Advertisement

ಕಸ್ತೂರಿ ರಂಗನ್‌ ವರದಿ ಜಾರಿ ಅಸಾಧ್ಯ : ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಟಾರ್‌

09:13 AM Oct 20, 2020 | sudhir |

ಜೋಯಿಡಾ: ತಾಲೂಕಿನ ಬಹುತೇಕ ಪ್ರದೇಶಗಳು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 626 ಹಳ್ಳಿಗಳನ್ನು ಡಾ| ಕೆ. ಕಸ್ತೂರಿರಂಗನ್‌ ವರದಿ ಆಧರಿಸಿ, ಇಕೋಲೋಜಿಕಲಿ ಸೆನ್‌ಸಿಟೀವ್‌ ಏರಿಯಾಗೆ ಸೇರ್ಪಡೆ ಮಾಡುವುದನ್ನು ವಿರೋಧಿಸುವ ಕುರಿತು ರವಿವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಶಿವಾರಾಮ ಹೆಬ್ಟಾರ್‌ ಅವರೊಂದಿಗೆ ಕಾಳಿ ಬ್ರಿಗೇಡ್‌ ಮುಖ್ಯ ಸಂಚಾಲಕ ರವಿ ರೇಡ್ಕರ್‌ ಹಾಗೂ ಕಾರ್ಯಕರ್ತರು ಸಭೆ ನಡೆಸಿದರು.

Advertisement

ಕಾಳಿ ಬ್ರಿಗೇಡ್‌ ಸಂಘಟನೆ ಮತ್ತು ವ್ಯಾಪಾರಸ್ಥರ ಸಂಘ, ಜೋಯಿಡಾದ 25ಕ್ಕೂ ಹೆಚ್ಚು ಜನರು ಉಸ್ತುವಾರಿ ಸಚಿವ ಶಿವಾರಾಮ ಹೆಬ್ಟಾರ್‌ ಅವರೊಂದಿಗೆ ಯಲ್ಲಾಪುರದಲ್ಲಿ ಸಭೆ ನಡೆಸಿ, 27/02/2017 ಮತ್ತು 03/10/2018 ರ ಕರಡು ಅಧಿಸೂಚನೆ ಕುರಿತು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶ 28/09/2020 ರ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಇದರಿಂದ ಈ ಭಾಗದ ಬುಡಕಟ್ಟು ಮತ್ತು ಪಾರಂಪಾರಿಕ ಕೃಷಿ ಅವಲಂಭಿಸಿರುವ ರೈತರಿಗೆ ಆಗುವ ಸಮಸ್ಯೆ ಬಗ್ಗೆ ಕಾಳಿ ಬ್ರಿಗೇಡ್‌ ಮುಖ್ಯ ಸಂಚಾಲಕ ರವಿ ರೇಡ್ಕರ ವಿವರಿಸಿದರು. ಈ ಬಗ್ಗೆ ಮಾತನಾಡಿದ ಸಚಿವ ಹೆಬ್ಟಾರ್‌ ಎಲ್ಲಾ ಮಾಹಿತಿ ಪಡೆಯಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಲಾಗಿದ್ದು, ಕಸ್ತೂರಿರಂಗನ್‌ ವರದಿ ಜಾರಿ ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಹಿಂದಿನ ಎಲ್ಲಾ ಸರ್ಕಾರಗಳು ಇದೇ ಅಭಿಪ್ರಾಯ ಹೊಂದಿದ್ದು, ಜನರ ಹಿತ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕಸ್ತೂರಿರಂಗನ್‌ ವರದಿಯಲ್ಲಿ ಒಳಪಡುವ ಪ್ರದೇಶಗಳ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ, ಇದರಿಂದ ಜನರಿಗೆ ಆಗುವ ಕಷ್ಟಗಳ
ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮತ್ತೂಮ್ಮೆ ಚರ್ಚಿಸಲಾಗುವುದು ಎಂದರು. ಕಸ್ತೂರಿರಂಗನ್‌ ವರದಿ ಜಾರಿಯಿಂದ
ಜೋಯಿಡಾ ತಾಲೂಕಿನ ಮೇಲಾಗುವ ಪರಿಣಾಮಗಳ ಕುರಿತು ವಕೀಲ ಎಸ್‌.ಜಿ. ದೇಸಾಯಿ ಸಭೆಗೆ ಮಾಹಿತಿ ನೀಡಿ, ಸರ್ಕಾರ
ಈ ಬಗ್ಗೆ ಜನಪರವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಪತ್ರಿಕೆಗಳು ಸರ್ಕಾರ ಮತ್ತು ಜನಸಾಮಾನ್ಯರನ್ನು ಜಾಗೃತಿಗೊಳಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ವರದಿ ವಜಾಗೊಳಿಸಿ, ಇಲ್ಲವೆ ಇದರಿಂದ ಉ.ಕ. ಜಿಲ್ಲೆ ಅಥವಾ ಜೋಯಿಡಾ ತಾಲೂಕಿಗೆ ವಿನಾಯತಿ ನೀಡಿ. ಈ ಕುರಿತ ಇಲ್ಲಿಯ ವರೆಗಿನ ಅಧಿಸೂಚನೆಗಳನ್ನು ರದ್ದು ಮಾಡಿ ಮತ್ತು ಹೊಸ ಕಮೀಷನ್‌ ರಚಿಸಿ. ಒಂದು ವೇಳೆ ಇದೇ ಕಮಿಷನ್‌ ವರದಿ ಮತ್ತು
ಅಧಿಸೂಚನೆಗಳನ್ನು ಪರಿಗಣಿಸುವುದಾದರೆ, ಸಾರ್ವಜನಿಕರ ಅಹವಾಲು ಸಭೆ ಮೊದಲು ನಡೆಸಬೇಕು.

Advertisement

ಕಾಳಿ ಬ್ರಿಗೇಡ್‌ ಅಧ್ಯಕ್ಷ ಸತೀಶ ನಾಯ್ಕ, ಖಾನಾಪುರದ ನೇತಾಜಿ ದೇಸಾಯಿ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ನಾರಾಯಣ ಹೆಬ್ಟಾರ್‌, ಅಜೀತ್‌ ಟೆಂಗ್ಸೆ, ಉದಯ ದೇಸಾಯಿ, ಉಮೇಶ ವೇಳಿಪ, ಸುನೀಲ ದೇಸಾಯಿ, ಸಿಮಾಂವ್‌ ವೇಗಸ್‌, ಮೋಹನ ದೇಸಾಯಿ, ಸುಧಾಕರ ದೇಸಾಯಿ, ಮಂಜುನಾಥ ಭಟ್ಟ್, ರಾಜೇಶ ದೇಸಾಯಿ, ರತ್ನಾಕರ, ವಿನಾಯಕ ಕರಂಜೋಳಕರ, ರೂಪೇಶ ದೇಸಾಯಿ, ಸಮೀರ ಮುಜಾವರ, ಮುಂತಾದವರು ಹಾಗೂ ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.

ಕಾಳಿ ಬ್ರಿಗೇಡ ಸಂಘಟನೆ ಹಾಗೂ ವ್ಯಾಪಾರಸ್ಥರ ಸಂಘದ ವತಿಯಿಂದ ಹಳಿಯಾಳ-ಜೋಯಿಡಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಕ್ಲೃಕರ್‌ಗೆ ಕಸ್ತೂರಿರಂಗನ ವರದಿ ಜಾರಿ ಮಾಡದಂತೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next