Advertisement

ವಿಕ್ಷಿಪ್ತ ತಲ್ಲಣಗಳ ಮಂಜುಗಡ್ಡೆ ಮತ್ತು ಬೆಂಕಿ 

06:00 AM Jun 08, 2018 | |

ಹಿರಿಯ ಚಿತ್ರ ಕಲಾವಿದ ನೇಮಿರಾಜ ಶೆಟ್ಟಿಯವರ ಕಥಾ-ಫೊಟೋ ಮಾಲಿಕೆಯ ಕಲಾಪ್ರದರ್ಶನವೊಂದು “ಮಂಜುಗೆಡ್ಡೆ ಮತ್ತು ಬೆಂಕಿ’ ಎಂಬ ಹೆಸರಿನಲ್ಲಿ ಮಂಗಳೂರಿನ ಕೊಡಿಯಾಲಗುತ್ತು ಪಾರಂಪರಿಕ ಗೃಹದ ಚಾವಡಿಯಲ್ಲಿ ಮೇ 26 ರಿಂದ ಜೂನ್‌ 2 ರ ವರೆಗೆ ಎಂಟು ದಿನಗಳ ಕಾಲ ಏರ್ಪಟ್ಟಿತು. ಮಂಜುಗಡ್ಡೆಯಂತಹ ತಣ್ಣನೆಯ ವಾತಾವರಣದಲ್ಲಿ ಎಲ್ಲಿ, ಹೇಗೆ ಬೆಂಕಿ ಅಡಕವಾಗಿದೆ; ಅದರ ನಿರೀಕ್ಷೆಗಳೇನು; ಸ್ಫೋಟಗೊಂಡಾಗ ಅದರ ತೀವ್ರತೆ ಎಷ್ಟು ಎಂಬುದನ್ನು “ಪ್ರೀತಿ’ ಎಂಬ ವಸ್ತುವೊಂದನ್ನು ಇಟ್ಟುಕೊಂಡು ವಿವಿಧ ಸಂದರ್ಭ- ಹೇಳಿಕೆ- ಕತೆ- ಕವಿತೆ ಮತ್ತು ಭಾವನಾತ್ಮಕ ಘೋಷಣೆಗಳೊಂದಿಗೆ ಅವುಗಳಿಗೆ ತಕ್ಕ ಭಾವಚಿತ್ರಗಳನ್ನು ಅಳವಡಿಸಿದ ಇಪ್ಪತ್ತೆಂಟು ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.

|
ನಿಜಬೆಳಕು ಕಾಣಿಸುವುದಿಲ್ಲ, ಕನಸುಗಳನ್ನು ಕದಿಯಲಾಗಿದೆ, ಬದುಕು ಏಕಾಂಗಿಯಾಗಿದೆ, ಆದರೆ ಇದೇ ಕೊನೆಯಲ್ಲ’ – ಇದೊಂದು ಭಾವನಾತ್ಮಕ ಕವಿತೆ. “ಅಲ್ಲಿ ಸಣ್ಣ ಸಣ್ಣ ಪ್ರೀತಿಗಳಿವೆ, ಅಲ್ಲಿ ದೊಡ್ಡದಾದವು ಕೂಡ ಇವೆ, ಆದರೆ ಪ್ರತಿಯೊಬ್ಬರೂ ಅವುಗಳನ್ನು ಗುಣುಗುಣಿಸಲು ಹಾತೊರೆಯುತ್ತಿ¨ªಾರೆ’ – ಇದು ಇನ್ನೊಂದು ಹೇಳಿಕೆ. ಇವುಗಳಿಗೆ ಫೊಟೋಗ್ರಫಿ ಹೇಗಿರಬಹುದು? ಅವು ಈ ಭಾವಗಳನ್ನು ವಿಸ್ತರಿಸುವಂತಿವೆ. ಹೇಳಿಕೆ ಮತ್ತು ಭಾವಚಿತ್ರಗಳ ಸಂಯೋಜನೆಯ ಸೊಗಸನ್ನು ನೋಡಿಯೇ ಸವಿಯಬೇಕು.

Advertisement

ಶೀರ್ಷಿಕೆಗಳನ್ನು ದೊಡ್ಡ ಅಕ್ಷರಗಳಲ್ಲಿ ಮೂಡಿಸಲಾಗಿದೆ. ಅವು ಅರ್ಥಗರ್ಭಿತವಾಗಿಯೂ ಚಿತ್ರಗಳ ಮೌಲ್ಯವನ್ನು ಹೆಚ್ಚಿಸುವಂತೆಯೂ ಇವೆ. ನೋಡುವವರು ತಮ್ಮ ಭಾವಕ್ಕೆ ತಕ್ಕಂತೆ ಅವುಗಳನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಕೆಲವು ಶೀರ್ಷಿಕೆಗಳು ತುಂಬ ಆಕರ್ಷಕವಾಗಿವೆ. “ರಕ್ತವೇ ಅತಿದೊಡ್ಡ ಗುಟ್ಟು, ಬೆಂಕಿ ಕೂಡಾ!’ , “ಆಮೇಲೆ ಬಿರುಗಾಳಿ ಜೋರಾಗಿ ಬೀಸತೊಡಗಿತು’, ‘ನಗರದ ನಾದವನ್ನು ನಾನು ಆಲಿಸಬಲ್ಲೆ’, “ತೀರವನ್ನು ಮೆಚ್ಚದಿದ್ದರೆ ಆಳಸಾಗರದತ್ತ ತೆರಳು’ – ಇವು ಕಾವ್ಯಾತ್ಮಕವಾದ ಅರ್ಥಗರ್ಭಿತವಾದ ಕೆಲವು ಶೀರ್ಷಿಕೆಗಳು. ಪ್ರದರ್ಶನ ತುಂಬ ಇಂಥವೇ ತುಂಬಿವೆ. ನೋಡಲು ಕಣ್ಣುಗಳೆರಡು ಸಾಲವು ಎಂಬಂತಹ ಚಿತ್ರ ಮಾಲಿಕೆಗಳಿವು.

“… ಮತ್ತು ನೆನಪುಗಳು ಮಾಸಿದವು’ ಇದೊಂದು ಕಲಾಕೃತಿ. ಅದರ ವಿವರಣೆ ಹೀಗಿದೆ: ‘ ಅವರಿಬ್ಬರು ಪರಸ್ಪರ ನೋಡುತ್ತ ಕಲ್ಲಿನಂತೆ ಕುಳಿತಿದ್ದರು ಮತ್ತು ಕೊನೆಯಲ್ಲಿ ಮೌನ ಮುರಿದು ಆಕೆ ಮಾತಾಡಿದಳು: ನೀನು ಏನನ್ನು ತಿಳಿಯಬೇಕೆಂದಿರುವೆ, ಹೇಳು. ಎಷ್ಟೋ ಹೇಳುವುದಕ್ಕಿದೆ, ಆದರೆ ನೆನಪುಗಳು ಮಾಸಿ ಹೋಗಿವೆ!’ … ಆಕೆ ಮುಂದುವರಿಸುತ್ತಾಳೆ, “ಮತ್ತು ಏನೇನು ಹೇಳಬೇಕೆಂದಿರುವೆನೋ ಭಾವನೆಗಳ ಪೂರದಿಂದಾಗಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಾಂತವಾಗಿರುವೆನು!’ನೇಮಿರಾಜ ಶೆಟ್ಟಿಯವರ ಕಥೆ ಕವಿತೆ ಹೇಳಿಕೆ ಘೋಷಣೆಗಳಿಗೆ ತರನ್‌ ಬಮ್ರಾ ಅದ್ಭುತವಾದ ಫೊಟೋಗ್ರಫಿ ಮಾಡಿದ್ದಾರೆ. ರೂಪದರ್ಶಿಯಾಗಿ ಸುಪ್ರೀತ್‌ ಸಂಧು ಭಾವನಾತ್ಮಕ ನೋಟ – ನಿಲುವುಗಳನ್ನು ನೀಡಿ¨ªಾರೆ.

ಈ ಕಲಾಪ್ರದರ್ಶನದಲ್ಲಿದ್ದುದು “ಮತ್ತು ಇದು ನಮ್ಮ ನಿಮ್ಮೊಳಗೆ’ ಎಂಬ ಅದ್ಭುತ ಪುಸ್ತಕವೊಂದರ ಕೆಲವು ತುಣಿಕುಗಳು ಮಾತ್ರ. ದೆಹಲಿಯ ಘರಿ, ಗುಜರಾಥದ ಕಲಾಶಾಲೆ ಮೊದಲಾದೆಡೆ ಉನ್ನತ ಕಲಾವ್ಯಾಸಂಗ ಮಾಡಿ ದೆಹಲಿ, ಗುಲ್ಬರ್ಗ ಮೊದಲಾದೆಡೆ ಕಲಾಶಿಕ್ಷಕರಾಗಿ ದುಡಿದ, ಕಾಸರಗೋಡಿನವರಾದ ನೇಮಿರಾಜ ಶೆಟ್ಟಿ ಮಂಗಳೂರಿನ ಪ್ರೇಕ್ಷಕರಿಗಾಗಿ ಇದೇ ಮೊಟ್ಟಮೊದಲ ಬಾರಿಗೆ ಇಂತಹ ವಿಶಿಷ್ಟ ಕಲಾ ಪ್ರದರ್ಶನವೊಂದನ್ನು ಏರ್ಪಡಿಸಿ ಜನಮನ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ದೇಸೀಯ ಕಲೆಗಳ ಪುನರುತ್ಥಾನ ಧ್ಯೇಯವಾಗುಳ್ಳ “ಗ್ರಾಮವಿದ್ಯಾ’ ಎಂಬ ಸರಕಾರೇತರ ಸಂಸ್ಥೆಯ ಆಶ್ರಯದಲ್ಲಿ ಪಾರಂಪರಿಕ ಕಟ್ಟಡಗಳ ವಾಸ್ತುಶೈಲಿಯನ್ನು ಅಭ್ಯಸಿಸುವ, ಅವುಗಳ ಕಲಾಮಹತ್ವವನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವ ಉದ್ದೇಶದ “ಇನ್‌ ಟ್ಯಾಕ್‌’ ಎಂಬ ಹೆಸರಿನ ಮಂಗಳೂರು ಘಟಕ ಕೂಡ ಉದ್ಘಾಟನೆ ಆಯಿತು. ಇದರ ಸಂಚಾಲಕರಾಗಿ ವಾಸ್ತುತಜ್ಞ ಸುಭಾಷ್‌ ಚಂದ್ರ ಬಸು ಕೆಲಸ ಮಾಡುತ್ತಿದ್ದಾರೆ. “ಇನ್‌ ಟ್ಯಾಕ…’ ಒಂದು ಒಳ್ಳೆಯ ಪರಿಕಲ್ಪನೆ. 

  ವಿ| ಅರ್ಥಾ ಪೆರ್ಲ 

Advertisement
Advertisement

Udayavani is now on Telegram. Click here to join our channel and stay updated with the latest news.

Next