿದೆ. ಈ ಎಲ್ಲಾ ವಿಶೇಷತೆಯನ್ನು ಹೊಂದಿರುವ ಈಪಂಚಾಯಿತಿ ಕೊಣನೂರು ಹೋಬಳಿಗೆ ಸೇರಿದ್ದು, ಅಭಿವೃದ್ಧಿ ಕಾಣದೇಪ್ರ ವಾಸಿಗರಿಂದ ದೂರ ಉಳಿದಿದೆ. ಇಂತಹವಿಶೇಷತೆಯನ್ನುಹೊಂದಿರುವಗ್ರಾಮದಲ್ಲಿನ ಪಂಚಾಯ್ತಿಗೆ ಇನ್ನು ಮುಂದೆಯಾದರೂ ಸರ್ಕಾರ ಹೆಚ್ಚಿನ ಅನುದಾನ, ನೀಡಿ ಪ್ರವಾಸಿಗರ ತಾಣವನ್ನಾಗಿ ಮಾಡಬೇಕು ಎಂಬುದು ಇಲ್ಲಿನ ಜನರ ಮನವಿ ಆಗಿದೆ.ಪ್ರಶ್ನೆಯಾಗಿದೆ.

ತಾಲೂಕಿನ ಗಡಿಭಾಗದಕಟ್ಟೇಪುರ ಗ್ರಾಪಂಕಚೇರಿ ಆಕರ್ಷಣೀಯವಾಗಿದೆ. ಈ ಪಂಚಾಯ್ತಿಗೆ ಭೇಟಿ ನೀಡುವುದಕ್ಕೆ ಖುಷಿಯಾಗುತ್ತದೆ. ಬಹುತೇಕ ಅಧಿಕಾರಿಗಳುಕೆಲಸದ ಜೊತೆಯಲ್ಲಿ ಕಚೇರಿ, ಆವರಣದ ಸೌಂದರ್ಯಕಾಪಾಡಲು ಆದ್ಯತೆ ನೀಡುವುದು ವಿರಳ. ಆದರೆ, ಪಿಡಿಒ ಪರಮೇಶ್‌ ತನ್ನಕಾರ್ಯ ಒತ್ತಡದಲ್ಲೂಕಚೇರಿ ಆವರಣವನ್ನು ಸುಂದರಗೊಳಿಸಿ ತನ್ನಕ್ರಿಯಾಶೀಲತೆಹೆಚ್ಚಿಸಿಕೊಂಡಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರವಿಕುಮಾರ್‌, ಇಒ, ತಾಪಂ.

ಕಟ್ಟೇಪುರ ಪಂಚಾಯ್ತಿ ಇತರೆ ಪಂಚಾಯ್ತಿಗಳಿಗೆ ಭಿನ್ನವಾಗಿದೆ. ಪಿಡಿಒ ಪರಮೇಶ್‌ ಅವರ ನಿಸ್ವಾರ್ಥ ಸೇವೆಯಿಂದ ಪಾಳುಬಿದ್ದಿದ್ದ ಗ್ರಾಪಂ ಆವರಣ ಈಗ ಜನಾಕರ್ಷಣೆ ತಾಣವಾಗಿದೆ. ತಾಲೂಕಿನ 34 ಗ್ರಾಪಂಗಳೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಕೃಷ್ಣೇಗೌಡ, ತಾಪಂ ಸದಸ್ಯ, ಕಟ್ಟೇಪುರ ಕ್ಷೇತ್ರ.

ಗ್ರಾಪಂಕಚೇರಿಗೆ ಬಂದಾಗ ಇಲ್ಲಿನ ಪರಿಸರನೋಡಿ ಬೇಸರವಾಯಿತು. ಈ ಗ್ರಾಪಂ ಕಚೇರಿ ಆವರಣವನ್ನು ಸುಂದರವಾಗಿಸಬೇಕು ಎಂದು ನರೇಗಾಯೋಜನೆ ಬಳಸಿಕೊಂಡು, ತಾವು ಇಲ್ಲಿಂದ ವರ್ಗಾವಣೆಯಾದ್ರೂ ಶಾಶ್ವತವಾಗಿ ಹೆಸರು ಉಳಿಯಬೇಕು ಎಂದು ಸುಂದರ ಪರಿಸರ ನಿರ್ಮಿಸಲಾಗಿದೆ. ಪರಮೇಶ್‌, ಗ್ರಾಪಂ ಪಿಡಿಒ

 

ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next