Advertisement

ಬಹುಭಾಷಾ ಹಾಡುಗಳ ಮೂಲಕ ಗಮನಸೆಳೆದ ಕಾಟಿಪಳ್ಳದ ಹಿರಿಯ ಮಹಿಳೆ

11:23 PM Sep 17, 2019 | Team Udayavani |

ಸುರತ್ಕಲ್‌: ಈಚೆಗೆ ಲತಾಮಂಗೇಶ್ಕರ್‌ ಅವರಂತೆ ಹಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹೀರೋಯಿನ್‌ ಆಗಿ ಸುದ್ದಿಗೆ ಬಂದು ಹೊಸ ಬದುಕು ಕಂಡಿರುವ ರಾನು ಮಂಡಲ್‌ ಎಂಬ ಭಿಕ್ಷುಕಿಯ ಕಥೆ ನಾವೆಲ್ಲಾ ತಿಳಿದಿದ್ದೇವೆ. ಆಕೆಯ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿ ಅಭಿಮಾನಿಗಳು ಹುಟ್ಟಿಕೊಂಡರು. ಇದೆಲ್ಲ ದೂರದ ಕಥೆಯಾದರೆ ಈಗ ಇಂಥದೇ ಹಾಡುಗಳ ಮೂಲಕ ಕಾಟಿಪಳ್ಳದ ಹಿರಿಯ ಮಹಿಳೆಯೋರ್ವರು ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ.

Advertisement

ಲೀಲಾ ಶೆಟ್ಟಿ ಸುರತ್ಕಲ್‌ ಸಮೀಪದ ಮೂರನೆಯ ಬ್ಲಾಕ್‌ ನಿವಾಸಿ. 61 ವರ್ಷದ ಅವರು ಯುವ ಸಂಗೀತಗಾರರು ನಾಚುವಂತೆ ಹಿಂದಿ ಕನ್ನಡ-ತುಳು ಸಹಿತ ಹಲವು ಭಾಷೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. ಕೃಷ್ಣಾಪುರದ ರವೀಂದ್ರ ಆಚಾರ್ಯ ಅವರು ಲೀಲಾ ಶೆಟ್ಟಿಯ ಹಾಡುಗಳ ತುಣುಕುಗಳನ್ನು ವಾಟ್ಸಾಪ್‌ ಮೂಲಕ ಹರಿಯಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next