Advertisement

Kateelu: ವ್ಯರ್ಥ ಕಾಮಗಾರಿ, ಸರಕಾರಿ ಹಣ ಪೋಲು; ಪ್ರಯೋಜನಕ್ಕೆ ಬಾರದ ನೀರಿನ ಘಟಕ

03:05 PM Sep 03, 2024 | Team Udayavani |

ಕಟೀಲು: ಕಿನ್ನಿಗೋಳಿ ಪಟ್ಟಣ ಪಂಚಾಯುತ್‌ ವ್ಯಾಪ್ತಿಯ ಕಟೀಲು ಗಿಡಿಗೆರೆಯಲ್ಲಿ 2018-19ರಲ್ಲಿ ಕಟೀಲು ಗ್ರಾಮ ಪಂಚಾಯತ್‌ ಇದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿತ್ತು. ಉದ್ಘಾಟನೆಗೊಂಡು ಸರಿಯಾಗಿ ಒಂದು ತಿಂಗಳು ನೀರು ಬಂದಿಲ್ಲ. ಇತಂಹ ಯೋಜನೆಗಳು ಬೇಕಿತ್ತ ಎಂಬುವುದ ಗ್ರಾಮಸ್ಥರು ಪ್ರಶ್ನೆಯಾಗಿದೆ.

Advertisement

ಸರಕಾರ ಒಳ್ಳೆಯ ಉದ್ದೇಶದಿಂದ ಗ್ರಾಮೀಣ ಜನರಿಗೆ ಶುದ್ದ ಕುಡಿಯವ ನೀರು ಕೊಡುವ ಸಲುವಾಗಿ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೇ ಯೋಜನೆ ಅನುಷ್ಟಾನಗೊಂಡ ಬಳಿಕ ಅದರ ಸದ್ಬಳಕೆ, ಪ್ರಯೋಜನ ಆಗಿದೆಯೇ ಎಂದು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದಕ್ಕೆ ಗ್ರಾಮೀಣ ಮಟ್ಟದ ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ಹೊಣೆಗಾರರಾಗುತ್ತಾರೆ.

ಮನವಿ ಮಾಡಿದರೂ ಪ್ರಯೋಜನವಿಲ್ಲ
ಈ ಕುಡಿಯುವ ನೀರಿನ ಯೋಜನೆಯನ್ನು ವ್ಯವ್ಯಸ್ಥಿತವಾಗಿ ಅನುಷ್ಟಾನ ಮಾಡಿ ಜನರಿಗ ಉಪಯೋಗ ಆಗುವಂತೆ ಮಾಡಿ ಕೋಡಿ ಎಂದು ಸಂಬಂಧ ಪಟ್ಟ ಇಲಾಖೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಸಂಜೀವ ಮಡಿವಾಳ,  ಸಮಾಜ ಸೇವಕರು

ಘಟಕದ ಗಾಜಿನ ಪರದೆ ಹೊಡೆದು ಹೋಗಿದ್ದು ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದೆ. ಸುತ್ತಲು ಪೊದೆಗಳು ತುಂಬಿ ಕೊಂಡಿದ್ದು

ಬೀದಿ ನಾಯಿಗಳಿಗೆ, ಕೇರೆ ಹಾವು, ಇತರೆ ಪ್ರಾಣಿಗಳು ಅವಾಸ ಸ್ಥಾನವಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next