Advertisement
ಕಟೀಲು ಆಸುಪಾಸಿನ 20 ಗ್ರಾಮದ ಜನರಿಗಾಗಿ ನಿರ್ಮಾಣಗೊಂಡ 100ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ದುರ್ಗಾಸಂಜೀವನಿ ಮಣಿಪಾಲ್ ಆಸ್ಪತ್ರೆಯನ್ನು ಶ್ರೀಪಾದರು ಸೋಮವಾರ ಲೋಕಾರ್ಪಣೆಗೈದು ಮಣಿಪಾಲ ಆಸ್ಪತ್ರೆಗೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಆರೋಗ್ಯ ರಕ್ಷಣೆ ಅತೀ ಮುಖ್ಯ. ಕಟೀಲಿನ ಆಸ್ಪತ್ರೆಯ ನಿರ್ವಹಣೆಯನ್ನು ಮಣಿಪಾಲ ಸಂಸ್ಥೆ ನಡೆಸಲಿದೆ. ಈಗಾಗಲೇ ಐವರು ವೈದ್ಯರ ನೇಮಕವಾಗಿದ್ದು 3 ತಿಂಗಳೊಳಗೆ ಆಸ್ಪತ್ರೆ ಕಾರ್ಯಾರಂಭಿಸಲಿದೆ ಎಂದರು.
Related Articles
Advertisement
ಕೆಎಂಸಿಯ ನಿರ್ದೇಶಕ ಡಾ| ರಂಜನ್ ಪೈ, ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್, ಶ್ರೀಮತಿ ಸುರೇಶ್ ರಾವ್, ಡಾ| ಕಲ್ಲಡ್ಕ ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಕಟೀಲು ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಐಕಳ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮಾನಗುತ್ತಿಗೆದಾರ ದಿವಾಕರ ಕೋಟ್ಯಾನ್, ಆರ್ಕಿಟೆಕ್ಟ್ ಸಾಧನಾ ಕಾಮತ್, ಆಸ್ಪತ್ರೆಗೆ ಜಾಗ ನೀಡಿದ ಅಶೋಕ್ ಆಳ್ವ, ಕ್ಯಾಪ್ಟನ್ ಬೆಳ್ಳಿಯಪ್ಪ, ಕಿಶೋರ್ ಕಾಮತ್, ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ತಿಮ್ಮಪ್ಪ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಶ್ರಿ ಹರಿನಾರಾಯಣ ದಾಸ ಆಸ್ರಣ್ಣರು ಸ್ವಾಗತಿಸಿ, ಪತ್ರಕರ್ತ ಮನೋಹರ್ ಪ್ರಸಾದ್ ನಿರೂಪಿಸಿದರು.