ನವದೆಹಲಿ: ಕಳೆದ ಕೆಲವು ದಿನಗಳಿಂದ ಬಾಲಿವುಡ್ ನ ಜನಪ್ರಿಯ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವರ್ಷಾಂತ್ಯಕ್ಕೆ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.
ಮಂಗಳವಾರ ರೇಷ್ಮಾ ಶೆಟ್ಟಿ ಅವರ ಕಛೇರಿಗೆ ಬರುವಾಗ ಒಂದೇ ಕಾರಿನಲ್ಲಿ ಆಗಮಿಸಿದ್ದರು. ಆದರೆ ಮರಳುವಾಗ ಬೇರೆ ಬೇರೆ ವಾಹನದಲ್ಲಿ ತೆರಳಿದ್ದಾರೆ.
ಕತ್ರಿನಾ ಇಂತಹ ಸುದ್ದಿಗಳಿಂದ ದೂರವಿದ್ದಾರೆ. ಹಾಗೂ ಅಂತಹ ಊಹಾಪೋಹಗಳಿಗೆ ಸರಿಯಾದ ಕಾರಣವನ್ನು ನೀಡಿದ್ದಾರೆ. ತನ್ನ ಹಾಗೂ ವಿಕ್ಕಿ ಅವರ ವಿವಾಹ ಈ ವರ್ಷಾಂತ್ಯ ನಡೆಯಲಿದೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಕತ್ರಿನಾ ಹಾಗೂ ವಿಕ್ಕಿ ಅವರ ನಿಶ್ಚಿತಾರ್ಥದ ಕುರಿತು ಅಂತರ್ಜಾಲದಲ್ಲಿ ವದಂತಿ ಹಬ್ಬಿ, ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿತ್ತು. ಇದು ಕೇವಲ ಗಾಳಿ ಸುದ್ದಿ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಹಿಂದೆ ರೊಕಾ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಹರಡಿತ್ತು ಆ ಸಂದರ್ಭದಲ್ಲಿ ಕತ್ರಿನಾ ಈ ಸುದ್ದಿಯನ್ನು ಅಲ್ಲಗೆಳೆದಿದ್ದರು.
ಇತ್ತೀಚೆಗೆ ವಿಕ್ಕಿ ಅವರ ಚಿತ್ರ ಸರ್ದಾರ್ ಉದ್ದಾಮ್ ಸಿನಿಮಾದ ಪ್ರಥಮ ಪ್ರದರ್ಶನದಲ್ಲಿ ಕತ್ರಿನಾ ಹಾಗೂ ವಿಕ್ಕಿ ಪರಸ್ಪರ ಅಪ್ಪಿಕೊಂಡಿದ್ದರು. ಅದನ್ನು ಅಭಿಮಾನಿಯೊಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದರು. ಅಭಿಮಾನಿಗಳು ಆ ವಿಡಿಯೋ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಕುರಿತು ವದಂತಿಗಳು ಹರಿದಾಡುತ್ತಿವೆ.