Advertisement
ಇತ್ತೀಚೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ವರದಿ ಅನುಷ್ಠಾನದ ಕುರಿತು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಮಲೆನಾಡು ಜನ ಹಿತರಕ್ಷಣ ವೇದಿಕೆ ಸುಬ್ರಹ್ಮಣ್ಯದಿಂದ ಹೋರಾಟ ಪ್ರಾರಂಭಿಸಿದೆ.
Related Articles
ವರದಿ ಅನುಷ್ಠಾನಗೊಂಡರೆ ಜನರ ಸಂಪೂರ್ಣ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ. ಅಂತಹ ಭೂಮಿಗೆ ಯಾವುದೇ ಪರಿಹಾರ ಅಥವಾ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿಯ ಉಲ್ಲೇಖವಾಗಲಿ ವರದಿಯಲ್ಲಿ ಇಲ್ಲ. ವಸತಿ ಇತರ ಕಟ್ಟಡಗಳಿಗೂ ಪರಿಹಾರ ಘೋಷಿಸಿಲ್ಲ. ಈಗಾಗಲೇ ಅರಣ್ಯ ಹಾಗೂ ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ವಾಸಿಸುತ್ತಿರುವವರನ್ನೂ ಒಕ್ಕಲೆಬ್ಬಿಸಲಾಗುತ್ತದೆ. ಈಗಾಗಲೇ ಪಡೆದ ಭೂಮಿಯ ಹಕ್ಕುಪತ್ರಗಳು, ರೈತರ ಕೋವಿ ಪರವಾನಿಗೆ ರದ್ದುಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 48, ರಾಜ್ಯ ಹೆದ್ದಾರಿಗಳಾದ ಬಿಸಿಲೆ ಹಾಗೂ ಚಾರ್ಮಾಡಿ ಘಾಟಿ ರಸ್ತೆಗಳು ಹಾಗೂ ಮಂಗಳೂರು- ಬೆಂಗಳೂರು ರೈಲು ಮಾರ್ಗಗಳು ಯೋಜನೆಯ ನೀಲ ನಕಾಶೆಯಲ್ಲಿ ಒಳಪಡುವುದರಿಂದ ಭವಿಷ್ಯದಲ್ಲಿ ಇವೆಲ್ಲ ಮಾರ್ಗಗಳು ಮುಚ್ಚಲಿವೆ. ಲಕ್ಷಾಂತರ ಮಂದಿ ನಿರ್ಗತಿಕರಾಗಲಿದ್ದಾರೆ ಎನ್ನಲಾಗುತ್ತಿದೆ.
Advertisement
ಈ ಹಿಂದಿನ ಬಿಜೆಪಿ ಸರಕಾರವು ಸಮಿತಿ ರಚಿಸಿ ಕೇಂದ್ರ ಸರಕಾರಕ್ಕೆ ಕಸ್ತೂರಿ ವರದಿಯನ್ನು ಅನುಷ್ಠಾನ ಮಾಡಬಾರದು; ಮಾಡಿದರೂ ಜನಪರವಾದ ಹಲವು ಮಾರ್ಪಾಟುಗಳನ್ನು ಮಾಡಬೇಕು ಎಂದು ತಿಳಿಸಿತ್ತು. ಈಗ ನಾವು ಅದರ ಪ್ರತಿಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಕೊಡುತ್ತಿಲ್ಲ.ಯಾವುದೇ ಕ್ಷಣದಲ್ಲಿ ರಾಜ್ಯ ಸರಕಾರ ಕಸ್ತೂ¤ರಿ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬಹುದು ಎನ್ನುವ ಭೀತಿಯಿದ್ದು, ವರದಿಯನ್ನು ಕೈಬಿಡುವ ತನಕ ಹೋರಾಟ ನಿಲ್ಲದು.– ಕಿಶೋರ್ ಶಿರಾಡಿ,
ಸಂಚಾಲಕರು, ಮಲೆನಾಡು ಜನಹಿತ ರಕ್ಷಣ ವೇದಿಕೆ,
ದ.ಕ. ಜಿಲ್ಲೆ.