Advertisement

Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ

04:36 PM Nov 04, 2024 | Team Udayavani |

ಕಟಪಾಡಿ: ರಿಕ್ಷಾ ಚಾಲಕ ಕಟಪಾಡಿಯ ಜಯಕರ ಕುಂದರ್‌ನ ಕೃಷಿ ಪ್ರೇಮದಿಂದ ರಿಕ್ಷಾ ತುಂಬಾ ಕೃಷಿ ಉತ್ಪನ್ನಗಳ ಅಲಂಕಾರದ ಮೂಲಕ ಸಾರ್ವಜನಿಕರಲ್ಲಿ ಕೃಷಿ ಜಾಗೃತಿಯನ್ನು ಮೂಡಿಸಿರುತ್ತಾರೆ.

Advertisement

ದೀಪಾವಳಿಯ ಪಾಡ್ಯದಂದು ವಾಹನ ಪೂಜೆಯ ಬಳಿಕ ಕಳೆದ 10 ವರ್ಷಗಳಿಂದ ತನ್ನ ದುಡಿಯುವ ರಿಕ್ಷಾವನ್ನು ವಿಶೇಷ ಆಕರ್ಷಣೀಯ ಅಲಂಕಾರದ ಮೂಲಕ ಸದಾ ಜನಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬರುತ್ತಿರುವ ಸಂಗಮ ಕಲಾವಿದ ತಂಡದ ಸದಸ್ಯ ಜಯಕರ ಕುಂದರ್‌ ಅವರು ಈ ಬಾರಿ ಕೃಷಿ ಉತ್ಪನ್ನಗಳಾದ ಭತ್ತದ ತೆನೆ, ಬೈಹುಲ್ಲಿನಿಂದಲೇ ತನ್ನ ರಿಕ್ಷಾವನ್ನು ಅಲಂಕರಿಸಿ ರಿಕ್ಷಾದ ಮುಂಭಾಗದಲ್ಲಿ ಮೈಸೂರು ದಸರಾದ ಅಂಬಾರಿ ಹೊರುವ ಗಜಗಾಂಭೀರ್ಯದ ಅರ್ಜುನನ ಅಂಬಾರಿ ಹೊತ್ತ ಆನೆಯ ಸ್ತಬ್ಧಚಿತ್ರವನ್ನೂ ಬೈಹುಲ್ಲಿನ ಮೂಲಕ ಸಿದ್ಧಪಡಿಸಿ ತಮ್ಮ ಸವಿನೆನಪಿನ ನಮನವನ್ನು ಸಲ್ಲಿಸಿರುತ್ತಾರೆ. ತನ್ನ ರಿಕ್ಷಾ ಸೀಟನ್ನು ಓಲಿ ಚಾಪೆಯಿಂದ ಸಿದ್ಧಪಡಿಸಿದ್ದು, ಬೆತ್ತದ ಬುಟ್ಟಿ, ಸಹಿತ ಇತರೇ ಮನೆ ಬಳಕೆಯ ಕರಕುಶಲವಸ್ತುಗಳನ್ನು ರಿಕ್ಷಾದ ಒಳಭಾಗದಲ್ಲಿ ಅಲಂಕಾರಿಕವಾಗಿ ಬಳಸಿಕೊಂಡಿದ್ದು, ಕುಲಕಸುಬುಗಳ ಜನಜಾಗೃತಿಯನ್ನೂ ಮೂಡಿಸಿ ಪ್ರಾಕೃತಿಕ ಸಿರಿ ಸೊಬಗನ್ನು ಪ್ರದರ್ಶಿಸಿದ್ದಾರೆ.

ಸ್ಮಾರ್ಟ್‌ ಆರ್ಟ್‌ನ ಅಜಯ್‌ ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದು, ಸ್ನೇಹಿತರ ಸಹಕಾರದಿಂದ ರಿಕ್ಷಾಕ್ಕೆ ಅಳವಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ತನ್ನ ಆಟೋರಿಕ್ಷಾದಲ್ಲಿ ದುಡಿಯದೆ ಆಟೋ ರಿಕ್ಷಾವನ್ನು ಅಲಂಕಾರಕ್ಕಾಗಿ ಇರಿಸಿದ್ದು, ಸ್ನೇಹಿತರ ಸಹಕಾರವನ್ನು ಸ್ಮರಿಸುವ ಕಟಪಾಡಿ ಜಯಕರ ಕುಂದರ್‌ ಅವರ ಇಂತಹ ಸಮಾಜಮುಖೀ ಸೇವೆಯ ಜಾಗೃತಿಯ ಸಂದೇಶ ನೀಡುವ ಕಾಯಕ್ಕೆ ಈಶ್ವರ್‌ ಮಲ್ಪೆ ಅವರು ಆಗಮಿಸಿ ಚಾಲನೆಯನ್ನು ನೀಡಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ. ಅಲಂಕಾರಗೊಂಡ ರಿಕ್ಷಾ ಕುರ್ಕಾಲು, ಕಟಪಾಡಿ, ಉದ್ಯಾವರ, ಮಲ್ಪೆ, ಮುಲ್ಕಿ ಭಾಗದಲ್ಲಿ ಸಂಚರಿಸಿ ಜನಜಾಗೃತಿಯನ್ನು ಮೂಡಿಸಿದೆ.

ಜನಜಾಗೃತಿಗೆ ಪ್ರಾತಿನಿಧ್ಯ
ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿ ಜನಜಾಗೃತಿ ಮೂಡಿಸುತ್ತಿದ್ದೇನೆ. ಈ ಬಾರಿ 10ನೇ ವರ್ಷದ ಆಟೋ ರಿಕ್ಷಾ ಅಲಂಕಾರದಲ್ಲಿ ಕೃಷಿ ಜನಜಾಗೃತಿಯ ಸಂದೇಶವನ್ನು ಸಾರುತ್ತಿದ್ದೇನೆ.
-ಜಯಕರ ಕುಂದರ್‌ ಕಟಪಾಡಿ, ಆಟೋರಿಕ್ಷಾ ಚಾಲಕ

-ವಿಜಯ ಆಚಾರ್ಯ ಉಚ್ಚಿಲ

Advertisement
Advertisement

Udayavani is now on Telegram. Click here to join our channel and stay updated with the latest news.

Next