ಪುಣೆ: ಕಾತ್ರಜ್‌ನಲ್ಲಿರುವ ಯೋಗ ಗುರು ಪ್ರಮೀಳಾ ಜಗದೀಶ್ ಶೆಟ್ಟಿ ಇವರು ನಡೆಸುತ್ತಿರುವ ಶೆಟ್ಟಿಸ್ ಯೋಗ ಶಾಲೆಯ ವತಿಯಿಂದ ಒಂದು ದಿನದ ಟ್ರೆಕ್ಕಿಂಗ್ ಜಾಥವನ್ನು ಪುಣೆಯ ಅತಿ ಎತ್ತರದ ಸುಂದರ ಪ್ರದೇಶವಾದ ಸಿಂಹಘಡ್ ಪೋರ್ಟ್‌ನಲ್ಲಿ ಮಾ. 31ರಂದು ಆಯೋಜಿಸಲಾಗಿತ್ತು.
ಈ ಜಾಥಾವನ್ನು ಮನುಷ್ಯನಿಗೆ ಆರೋಗ್ಯಕ್ಕೆ ಬೇಕಾದ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಕೈಗೊಳ್ಳಬೇಕಾದ ಜಾಗೃತಿ ಹಾಗೂ ಧಾರ್ಮಿಕ ಭಾವನೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಲಾಗಿತ್ತು. ಮುಂಜಾನೆ 4.45ಕ್ಕೆ ಕಾತ್ರಜ್ ದತ್ತನಗರದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಶೆಟ್ಟಿಸ್ ಯೋಗ ಶಾಲೆಯ ವಠಾರದಿಂದ ಆರಂಭವಾದ ಈ ಜಾಥಾದಲ್ಲಿ 10 ರಿಂದ 60 ವರ್ಷದವರೆಗಿನ ಯೋಗದ ವಿದ್ಯಾರ್ಥಿಗಳು ಹಾಗೂ ಪರಿಸರದ ಹಾಲಿ ಹಾಗೂ ಮಾಜಿ ಕಾರ್ಪೊರೇಟರ್‌ಗಳು, ಸಮಾಜ ಸೇವಕರು, ಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟಿಗಳು, ಮಹಿಳೆ ಯರು ಪುರುಷರು ಸೇರಿದಂತೆ ಸುಮಾರು 70ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಸಿಂಹಘಡ್ ಕೋಟೆಯಲ್ಲಿ ಪ್ರಮೀಳಾ ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಧ್ಯಾನ-ಯೋಗದ ಬಗ್ಗೆ ಮಾಹಿತಿ ನೀಡಿದರು. ಅನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿತ್ತು. ಪ್ರಮಿಳಾ ಜೆ. ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಅವರ ಶೆಟ್ಟಿಸ್ ಯೋಗ ಶಾಲೆಯು ಕಾತ್ರಜ್ ಅಂಬೆಗಾಂವ್‌ನ ಸಿದ್ಧಿವಿನಾಯಕ ದೇವಸ್ಥಾನದ ಮೇಲ್ಛಾವಣಿಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದು ಸುಮಾರು 200ಕ್ಕಿಂತಲೂ ಅಧಿಕ ಮಂದಿ ಯೋಗವನ್ನು ಕಲಿಯುತ್ತಿ¨ªಾರೆ. ಈ ಯೋಗ ಶಾಲೆಯ ಮುಖಾಂತರ ಯೋಗ ದಿನಾಚರಣೆ, ಕಾತ್ರಜ್ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಯೋಗ ಶಿಬಿರ ಹಾಗೂ ವಿಶೇಷ ಯೋಗ ತರಬೇತಿ ಕಮ್ಮಟಗಳು ನಡೆಯುತ್ತಿವೆ.
ಚಿತ್ರ-ವರದಿ:ಹರೀಶ್ ಮೂಡಬಿದ್ರಿ