ಹೊಸದಿಲ್ಲಿ: ಕಥಕ್ ದಿಗ್ಗಜ ಪಂಡಿತ್ ಬಿರ್ಜು ಮಹಾರಾಜ್ ಅವರು ರವಿವಾರ ತಡರಾತ್ರಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪಡೆದಿದ್ದ ಪಂಡಿತ್ ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಪಂಡಿತ್ ಬಿರ್ಜು ಮಹಾರಾಜ್ ಲಕ್ನೋದ ಕಲ್ಕಾ-ಬಿಂದಾದಿನ್ ಘರಾನಾದ ಪ್ರತಿಪಾದಕರಾಗಿದ್ದರು. ನೃತ್ಯ ಕ್ಷೇತ್ರದಲ್ಲಿ ಅವರ ಕೊಡುಗೆಗಳಿಗಾಗಿ 1984 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಪ್ರಶಸ್ತಿಯಿಂದ ಪುರಸ್ಕರಿಸಲಾಗಿತ್ತು.
ಇದನ್ನೂ ಓದಿ:ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ ಅಧಿಕ
ಬಿರ್ಜು ಮಹಾರಾಜ್ ಕಥಕ್ ನೃತ್ಯಗಾರರಾದ ಮಹಾರಾಜ್ ಕುಟುಂಬದ ವಂಶಸ್ಥರಾಗಿದ್ದರು. ಕಥಕ್ ಡ್ಯಾನ್ಸರ್ ಮಾತ್ರವಲ್ಲದೇ ಅತ್ಯುತ್ತಮ ಡ್ರಮ್ಮರ್ ಆಗಿದ್ದ ಬಿರ್ಜು ಮಹಾರಾಜ್, ಬಹುತೇಕ ಎಲ್ಲಾ ಡ್ರಮ್‌ಗಳನ್ನು ಸುಲಭವಾಗಿ ಮತ್ತು ನಿಖರವಾಗಿ ನುಡಿಸುತ್ತಿದ್ದರು. ವಿಶೇಷವಾಗಿ ತಬಲಾ ಮತ್ತು ನಾಲ್ ನುಡಿಸುವುದನ್ನು ಇಷ್ಟಪಡುತ್ತಿದ್ದರು. ದಾದ್ರಾ, ಭಜನ್ ಮತ್ತು ಗಜಲ್‌ಗಳ ಮೇಲೆ ಹಿಡಿತವನ್ನು ಹೊಂದಿದ್ದ ಅವರು ಅತ್ಯುತ್ತಮ ಗಾಯಕರಾಗಿದ್ದರು