ಹುಣಸೂರು: ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದಲ್ಲಿ ಕಾಶಿ ವಿಶ್ವನಾಥ ಸ್ವಾಮಿ ಧಾಮ ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ಹುಣಸೂರಿನಲ್ಲಿ ಬಿಜೆಪಿ ನಗರ ಮಂಡಲ ಘಟಕದವತಿಯಿಂದ ನಗರದ ಬ್ರಾಹ್ಮಣ ಬೀದಿಯಲ್ಲಿನ ಚಂದ್ರಮೌಳೇಶ್ವರ ದೇವಾಲಯವನ್ನು ಸ್ವಚ್ಛಗೊಳಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರ ಸಭಾ ಸದಸ್ಯರು, ಮಂಡಲ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಪೌರಕಾರ್ಮಿಕರ ಸಹಕಾರದೊಂದಿಗೆ ದೇವಾಲಯದ ಒಳ-ಹೊರಗೆ ಶ್ರಮದಾನದ ಮೂಲಕ ಸಂಪೂರ್ಣ ಶುಚಿಗೊಳಿಸಿದರು.
ನಂತರ ಮಾತನಾಡಿದ ಗಣೇಶ್‌ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಆಶಯದ ಕಾಶಿ ವಿಶ್ವನಾಥಧಾಮ ಲೋಕಾರ್ಪಣೆ ಮಾಡಿದ ಈ ಸಂದರ್ಭದಲ್ಲಿ ಬೆಂಬಲವಾಗಿ ವಿಶೇಷ ಪೂಜೆ ನಡೆಸಲಾಯಿತು ಎಂದರು.
ಆರ್.ಎಸ್.ಎಸ್.ನ ರಘುವೀರ್ ಕಾಶಿ ವಿಶ್ವನಾಥ ಧಾಮದ ಚರಿತ್ರೆ ಕುರಿತು ಮಾತನಾಡಿ ಕಾಶಿ ವಿಶ್ವನಾಥ ಧಾಮ ದೇಶದ ಹೆಮ್ಮೆಯ ಸಂಕೇತ, ದೇಶದ ಪ್ರತೀಕವೂ ಹೌದು, ಮೋದಿಯವರು ಕಾಶಿಯಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ನಾವು ರೈಲಿನಲ್ಲಿ ವಾರಣಾಸಿವರೆಗೆ ತೆರಳಿ ನಂತರ ಅಲ್ಲಿಂದ ಗಂಗಾನದಿಯ ದೋಣಿ ಪ್ರವಾಸ ಮುಖಾಂತರ ದೇವಸ್ಥಾನ ತಲುಪಬಹುದು. ಇದು ಒಳ್ಳೆಯ ನಿಸರ್ಗ, ಶಾಂತಿ ಪ್ರವಾಸ ತಾಣವಾಗಿದೆ. ಪ್ರತಿಯೊಬ್ಬ ಹಿಂದೂಗಳು ಇಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಿರೆಂದು ಮನವಿ ಮಾಡಿದರು.
ದೇವಾಲಯದ ಪುರೋಹಿತ ಗುರುರಾಜ್ ಮಾತನಾಡಿ ಪುರಾತನ ದೇವಸ್ಥಾನವಾಗಿದ್ದು 300 ವರ್ಷದ ಹಿತಿಹಾಸ ಹೊಂದಿದೆ. ಈ ಚಂದ್ರಮೌಳೇಶ್ವರ ದೇವಾಲಯವು ಲಕ್ಷ್ಮಣತೀರ್ಥ ನದಿಯ ದಡದಲ್ಲಿದ್ದು, ಪಶ್ಚಿಮ ದಿಕ್ಕಿನಲ್ಲಿರುವುದು ವಿಶೇಷವೆಂದು ಬಣ್ಣಿಸಿದರು.
ಪೂಜಾ ಕಾರ್ಯಕ್ರಮದ ಅಂಗವಾಗಿ ಭಕ್ತರು ಸಂಕಲ್ಪತೊಟ್ಟರು. ಪ್ರಸಾದ ವಿನಿಯೋಗ ನಡೆಯಿತು. ಈ ಕಾರ್ಯದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಅನಿಲ್, ನಗರಸಭಾ ಸದಸ್ಯರಾದ ಹರೀಶ್, ವಿವೇಕ್, ಸಾಯಿನಾಥ್, ಅರುಣ್ ಚವ್ಹಾಣ್, ಉಮೇಶ್, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಚವ್ಹಾಣ್, ಮಾಜಿ ಅಧ್ಯಕ್ಷೆ ಕಮಲಪ್ರಕಾಶ್. ಮುಖಂಡರಾದ ವಿ.ಎನ್.ದಾಸ್, ಮಹದೇವ್ ಬಾಗಲ್, ಶ್ರೀನಿವಾಸ್, ರಮೇಶ್, ಗೋವಿಂದನಾಯ್ಕ, ರವಿ, ರವಿಕುಮಾರ್, ರವಿಶಂಕರ್, ನಟರಾಜನಾಯ್ಕ, ಮುದ್ದುರಾಮ, ಹೆಚ್.ಹೆಚ್.ರವಿ ಕುಮಾರ್, ಮೆಡಿಕಲ್‌ಕೃಷ್ಣ, ಮಧು, ಕುಮಾರ್, ಕೃಷ್ಣ, ನಂಜುಂಡ ಸ್ವಾಮಿ, ಮಾಸ್ಟರ್, ದೀಪು, ಮೀನಾಕ್ಷಿ ಕೃಷ್ಣಮೂರ್ತಿ, ರತ್ನ ಸೇರಿದಂತೆ ಅನೇಕರಿದ್ದರು.