Advertisement
ಮಳೆಗಾಲಕ್ಕೂ ಮೊದಲು ಪೂರ್ಣ?ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಯೋಜನೆಯಡಿ 9.12 ಕೋಟಿ ರೂ. ಬಳಸಿಕೊಂಡು 145.88 ಮೀ ಉದ್ದ, 10.50 ಮೀ. ಅಗಲದ ಸೇತುವೆಯ ನಿರ್ಮಾಣ ಭರದಿಂದ ನಡೆಯುತ್ತಿದೆ. ಮಳೆಗಾಲಕ್ಕೆ ಮೊದಲೇ ಅಂದರೆ ಮೇ ಕೊನೆಗೆ ಕಾಮಗಾರಿ ಪೂರ್ಣಗೊಳಿಸುವ ಇಂಗಿತವನ್ನು ಎಂಜಿನಿಯರ್‌ಗಳು ವ್ಯಕ್ತಪಡಿಸಿದ್ದಾರೆ. ಹೊಸ ಸೇತುವೆ ಘನ ವಾಹನಗಳ ಸಂಚಾರಕ್ಕೂ ತೆರೆದುಕೊಳ್ಳಲಿರುವುದರಿಂದ ಹೆಚ್ಚು ಪ್ರಯೋಜನಕಾರಿಯೂ ಆಗಲಿದೆ.
ಇನ್ನುಳಿದಂತೆ ಸೇತುವೆಯ ಇಕ್ಕೆಲಗಳಲ್ಲಿನ ಸಂಪರ್ಕ ರಸ್ತೆಯ ವಿಸ್ತರಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಯು ಉಡುಪಿ ಜಿಲ್ಲಾಧಿಕಾರಿ ಅವರ ಹಂತದಲ್ಲಿದ್ದು ಸರಕಾರದಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ. ಹೆದ್ದಾರಿಯಿಂದ ನೇರ ಸಂಪರ್ಕ
ಸೇತುವೆಯಾದರೆ ರಾ.ಹೆ.ಯಿಂದ ಕಟಪಾಡಿ-ಕೋಟೆ ಮಟ್ಟು ಭಾಗಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಮೀನುಗಾರರು, ಕೃಷಿಕರು, ಪ್ರವಾಸಿಗರಿಗೆ, ನಿತ್ಯ ಸಂಚಾರಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ವಾಣಿಜ್ಯಿಕ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಪೂರಕವಾಗಲಿದೆ.
Related Articles
ಕಟಪಾಡಿ ಹಾಗೂ ಕೋಟೆ-ಮಟ್ಟು ಗ್ರಾಮವು ನಗರೀಕರಣದತ್ತ ತೆರೆದುಕೊಳ್ಳಲು ನೂತನ ಮಟ್ಟು ಸೇತುವೆಯು ಬಹು ದೊಡ್ಡ ಕೊಡುಗೆಯಾಗಲಿದೆ .
-ಗಣೇಶ್ ಕುಮಾರ್ ಮಟ್ಟು, ಉಪಾಧ್ಯಕ್ಷ, ಕೋಟೆ ಗ್ರಾ.ಪಂ.
Advertisement
ಮೇ ಅಂತ್ಯಕ್ಕೆ ಪೂರ್ಣಪಾದಚಾರಿ ಮಾರ್ಗವನ್ನೂ ಹೊಂದಿರುವ ಈ ಸೇತುವೆಯ ನಿರ್ಮಾಣದ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಅನಂತರದಲ್ಲಿ ಸುಸಜ್ಜಿತ ಸೇತುವೆಯು ಸೂಕ್ತ ಸಂಪರ್ಕ ರಸ್ತೆಯೊಂದಿಗೆ ಸುರಕ್ಷಿತ ಸಂಚಾರಕ್ಕೆ ತೆರೆದುಕೊಳ್ಳಲಿದೆ .
– ಸಂಗಮೇಶ್ ಜಿ.ಆರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಕೆ.ಆರ್.ಡಿ.ಸಿ.ಎಲ್