Advertisement

ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರ ಬಂಧನ

10:53 AM May 25, 2022 | Team Udayavani |

ಶ್ರೀನಗರ: ದಕ್ಷಿಣ ಕಾಶ್ಮೀರದ ಅವಂತಿಪೋರಾ ಪ್ರದೇಶದಲ್ಲಿ ಮಂಗಳವಾರ (ಮೇ 24) ಜೈಶ್-ಎ-ಮೊಹಮ್ಮದ್ ನ ಎಂಟು ಉಗ್ರ ಸಹಚರರನ್ನು ಬಂಧಿಸಿದ್ದಾರೆ.

Advertisement

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಹಲವಾರು ಶಂಕಿತರನ್ನು ಬಂಧಿಸಲಾಗಿ, ಹೆಚ್ಚಿನ ಸುಳಿವುಗಳನ್ನು ಗಮನಿಸಿದ ಬಳಿಕ ಆವಂತಿಪೋರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಘಟಕವನ್ನು ಭೇದಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸಾಧ್ಯವಾಯಿತು.

ಪೊಲೀಸ್ ವಕ್ತಾರರ ಮಾಹಿತಿ ಪ್ರಕಾರ ಬಂಧಿತರು ಮುಷ್ತಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ದಾರ್, ಮಂಜೂರ್ ಅಹ್ಮದ್ ದಾರ್ ಫಯಾಜ್ ಅಹ್ಮದ್ ರಾಥರ್, ಶಬೀರ್ ಅಹ್ಮದ್ ರಾಥರ್ ಸೈದಾಬಾದ್ , ಮೊಹಮ್ಮದ್ ಲತೀಫ್ ಶೀರಾಜ್ ಅಹ್ಮದ್ ಅರಿಪಾಲ್ ಮತ್ತು ವಸೀಮ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಬಂಧಿತ ಉಗ್ರ ಸಹಚರರು ಇಬ್ಬರು ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ, ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next