Advertisement

ಅರಮನೆ ಹೊಂದಿರುವ ಕೋಟೆಯಲ್ಲಿ ನಡೆಯಲಿದೆಯಂತೆ ಕತ್ರಿನಾ-ವಿಕ್ಕಿ ಮದುವೆ

12:49 PM Oct 28, 2021 | Team Udayavani |

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಮದುವಯೇ ಆಶ್ಚರ್ಯಕರವಾಗಿದೆ. ಏಕೆಂದರೆ ವಿಕ್ಕಿಯಾಗಲೀ ಅಥವಾ ಕತ್ರಿನಾ ಆಗಲೀ ತಮ್ಮ ಮದುವೆ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ.

Advertisement

ಈಗಾಗಲೇ ಈ ಸೆಲೆಬ್ರಿಟಿ ಜೋಡಿಯ ಮದುವೆ ಬಗ್ಗೆ ಕತೂಹಲಗಳು ಹೆಚ್ಚಿವೆ. ಇವರು ಯಾವಾಗ ಮದುವೆಯಾಗುತ್ತಾರೆ. ಎಲ್ಲಿ ಮದುವೆಯಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಸಹಜವಾಗಿಯೇ ಮೂಡುತ್ತಿವೆ. ಈ ಕುತೂಹಲ ತಣಿಯುವಂತಹ ಮಾಹಿತಿಯೊಂದು ಇದೀಗ ಹೊರ ಬಿದ್ದಿದೆ.

ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮಾಧೋಪುರದ ರೆಸಾರ್ಟ್ ಆಗಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಲಿದ್ದಾರೆ. ಈ ಕೋಟೆಯು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದಲ್ಲಿದೆ. ಈ ಕೋಟೆಯು 14 ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಅರಮನೆ ಮತ್ತು ಎರಡು ದೇವಾಲಯಗಳನ್ನು ಹೊಂದಿದೆ.

Advertisement

ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕತ್ರಿನಾ ಮತ್ತು ವಿಕ್ಕಿ ಮದುವೆಯಾಗುತ್ತಾರೆ ಎಂದು ಇ ಟೈಮ್ಸ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next