ಮಣಿಪಾಲ: ಸರ್ಕಾರದ ಸೂಚನೆಯಂತೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಏಪ್ರಿಲ್ 25 ರಿಂದ ಜಾರಿಗೆ ಬರುವಂತೆ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಮಕ್ಕಳ ಲಸಿಕಾ ಚುಚ್ಚುಮದ್ದು ಚಿಕಿತ್ಸಾಲಯವನ್ನು ಆರಂಭಿಸುತ್ತಿದ್ದೇವೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಪ್ರಕಟಿಸಿದರು. “ಇದು ಬೆಳಿಗ್ಗೆ 8.30 ರಿಂದ ಅಪರಾಹ್ನ 1.00 ರವರೆಗೆ ತೆರೆದಿರುತ್ತದೆ. ಅಗತ್ಯವಿರುವವರು ಈ ಸೌಲಭ್ಯವನ್ನು ಪಡೆಯಬಹುದು ಎಂದು ಅವರು ಹೇಳಿದರು.
ಆಸ್ಪತ್ರೆಗೆ ಬರಲು ಮಗುವಿನೊಂದಿಗೆ ಒಬ್ಬ ಪೋಷಕರಿಗೆ ಮಾತ್ರ ಅವಕಾಶವಿದ್ದು ಮಗು ಮತ್ತು ಪೋಷಕರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಿರಬೇಕು . ಈ ಸೇವೆಯನ್ನು ಪಡೆಯಲು ಆಸ್ಪತ್ರೆಗೆ ಬರುವಾಗ ಆಸ್ಪತ್ರೆಗಳು ನೀಡಿರುವ “ಲಸಿಕಾ ಚಾರ್ಟ್” ಅಥವಾ ಸರಕಾರ ನೀಡಿರುವ “ತಾಯಿ ಕಾರ್ಡ”ನ್ನು ಖಡ್ಡಾಯವಾಗಿ ತರಬೇಕು. ಈ ಸೇವೆಯು ಪೂರ್ವ ನಿಗದಿಯೊಂದಿಗೆ (with appointment) ಮಾತ್ರ ಲಭ್ಯವಿದ್ದು, ಪೂರ್ವನಿಗದಿಗಾಗಿ (For appointment) ದೂರವಾಣಿ ಸಂಖ್ಯೆ 0820 2922209ಗೆ ಕರೆ ಮಾಡಲು ಸೂಚಿಸಲಾಗಿದೆ.