Advertisement
ಬಿಟೌನ್ ಬೆಡಗಿ ಕತ್ರಿನಾ ಕೈಫ್ ಹಾಗೂ ತಮಿಳು ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮುಖ್ಯಭೂಮಿಕೆಯ ʼಮೇರಿ ಕ್ರಿಸ್ಮಸ್ʼ ಸಿನಿಮಾ ಅನೌನ್ಸ್ ಆದ ದಿನದಿಂದಲೇ ಸದ್ದು ಮಾಡುತ್ತಿದೆ. ಸೌತ್ ಹಾಗೂ ಬಿಟೌನ್ ಜೋಡಿಯನ್ನಿಟ್ಟುಕೊಂಡು ವಿಭಿನ್ನ ಕಥೆಯನ್ನು ಹೇಳಲು ಹೊರಟಿರುವ ಶ್ರೀರಾಮ್ ರಾಘವನ್ ಅವರ ಈ ಸಿನಿಮಾದಿಂದ ಮತ್ತೊಂದು ಬಿಗ್ ಅಪ್ಡೇಟ್ ಹೊರಬಿದ್ದಿದೆ.
Related Articles
Advertisement
ಸೌತ್ ಸ್ಟಾರ್ ಜೊತೆ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ. ಲೀಡ್ ರೋಲ್ ನಲ್ಲಿ ಕತ್ರಿನಾ ಜೊತೆ ಸೇತುಪತಿ ಅವರನ್ನುಆಯ್ದುಕೊಂಡಿದ್ದರ ಬಗ್ಗೆ ಸ್ವತಃ ಶ್ರೀರಾಮ್ ರಾಘವನ್ ಅವರು ಮಾತನಾಡಿದ್ದರು.
“ಇದು ಕಥೆಯ ಬೇಡಿಕೆಯಾಗಿದೆ. ನೀವು ಸಿನಿಮಾವನ್ನು ನೋಡಿದರೆ, ಈ ಸಿನಿಮಾದಲ್ಲಿ ಈ ರೀತಿಯ ಆಫ್ ಬೀಟ್ ಜೋಡಿಯನ್ನು ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವುದು ನಿಮಗೆ ತಿಳಿಯುತ್ತದೆ. ಸಿನಿಮಾದಲ್ಲಿ ಇಬ್ಬರ ಪಾತ್ರವೂ ತುಂಬಾ ಆಸಕ್ತಿದಾಯಕವಾಗಿದೆ. ಈ ಹಿಂದೆ ಇವರಿಬ್ಬರು ಜೊತೆಯಾಗಿ ನಟಿಸಿಲ್ಲ. ಹಾಗಾಗಿ ಸಿನಿಮಾದಲ್ಲಿ ಹೊಸ ಜೋಡಿಯನ್ನು ನೋಡಿದಂತಾಗುತ್ತದೆ ಎಂದು ಹೇಳಿದ್ದರು.
ಕತ್ರಿನಾ ಹಾಗೂ ಸೇತುಪತಿ ಅವರ ಪಾತ್ರಗಳು ಬದಲಾಗುವುದಿಲ್ಲ. ಸಹ ಕಲಾವಿದರು ತಮಿಳು ವರ್ಷನ್ ನಲ್ಲಿ ಬದಲಾಗಲಿದ್ದಾರೆ. ಶೇ.95 ರಷ್ಟು ಸಿನಿಮಾ ಒಂದೇ ಆಗಲಿದೆ. ಕೆಲ ಪಾತ್ರ ಹಾಗೂ ಭಾಷೆಯ ಬದಲಾವಣೆ ಇರಲಿದೆ ಅಷ್ಟೇ ಎಂದು ನಿರ್ದೇಕರು ಹೇಳಿದ್ದರು.
ಇನ್ನು ಮೂಲತಃ ತಮಿಳಿನವರು ಆಗಿರುವ ನಿರ್ದೇಶಕ ರಾಘವನ್ ಈ ಸಿನಿಮಾವನ್ನು ತಮಿಳು ಭಾಷೆಯಲ್ಲೂ ಮಾಡಲಿದ್ದಾರೆ. ಅಂದರೆ ತಮಿಳು ಹಾಗೂ ಹಿಂದಿಯಲ್ಲಿ ಪತ್ಯೇಕವಾಗಿ ಸಿನಿಮಾ ಶೂಟ್ ಆಗಲಿದೆ.